ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಆಸ್ಪತ್ರೆ ಸೇರಿ 14 ದಿನವಾಯ್ತು, ಈಗ ಹೇಗಿದ್ದಾರವರು?

By Manjunatha
|
Google Oneindia Kannada News

ನವ ದೆಹಲಿ, ಜೂನ್ 25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಸ್ಪತ್ರೆ ಸೇರಿ 14 ದಿನಗಳಾಯಿತು, ಜೂನ್ 11 ರಂದು ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಮೊದಲೆರಡು ಅವರ ಆರೋಗ್ಯದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಏಮ್ಸ್ ಆಸ್ಪತ್ರೆ ನಂತರ ಮಾಹಿತಿಯನ್ನೇ ನೀಡಿಲ್ಲ ಹಾಗಿದ್ದರೆ ವಾಜಪೇಯಿ ಅವರ ಆರೋಗ್ಯ ಹೇಗಿದೆ ಎಂಬ ಕುತೂಹಲ ಎಲ್ಲರಲ್ಲಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿರ

ವಾಜಪೇಯಿ ಅವರ ಆರೋಗ್ಯ ಅವರ ಕುಟುಂಬಸ್ಥರ ಹಣೆಯಲ್ಲಿ ಚಿಂತೆಯ ಗೆರೆ ಮೂಡಿಸಿವೆ ಎನ್ನಲಾಗಿದೆ. ನಿನ್ನೆ ರಾತ್ರಿ ಪ್ರಧಾನಿ ಮೋದಿ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರು ಮತ್ತು ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚೆ ನಡೆಸಿದ್ದಾರೆ.

Atal Bihari Vajpayee has been in hospital for 14 days

ವಾಜಪೇಯಿ ಅವರು ಆಸ್ಪತ್ರೆ ಸೇರಿದ ದಿನ ಕೂಡ ಮೋದಿ ಅವರು ಆಸ್ಪತ್ರೆಗೆ ತೆರಳಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದ್ದರು. ನಿನ್ನೆ ಕೂಡ ಆಸ್ಪತ್ರೆಗೆ ತೆರಳಿದ್ದ ಅವರು ಸುಮಾರು 15-20 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು.

ವಾಜಪೇಯಿ ಆರೋಗ್ಯದಲ್ಲಿ ಏರುಪೇರು: ಏಮ್ಸ್‌ಗೆ ದಾಖಲು ವಾಜಪೇಯಿ ಆರೋಗ್ಯದಲ್ಲಿ ಏರುಪೇರು: ಏಮ್ಸ್‌ಗೆ ದಾಖಲು

93 ವರ್ಷ ವಯಸ್ಸಿನ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೂತ್ರನಾಳದ ಸಮಸ್ಯೆ ಎದುರಾದ ಕಾರಣ ಏಮ್ಸ್‌ಗೆ ದಾಖಲಿಸಲಾಗಿತ್ತು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿರುವ ಅವರು ದಶಕದ ಹಿಂದೆಯೇ ಸಕ್ರಿಯ ರಾಜಕಾರಣದಿಂದ ದೂರ ಸರಿದ್ದರು.

English summary
Former Prime minister Atal Bihari Vajpayee has been in the hospital for 14 days now. He was admitted to AIIMS on June 11. PM Modi visited hospital yesterday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X