• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೀಕಾಪ್ರಹಾರಕ್ಕೆ ಕಾರಣವಾದ ನಟ ಅಥ್ಲೇಟ್ RSS ಹೇಳಿಕೆ

|

ನವ ದೆಹಲಿ, ಮಾರ್ಚ್ 12: ಖ್ಯಾತ ರೂಪದರ್ಶಿ-ನಟ-ಅಥ್ಲೀಟ್ ಮಿಲಿಂದ್ ಸೋಮನ್ ನಾನು ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಾರ್ಯಕರ್ತನಾಗಿನಾಗಿದ್ದೆ ಎಂದು ಹೇಳಿದ್ದಾರೆ. ಇದು ಅನೇಕರು ಮಿಲಿಂದ್ ವಿರುದ್ಧ ಟೀಕಾಪ್ರಹಾರ ನಡೆಸುವಂತೆ ಮಾಡಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.

ಶಿಸ್ತು ಬದ್ಧ ಜೀವನ ಪದ್ಧತಿಯನ್ನು ತಿಳಿದುಕೊಳ್ಳಲು ಆರ್‌ಎಸ್‌ಎಸ್‌ ಶಾಖೆಗಳು ನೆರವಾಗಲಿದೆ ಎಂದು ತಮ್ಮ ತಂದೆ ಯಾವಾಗಲೂ ನಂಬಿದ್ದರು ಎಂದು ಮಿಲಿಂದ್ ತಿಳಿಸಿದ್ದಾರೆ. ಜೊತೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿದ್ದ ಸ್ಥಳೀಯ ಶಾಖಾದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದುದ್ದಾಗಿ ಮಿಲಿಂದ್ ನೆನಪಿಸಿಕೊಂಡಿದ್ದಾರೆ.

ಬಾಲ್ಯದಲ್ಲಿ ಆರೆಸ್ಸೆಸ್‌ನಲ್ಲಿದ್ದೆ ಎಂದ ಬಾಲಿವುಡ್ ಹಿರಿಯ ನಟ: ಟ್ವಿಟ್ಟರ್‌ನಲ್ಲಿ ಟ್ರೆಂಡ್

'ಇಂದು ಎಲ್ಲ ವಿಧ್ವಂಸಕ ಕೃತ್ಯಗಳು, ಕೋಮುವಾದದ ಸಂಚುಗಳನ್ನು ಮಾಧ್ಯಮಗಳು ಆರ್‌ಎಸ್‌ಎಸ್‌ ಮೇಲೆ ಹೊರಿಸುತ್ತಿರುವುದನ್ನು ಕಂಡು ನಾನು ನಿಜಕ್ಕೂ ಆಘಾತಗೊಂಡಿದ್ದೇನೆ' ಎಂದು ಮಿಲಿಂದ್ ಹೇಳಿದ್ದಾರೆ.

ಆಗಿನ ವಾತಾವರಣ ಬೇರೆ ಇತ್ತು

ಆಗಿನ ವಾತಾವರಣ ಬೇರೆ ಇತ್ತು

'ಪ್ರತಿ ವಾರಾಂತ್ಯದ ಸಂಜೆ 6 ರಿಂದ 7 ಗಂಟೆಯವರೆಗೆ ನಮ್ಮ ಶಾಖೆಯಲ್ಲಿ ನಡೆಯುತ್ತಿದ್ದ ಘಟನೆಗಳು ಸಂಪೂರ್ಣ ಬೇರೆಯದ್ದೇ ಆಗಿತ್ತು. ನಮ್ಮ ಖಾಕಿ ಚಡ್ಡಿಗಳನ್ನು ಹಾಕಿಕೊಂಡು ಮೆರವಣಿಗೆ ಹೋಗುತ್ತಿದ್ದೆವು, ಸ್ವಲ್ಪ ಸಮಯ ಯೋಗ ಮಾಡುತ್ತಿದ್ದೆವು, ಯಾವುದೇ ಫ್ಯಾನ್ಸಿ ಸಾಧನಗಳಿಲ್ಲದೆ ಹೊರಾಂಗಣ ಜಿಮ್ನಾಸಿಸಂ ಮಾಡುತ್ತಿದ್ದೆವು, ಹಾಡುಗಳನ್ನು ಹಾಡುತ್ತಿದ್ದೆವು, ನಮಗೆ ಅರ್ಥವಾಗದೆ ಇದ್ದ ಸಂಸ್ಕೃತ ಮಂತ್ರಗಳನ್ನು ಪಠಿಸುತ್ತಿದ್ದೆವು, ಆಟಗಳನ್ನು ಆಡುತ್ತಿದ್ದೆವು ಮತ್ತು ನಮ್ಮಸಹವರ್ತಿಗಳೊಂದಿಗೆ ತಮಾಷೆ ಮಾಡಿ ಮಜಾ ಮಾಡುತ್ತಿದ್ದೆವು' ಎಂದು ನೆನಪಿಸಿಕೊಂಡಿದ್ದಾರೆ.

ದೃಢ ನಂಬಿಕೆ ಹೊಂದಿದ್ದರು

ದೃಢ ನಂಬಿಕೆ ಹೊಂದಿದ್ದರು

ಆಗಾಗ್ಗೆ ನಮ್ಮನ್ನು ಬಾಂಬೆಯ ಸುತ್ತಮುತ್ತಲಿನ ಬೆಟ್ಟಗಳಿಗೆ ಚಾರಣಗಳಿಗೆ ಅಥವಾ ರಾತ್ರಿ ಶಿಬಿರದ ಪ್ರವಾಸಗಳಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಅವುಗಳಿಗೆ ನಾವು ಕಾತರದಿಂದ ಕಾಯುತ್ತಿದ್ದೆವು. ಅವುಗಳನ್ನು ತುಂಬಾ ಎಂಜಾಯ್ ಮಾಡುತ್ತಿದ್ದೆವು. ಇಡೀ ಕಾರ್ಯಕ್ರಮಗಳನ್ನು ಅಷ್ಟೇನೂ ಮಹತ್ವಾಕಾಂಕ್ಷಿಗಳಲ್ಲದ, ಆದರೆ ಚೆನ್ನಾಗಿ ತಿಳಿದುಕೊಂಡಿರುವ ವಯಸ್ಕರು ನಿಭಾಯಿಸುತ್ತಿದ್ದರು. ಅವರು ಉತ್ತಮ ನಾಗರಿಕ ಯೋಧರನ್ನು ತಯಾರಿಸುತ್ತಿರುವುದರಲ್ಲಿ ದೃಢ ನಂಬಿಕೆ ಹೊಂದಿದ್ದರು.

ತೊಂದರೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗ

ತೊಂದರೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗ

ಹುಡುಗರನ್ನು ಗೌರವಯುತವಾಗಿ, ವಯಸ್ಕರ ಎದುರು ಉತ್ತಮವಾಗಿ ನಡೆದುಕೊಳ್ಳುವಂತೆ, ದೈಹಿಕ ಕ್ಷಮತೆಯ ಮಹತ್ವದ ಕುರಿತು ಚೆನ್ನಾಗಿ ತಿಳಿದಿರುವಂತೆ, ಅವರು ದೊಡ್ಡವರಾದ ಬಳಿಕ ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮ ಪ್ರಯತ್ನ ಹಾಕುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಇದು ದೇಶಿ ಸ್ಕೌಟ್ಸ್ ಚಳವಳಿಯಂತಿತ್ತು. ಇಲ್ಲಿ ತಮ್ಮ ಮಕ್ಕಳನ್ನು ಸೇರಿಸುವ ಪೋಷಕರಿಗೆ ಶಾಖಾ ಅವರಿಗೆ ಉತ್ತಮ ರೂಪ ನೀಡುವ ಹಾಗೂ ತೊಂದರೆಗಳಿಂದ ತಪ್ಪಿಸಿಕೊಳ್ಳುವ ಮತ್ತೊಂದು ಮಾರ್ಗವೂ ಆಗಿತ್ತು.

ಮಿಲಿಂದ್ ಟ್ವೀಟ್

ಮಿಲಿಂದ್ ಅವರ ಈ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆಯೇ ಆರೆಸ್ಸೆಸ್ ವಿರೋಧಿಗಳ ಕೆಂಗಣ್ಣಿಗೆ ಮಿಲಿಂದ್ ಗುರಿಯಾಗಿದ್ದಾರೆ. 50ರ ಗಡಿ ದಾಟಿದ್ದರೂ 'ಹಾಟ್' ಮಾಡೆಲ್ ಎಂದೇ ಕರೆಸಿಕೊಳ್ಳುತ್ತಿರುವ ಮಿಲಿಂದ್ ಒಬ್ಬ 'ಸಂಘಿ' ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿರುವ ಮಿಲಿಂದ್, 'ನನ್ನ ಹತ್ತನೇ ವಯಸ್ಸಿನಲ್ಲಿ ಪಡೆದ ಅನುಭವಕ್ಕಾಗಿ 54ನೇ ವಯಸ್ಸಿನಲ್ಲಿ ಟ್ರೆಂಡ್ ಆಗುತ್ತಿದ್ದೇನೆ. ಅದ ವಯಸ್ಸಿನಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದೆ ಎಂಬುದರ ಬಗ್ಗೆಯೂ ಈ ಟ್ರೆಂಡ್ ಆಗಬೇಕಿತ್ತು' ಎಂದು ಹೇಳಿದ್ದಾರೆ.

English summary
Actor, Athlete Milind Soman has shared his memory with RSS in his childhood. He reacted over the people reactions, trending at 54 for an experience i had at the age of 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more