• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇತಿಹಾಸ ಪುಟ ಸೇರಿದ ಅಟ್ಲಾಸ್ ಸೈಕಲ್: ಶಾಶ್ವತವಾಗಿ ಕಂಪನಿ ಕ್ಲೋಸ್

|

ಅಟ್ಲಾಸ್ ಸೈಕಲ್‌ ಅಂದ ಕೂಡಲೇ ಎಷ್ಟೋ ಜನರಿಗೆ ಬಾಲ್ಯದ ನೆನಪುಗಳು ಕಣ್ಣ ಮುಂದೆ ಬರುತ್ತದೆ. ಇದು ಸಾಮಾನ್ಯ ಬೈಸಿಕಲ್ ಆಗಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ದೇಶದ ಮೂಲೆ ಮೂಲೆಯನ್ನು ತಲುಪಿದ್ದ ಸೈಕಲ್ ಈ ಅಟ್ಲಾಸ್ ಇನ್ನು ನೆನಪು ಮಾತ್ರ.

   Atlas Cycles : ಇತಿಹಾಸ ಪುಟ ಸೇರಿದ ವಿಶ್ವಪ್ರಸಿದ್ಧ ಸೈಕಲ್ ಕಂಪನಿ 'ಅಟ್ಲಾಸ್‌' | Oneindia Kannada

   ದೆಹಲಿಯಿಂದ 40 ಕಿ.ಮೀ ದೂರದಲ್ಲಿರುವ ಹರಿಯಾಣದ ಸೋನೆಪತ್‌ನಲ್ಲಿರುವ ಸಾಧಾರಣ ಟಿನ್ ಶೆಡ್ ಒಂದರಲ್ಲಿ 1951 ರಲ್ಲಿ ಪ್ರಾರಂಭವಾದ ಈ ಕಂಪನಿ ಇದೀಗ ಇತಿಹಾಸದ ಪುಟ ಸೇರಿದೆ. ಕಂಪನಿಯು ತನ್ನ ಕೊನೆಯ ಕೈಗಾರಿಕಾ ಪ್ರದೇಶವನ್ನು ನವದೆಹಲಿಯ ಹೊರವಲದಲ್ಲಿದ್ದ ಸಾಹಿಬಾಬಾದ್‌ನಲ್ಲಿ ಜೂನ್ 3ರಂದು ಬಂದ್ ಮಾಡುವ ಮೂಲಕ ಅಟ್ಲಾಸ್ ಕಂಪನಿ ಶಾಶ್ವತವಾಗಿ ಮುಚ್ಚಿದಂತಾಗಿದೆ.

   ಹೀರೊವನ್ನ ಹಿಂದಿಕ್ಕಿದ ಬಜಾಜ್‌, ದೇಶದಲ್ಲಿ ಅತಿದೊಡ್ಡ ಬೈಕ್‌ ಉತ್ಪಾದಕ ಸಂಸ್ಥೆಯೆಂಬ ಹೆಗ್ಗಳಿಕೆ

   ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಕಂಪನಿ

   ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಕಂಪನಿ

   ನಮ್ಮ ದಿನನಿತ್ಯದ ಕಾರ್ಯಾಚರಣೆಗಳಿಗೆ ಹಣವನ್ನು ಹೊಂದಿಸುವಲ್ಲಿ ನಾವು ತೊಂದರೆ ಎದುರಿಸುತ್ತಿದ್ದೇವೆ. ಕಚ್ಚಾ ವಸ್ತುಗಳನ್ನು ಖರೀದಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಗಳಲ್ಲಿ, ಕಾರ್ಖಾನೆಯನ್ನು ನಿರ್ವಹಿಸುವ ಸ್ಥಿತಿಯಲ್ಲಿ ನಾವಿಲ್ಲ" ಎಂದು ಕಂಪನಿಯ ಗೇಟ್‌ಗಳ ಮೇಲೆ ಅಂಟಿಸಲಾದ ಸೂಚನಾ ಫಲಕ ಹೇಳಿದೆ.

   ಕೆಲಸಕ್ಕೆ ಬಂದ ನೌಕಕರಿಗೆ ಕಾದಿತ್ತು ಶಾಕ್

   ಕೆಲಸಕ್ಕೆ ಬಂದ ನೌಕಕರಿಗೆ ಕಾದಿತ್ತು ಶಾಕ್

   "ಜೂನ್ 1 ಮತ್ತು 2ಕ್ಕೆ ಲಾಕ್ ಡೌನ್ ನ ಬಳಿಕ ತೆರೆಯಲಿದೆ ಎಂಬ ಸಂತೋಷದೊಡನೆ ನಾವು ಬಂದಿದ್ದೆವು. ಆದರೆ ಕಾರ್ಖಾನೆ ಮುಚ್ಚುತ್ತದೆ ಎಂಬ ಬಗ್ಗೆ ಯಾವುದೇ ಸುಳಿವು ಇರಲಿಲ್ಲ "ಎಂದು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್ ಹೇಳಿದರು."ಬುಧವಾರ, ನಾವು ಗೇಟ್‌ಗಳಲ್ಲಿ ಒಟ್ಟುಗೂಡುತ್ತಿದ್ದಾಗ ಗೇಟ್‌ನಲ್ಲಿ ನೋಟಿಸ್ ತೋರಿಸಿದ ಕಾವಲುಗಾರರಿಂದ ನಮಗೆ ಪ್ರವೇಶ ನಿರಾಕರಿಸಲಾಯಿತು" ಎಂದು ಕುಮಾರ್ ಹೇಳಿದರು,

   ಒಟ್ಟು 431 ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದು, ಕಾರ್ಖಾನೆಯ ಹಠಾತ್ ಮುಚ್ಚುವಿಕೆಯ ವಿರುದ್ಧ ಕಾರ್ಮಿಕ ನ್ಯಾಯಾಲಯಕ್ಕೆ ತೆರಳಿದ್ದಾರೆ.

   ಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳ

   1951ರಲ್ಲಿ ಸ್ಥಾಪನೆಗೊಂಡಿದ್ದ ಅಟ್ಲಾಸ್

   1951ರಲ್ಲಿ ಸ್ಥಾಪನೆಗೊಂಡಿದ್ದ ಅಟ್ಲಾಸ್

   1951 ರಲ್ಲಿ ಜಾಂಕಿ ದಾಸ್ ಕಪೂರ್ ಅವರ ಪ್ರಯತ್ನದಿಂದ ಪ್ರಾರಂಬಗೊಂಡ ಅಟ್ಲಾಸ್ ಶೀಘ್ರವಾಗಿ ತನ್ನನ್ನು ತಾನು ಪ್ರಮುಖ ಬ್ರಾಂಡ್ ಆಗಿ ಸ್ಥಾಪಿಸಿಕೊಂಡಿತ್ತು. ಟಿನ್ ಶೆಡ್‌ನಿಂದ ಪ್ರಾರಂಭವಾಗಿ 12 ತಿಂಗಳಲ್ಲಿ 25 ಎಕರೆ ಕಾರ್ಖಾನೆ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿತು. ಕಾರ್ಯಾಚರಣೆಯ ಮೊದಲ ವರ್ಷದಲ್ಲಿ, 12,000 ಸೈಕಲ್ ಗಳು ಉತ್ಪಾದನೆಗೊಂಡಿದ್ದು ಮತ್ತೆಹಿಂತಿರುಗಿ ನೋಡಿರಲಿಲ್ಲ.

   ಅಟ್ಲಾಸ್ ತನ್ನ ಮೊದಲಕನ್ಸೈನ್ಮೆಂಟ್ ಅನ್ನು 1958 ರಲ್ಲಿ ವಿದೇಶಕ್ಕೆ ಕಳುಹಿಸಿತು. ಅಂದಿನಿಂದ ಇದು ಹಲವಾರು ದೇಶಗಳಿಗೆ ಸೈಕಲ್ ಗಳನ್ನು ರಫ್ತು ಮಾಡಿದೆ. ಇದು 1978 ರಲ್ಲಿ ಭಾರತದ ಮೊದಲ ರೇಸಿಂಗ್ ಸೈಕಲ್ ಅನ್ನು ಪರಿಚಯಿಸಿತು ಮತ್ತು 1982 ರಲ್ಲಿ ದೆಹಲಿ ಏಷ್ಯನ್ ಕ್ರೀಡಾಕೂಟಕ್ಕೆ ಸೈಕಲ್‌ಗಳ ಅಧಿಕೃತ ಪೂರೈಕೆದಾರನಾಗಿತ್ತು.

   2004ರಿಂದ ಶುರುವಾಯ್ತು ಕಂಪನಿಗೆ ತೊಂದರೆ

   2004ರಿಂದ ಶುರುವಾಯ್ತು ಕಂಪನಿಗೆ ತೊಂದರೆ

   2004 ರಲ್ಲಿ ಕಂಪನಿಗೆ ಕಷ್ಟದ ದಿನಗಳು ಪ್ರಾರಂಭವಾಗಿದ್ದವು. ಕಂಪನಿಯು ನಟ ಸುನಿಲ್ ಶೆಟ್ಟಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ತನ್ನ ಬ್ರಾಂಡ್ ರಾಯಭಾರಿಗಳಾಗಿ ಮಾಡಿದ್ದು ತೀವ್ರ ಸಂಘರ್ಷಕ್ಕೆ ನಾಂದಿ ಹಾಡಿತು. ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಕೂಡ ಈ ಸೈಕಲ್ ಬ್ರಾಂಡ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ ಬೇಡಿಕೆಯ ಕುಸಿತದಿಂದ 2014 ರಲ್ಲಿ ಮಧ್ಯಪ್ರದೇಶದ ಮಲನ್‌ಪುರದಲ್ಲಿ ತನ್ನ ಘಟಕವನ್ನು ಮುಚ್ಚಲು ಕಾರಣವಾಗಿತ್ತು. 2018 ರಲ್ಲಿ ಅದು ತನ್ನ ಸೋನೆಪತ್ ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

   2017 ರಲ್ಲಿ ಸ್ಥಾವರದಲ್ಲಿ ಕಾರ್ಮಿಕರ ಶಕ್ತಿ 800 ಆಗಿತ್ತು. ಆದರೆ "ಕಳೆದ ಒಂದೂವರೆ ವರ್ಷಗಳಲ್ಲಿ ಹಣಕಾಸಿನ ಪರಿಸ್ಥಿತಿ ಕೆಟ್ಟದ್ದರಿಂದ ಕೆಟ್ಟದಾಗುತ್ತಿದೆ, ಪ್ರಸ್ತುತ ನಾವು ಕೇವಲ 431 ಉದ್ಯೋಗಿಗಳನ್ನು ವಜಾಗೊಳಿಸಿದ್ದೇವೆ" ಎಂದು ಕಂಪನಿ ಹೇಳಿದೆ.

   ಇದೀಗ ಸಾಹಿಬಾಬಾದ್ ಕಾರ್ಖಾನೆಯನ್ನು ಮುಚ್ಚುವುದರೊಂದಿಗೆ ಅತ್ಯುತ್ತಮ ಬ್ರಾಂಡ್ ಒಂದು ಈಗ ನೆನಪು ಮಾತ್ರವಾಗಿ ಉಳಿದಿದೆ.

   English summary
   Atlas Cycles has shut its last manufacturing unit in Sahibabad, just outside the national capital, citing lack of funds to run the factory.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more