ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ಅಟಲ್ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್

By Mahesh
|
Google Oneindia Kannada News

ನವದೆಹಲಿ, ಏ.11: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲವಾದ ಅಸ್ತ್ರ ಸಿಕ್ಕಿದೆ. ಮಾಜಿ ಪ್ರಧಾನಿ, ಭಾರತ ಕಂಡ ಶ್ರೇಷ್ಠ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಹೆಸರು ಬಳಸಿಕೊಂಡು ಮೋದಿ ವಿರುದ್ಧ ಕಾಂಗ್ರೆಸ್ ಅಭಿಯಾನ ಆರಂಭಿಸಿದೆ.

ಕಾಂಗ್ರೆಸ್ ಪಕ್ಷ ಬ್ಲಾಗ್, ವೆಬ್ ತಾಣಗಳಲ್ಲಿ ಕೆಂಪು ಬಣ್ಣದ ಹಿನ್ನೆಲೆ ಇರುವ ಚಿತ್ರದಲ್ಲಿ ವಾಜಪೇಯಿ ಭಾವಚಿತ್ರ ಹಾಕಿ, ಹಿಂದಿ ಭಾಷೆಯಲ್ಲಿ ಮೋದಿ ಅವರಿಗೆ ಬೋಧನೆ ಮಾಡುವ ಸಾಲುಗಳನ್ನು ಹಾಕಲಾಗಿದೆ.

'ಶ್ರೀಮೋದಿ ನೀವು ರಾಜಧರ್ಮ ಪಾಲಿಸಿಲ್ಲ. ಮೋದಿ ಅವರನ್ನು ಮುಖ್ಯಮಂತ್ರಿಯಾಗಿ ವಾಜಪೇಯಿ ಅವರು ಪರಿಗಣಿಸಿರಲಿಲ್ಲ, ನಿಮ್ಮ ಕೈಯಲ್ಲಿ ಹೇಗೆ ದೇಶದ ಭವಿಷ್ಯ ಸುರಕ್ಷಿತವಾಗಿರಲು ಸಾಧ್ಯ' ಎಂಬ ಅರ್ಥ ಬರುವ ಹೇಳಿಕೆ ಚಿತ್ರದಲ್ಲಿದೆ.

ಕಾಂಗ್ರೆಸ್ ಪಕ್ಷ ಈ ರೀತಿ ಅಟಲ್ ಜೀ ಅವರ ಚಿತ್ರ ಹಾಗೂ ಹೇಳಿಕೆ ಬಳಸಿಕೊಂಡಿರುವುದು ಸರಿಯಲ್ಲ. ಕೂಡಲೇ ತನ್ನ ಬ್ಲಾಗ್, ವೆಬ್ ಸೈಟ್ ಗಳಿಂದ ಚಿತ್ರವನ್ನು ತೆಗೆಯಬೇಕು ಎಂದು ಬಿಜೆಪಿ ಹೇಳಿದೆ.

ಏನಿದು ಹೇಳಿಕೆ?: 2002ರಲ್ಲಿ ನಡೆದ ಗೋಧ್ರೋತ್ತರ ಹತ್ಯಾಕಾಂಡದಿಂದ ವಾಜಪೇಯಿ ಅವರ ಮನಸ್ಸು ವ್ಯಾಕುಲಗೊಂಡಿತ್ತು. 2004ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನೆಲಕಚ್ಚಿದ ಮೇಲೆ ಸುದ್ದಿಗೋಷ್ಠಿಯೊಂದರಲ್ಲಿ ಗುಜರಾತ್ ಮುಖ್ಯಮಂತ್ರಿ ಮೋದಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡ ವಾಜಪೇಯಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದರು.

ಮೋದಿ ಅವರು ತಮ್ಮ ರಾಜಧರ್ಮ ಪಾಲಿಸಲಿ ಎಂದಿದ್ದರು. ಪಕ್ಕದಲ್ಲಿದ್ದ ಮೋದಿ ನಾನು ಪಾಲಿಸುತ್ತಿದ್ದೇನೆ ಎಂದರು. ಆದರೆ, ವಾಜಪೇಯಿ ಮತ್ತೊಮ್ಮೆ ರಾಜಧರ್ಮ ಪಾಲಿಸಿ ಎಂದು ಸೂಚಿಸಿದರು. ಈ ಮೂಲಕ ಗೋಧ್ರೋತ್ತರ ಹತ್ಯಾಕಾಂಡದ ಹೊಣೆ ಹೊರುವಂತೆ ಸೂಚಿಸಿದ್ದರು.

Atal Bihari Vajpayee is Congress' new weapon against Modi

ಆದರೆ, ಮುಂದೆ ನಡೆದಿದ್ದೇ ಬೇರೆ ಗೋವಾದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಮೋದಿ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಆದರೆ, ಪ್ರಮೋದ್ ಮಹಾಜನ್, ವೆಂಕಯ್ಯ ನಾಯ್ಡು ಹಾಗೂ ಮೋದಿ ಅವರ ಗುರು ಎಲ್ ಕೆ ಅಡ್ವಾಣಿ ಸೇರಿದಂತೆ ಹಿರಿಯ ನಾಯಕರು ಇದನ್ನು ವಿರೋಧಿಸಿದರು. ಪಕ್ಷದಲ್ಲಿ ತಮ್ಮ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂದು ಅರಿತ ವಾಜಪೇಯಿ ಅವರು ರಾಜಕೀಯದಿಂದ ದೂರವುಳಿದು ಮನಾಲಿಗೆ ತೆರಳಿದರು.

ವಿಶ್ರಾಂತಿ ವೇಳೆ ಮಾತನಾಡಿದ ವಾಜಪೇಯಿ, ಅಲ್ಲಿನ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈಗ ನಿಮ್ಮ ಮಾಮನ ಹತ್ತಿರ ಹಣವಿಲ್ಲ. ನಿಮಗೆ 1000 ರು ಮಾತ್ರ ನೀಡಬಲ್ಲೆ. ಮಾಮ ಇತ್ತೀಚೆಗೆ ನಿವೃತ್ತನಾಗಿದ್ದಾನೆ ಎಂದಿದ್ದರು. ಕೊನೆಗೆ ವಾಜಪೇಯಿ ರಾಜೀನಾಮೆ ನೋಡಲು ಮುಂದಾದಾಗ ಜಸ್ವಂತ್ ಸಿಂಗ್ ಹಾಗೂ ಪ್ರಮೋದ್ ಮಹಾಜನ್ ಅವರನ್ನು ರಾಜೀನಾಮೆ ನೀಡದಂತೆ ತಡೆದರು.

English summary
The Congress now has found a new weapon to target Narendra Modi - former prime minister and BJP founder Atal Bihari Vajpayee!. In a blog on the Congress website, the party first praises Vajpayee and then invokes his 2002 remark, urging Modi, the Gujarat chief minister, to "follow rajdharma (duty)" after the Gujarat riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X