• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಟಲ್ ಬಿಹಾರಿ ವಾಜಪೇಯಿ ಸ್ಮರಣೆ: ಯಾರು ಏನು ಹೇಳಿದರು?

By Manjunatha
|

ನವದೆಹಲಿ, ಆಗಸ್ಟ್ 20: ಅಟಲ್ ಬಿಹಾರಿ ವಾಜಪೇಯಿ ವಿಧಿ ವಶರಾಗಿ ನಾಲ್ಕು ದಿನದ ನಂತರ ಇಂದು ಅವರ ನೆನಪಿನಲ್ಲಿ ಪ್ರಾರ್ಥನಾ ಸಭೆ ನಡೆಸಲಾಯಿತು.

ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ಮೋದಿ, ಲಾಲ್ ಕೃಷ್ಣ ಅಡ್ವಾಣಿ, ಆರ್‌ಎಸ್‌ಎಸ್‌ನ ಮೋಹನ್ ಭಾಗವತ್, ಬಾಬಾ ರಾಮದೇವ್, ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್, ಇನ್ನೂ ಹಲವು ಖ್ಯಾತ ನಾಮರು ಪಾಲ್ಗೊಂಡು ಅಟಲ್‌ ಜೀ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಪಾಕಿಸ್ತಾನ ಮತ್ತು ಕಾಶ್ಮೀರದ ವಿಚಾರದಲ್ಲಿ ಏಕಾಂಗಿಯಾಗಿದ್ದ ವಾಜಪೇಯಿ

ಭಾವುಕ ಕಾರ್ಯಕ್ರಮದಲ್ಲಿ ಎಲ್ಲ ನಾಯಕರುಗಳು ತಮ್ಮ ದೃಷ್ಟಿಕೋನದಿಂದ ವಾಜಪೇಯಿ ಅವರನ್ನು ತಾವು ಗ್ರಹಿಸಿದ ಬಗೆ, ತಾವು ವಾಜಪೇಯಿ ಜೀ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡರಲ್ಲದೆ, ಅವರ ಮುತ್ಸದ್ಧಿತನ, ರಾಜಕೀಯ ಪಟುತ್ವ, ಕವಿ ಹೃದಯವನ್ನು ಮತ್ತೊಮ್ಮೆ ನೆನಸಿಕೊಂಡರು.

ಯಾವ ನಾಯಕರು ವಾಜಪೇಯಿ ಅವರ ಬಗ್ಗೆ ಏನು ಹೇಳಿದರು ತಿಳಿಯಲು ಮುಂದೆ ಕಣ್ಣಾಡಿಸಿ...

ಜೀವದ ಗೆಳೆಯನ ಬಗ್ಗೆ ಅಡ್ವಾಣಿ ಹೇಳಿದ್ದು ಇದು

ಜೀವದ ಗೆಳೆಯನ ಬಗ್ಗೆ ಅಡ್ವಾಣಿ ಹೇಳಿದ್ದು ಇದು

'ನನ್ನ ಹಾಗೂ ವಾಜಪೇಯಿ ಅವರ ಗೆಳೆತನ 65 ವರ್ಷ ಸಾಗಿ ಬಂತು ಎಂಬುದನ್ನು ನಾನು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ನಾವಿಬ್ಬರೂ ಜೊತೆಯಾಗಿ ಸಿನಿಮಾ ನೋಡಿದ್ದೇವೆ, ಪುಸ್ತಕಗಳನ್ನು ಓದಿದ್ದೇವೆ, ನನ್ನ ರಾಜಕೀಯ ಜೀವನದುದ್ದಕ್ಕೂ ಅವರು ನನಗೆ ಮಾರ್ಗದರ್ಶನ ಮಾಡಿದ್ದಾರೆ' ಎಂದು ಅಡ್ವಾಣಿ ಹಳೆಯ ದಿನಗಳನ್ನು ನೆನಪಿಸಿಕೊಂಡರು. 'ನಾನು ಹಲವು ಸಭೆಗಳಲ್ಲಿ ಮಾತನಾಡಿದ್ದೇನೆ ಆದರೆ ಈ ರೀತಿಯ ಒಂದು ಸಭೆಯಲ್ಲಿ ಮಾತನಾಡುತ್ತಿರುವುದು ಸಹಿಕೊಳ್ಳಲು ಆಗುತ್ತಿಲ್ಲ, ವಾಜಪೇಯಿ ಇಲ್ಲದ ಸಭೆ ಸಭೆಯಲ್ಲ' ಎಂದು ಅಡ್ವಾಣಿ ಭಾವುಕರಾದರು.

ಜೋಗ ಜಲಪಾತದಲ್ಲಿ ಮೈಮರೆತು ಹಾಡಿದ ಅಟಲ್ ಜೀ!

ಗುರುವಿನ ಬಗ್ಗೆ ಮೋದಿ ಹೀಗೆ ಹೇಳಿದರು

ಗುರುವಿನ ಬಗ್ಗೆ ಮೋದಿ ಹೀಗೆ ಹೇಳಿದರು

ಅಟಲ್ ಬಿಹಾರಿ ವಾಜಪೇಯಿ ಅವರು ಬಹುಕಾಲ ವಿರೋಧ ಪಕ್ಷದ ನಾಯಕರಾಗಿದ್ದರು ಆದರೆ ಎಂದೂ ತಮ್ಮ ಆದರ್ಶಗಳನ್ನು, ವಿಚಾರಗಳೊಂದಿಗೆ ರಾಜಿ ಆಗಲಿಲ್ಲ. ಅವರ ಜೀವನ ಭಾರತಕ್ಕಾಗಿ ಮೀಸಲಿಟ್ಟಿದ್ದರು, ಒಂದೇ ಪಕ್ಷವೇ ಎಲ್ಲೆಡೆ ಇದ್ದ ಸಂದರ್ಭದಲ್ಲಿ ಅವರು ರಾಜಕೀಯಕ್ಕೆ ಬಂದರು ಆದರೆ ಛಲ ಬಿಡದೆ ಹೋರಾಟ ಮಾಡಿ ಗೆದ್ದರು ಎಂದು ಮೋದಿ ಅವರು ಅಟಲ್ ಅವರನ್ನು ನೆನೆಸಿಕೊಂಡರು.

ವ್ಯಂಗ್ಯ-ವಿಡಂಬನೆಯ ಮಿಶ್ರಣ ವಾಜಪೇಯಿಯವರ ಹಾಸ್ಯೋಕ್ತಿ

ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಹೀಗಂದರು?

ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಹೀಗಂದರು?

ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿ, ವಾಜಪೇಯಿ ಅವರ ಜೀವನ ಹಾಗೂ ಮಾತು ಎರಡೂ ಒಂದೇ ಆಗಿತ್ತು, ಅವರು ನುಡಿದಂತೆ ನಡೆಯುತ್ತಿದ್ದರು, ಹತ್ತಿರದಿಂದ ನೋಡಿದವರಿಗೂ, ದೂರದಿಂದ ನೋಡಿದವರಿಗೂ ಅವರ ವ್ಯಕ್ತಿತ್ವ ಏಕ ರೀತಿಯಾಗಿ ಕಾಣುತ್ತಿತ್ತು ಹಾಗಾಗಿ ಅವರನ್ನು ಅಷ್ಟಾಗಿ ಜನ ನಂಬಿದರು ಎಂದು ಹೇಳಿದರು.

ವಾಜಪೇಯಿ ಭವಿಷ್ಯದ ಪ್ರಧಾನಿ ಎಂದಿದ್ದರು ಸ್ವತಃ ನೆಹರು!

ಕಾಂಗ್ರೆಸ್‌ನ ಗುಲಾಂ ನಬೀ ಆಜಾದ್ ಹೀಗಂದರು

ಕಾಂಗ್ರೆಸ್‌ನ ಗುಲಾಂ ನಬೀ ಆಜಾದ್ ಹೀಗಂದರು

ಕಾಂಗ್ರೆಸ್ ಪಕ್ಷದ ಮೇಲ್ಮನೆ ಸದಸ್ಯ ಗುಲಾಂ ನಬೀ ಆಜಾದ್ ಅವರು ವಾಜಪೇಯಿ ಅವರನ್ನು ನೆನಪು ಮಾಡಿಕೊಂಡರು. ತಾವು ಮಂತ್ರಿ ಆಗಿದ್ದಾಗ ವಾಜಪೇಯಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಆಗ ಅವರೊಂದಿಗೆ ನಾನು ನನ್ನ ಕಚೇರಿಯಲ್ಲಿ, ಅಥವಾ ಅವರ ಕಚೇರಿಯಲ್ಲಿ ಕೂತು ಚಹಾ ಕುಡಿಯುತ್ತಿದ್ದೆವು, ಒಟ್ಟಿಗೆ ಊಟ ಮಾಡುತ್ತಿದ್ದೆವು ಅವರು ಸ್ನೇಹಪರರಾಗಿದ್ದರು, ಆದರೆ ಈಗ ಅದೆಲ್ಲಾ ಸಾಧ್ಯವಿಲ್ಲವೇನೋ ಎಂದು ಪ್ರಸ್ತುತವನ್ನೂ ತೆರೆದಿಟ್ಟರು. ಅವರು ಸತ್ತ ಮೇಲೂ ನಮ್ಮೆಲ್ಲರನ್ನೂ ಒಂದೇ ವೇದಿಕೆ ಕೆಳಗೆ ಕೂರುವಂತೆ ಮಾಡಿದ್ದಾರೆ ನೋಡಿ ಎಂದು ವಾಜಪೇಯಿ ಅವರ ಪಕ್ಷ ಮೀರಿದ ಸ್ನೇಹದ ಬಗ್ಗೆ ಹೇಳಿದರು.

ಅವರು ಜನರ ಹೃದಯದಲ್ಲಿದ್ದರು: ಫಾರೂಕ್ ಅಬ್ದುಲ್ಲಾ

ಅವರು ಜನರ ಹೃದಯದಲ್ಲಿದ್ದರು: ಫಾರೂಕ್ ಅಬ್ದುಲ್ಲಾ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಮಾತನಾಡಿ, ಅವರು ವಜೀರ್ ಎ ಆಜಾಮ್ (ಸುಲ್ತಾನ) ಆಗಿರಲಿಲ್ಲ , ಅವರು ಭಾರತೀಯ ಹೃದಯದಲ್ಲಿದ್ದರು, ಅವರು ಹೃದಯವಂತರು, ಅವರಷ್ಟು ವಿಶಾಲ ಹೃದಯಿ ಇನ್ನೊಬ್ಬರಿರಲಿಲ್ಲ ಎಂದು ಅವರು ಹಳೆಯ ಗೆಳೆಯನನ್ನು ನೆನೆಸಿಕೊಂಡರು.

ಭಾರತಕ್ಕೆ ಗೌರವ ತಂದರು: ಬಾಬಾ ರಮ್‌ದೇವ್

ಭಾರತಕ್ಕೆ ಗೌರವ ತಂದರು: ಬಾಬಾ ರಮ್‌ದೇವ್

ಅಟಲ್‌ ಜೀ ಅವರು ಬದುಕಿದ್ದಷ್ಟೂ ದಿನ ಭಾರತಕ್ಕೆ ಗೌರವ ತಂದರು, ಅವರು ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿನುಗುವಂತೆ ಮಾಡಿದರು. ಅವರನ್ನು ದೇಶದ ಜನ ಯುಗ ಯುಗಳವರೆಗೆ ನೆನಪಿಸಿಕೊಳ್ಳುತ್ತಾರೆ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದರು.

ಕಾಶ್ಮೀರದ ಜನರ ಪಾಲಿಗೆ ಅವರು ದೇವರು

ಕಾಶ್ಮೀರದ ಜನರ ಪಾಲಿಗೆ ಅವರು ದೇವರು

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಮಾತನಾಡಿ, ಅಟಲ್‌ ಜೀ ಅವರು ಜಮ್ಮು ಕಾಶ್ಮೀರದ ಜನಕ್ಕೆ ದೇವರಿಗಿಂಲೂ ಕಡಿಮೆ ಆದವರಲ್ಲ, ಕಾಶ್ಮೀರದ ಜನರನ್ನು ನಂಬಿದ ಏಕೈಕ ರಾಜಕಾರಣಿ ಅವರೊಬ್ಬರೆ, ಅಂತೆಯೇ ಕಾಶ್ಮೀರದ ಜನ ಅವರನ್ನು ನಂಬಿದ್ದರು ಎಂದರು. ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿ, 'ನಾವು ಜಮ್ಮು ಕಾಶ್ಮೀರದ ನೆಲವನ್ನು ಉಗ್ರಗಾಮಿತ್ವಕ್ಕೆ ಬಳಸುವುದಿಲ್ಲ ಎಂದು ಮುಷರಫ್ ಬಾಯಿಂದ ಹೇಳಿಸಿದ್ದರು ಎಂದು ವಾಜಪೇಯಿ ಅವರನ್ನು ಮೆಹಬೂಬಾ ಮಫ್ತಿ ಹೊಗಳಿದರು.

ಅಟಲ್‌ ಜೀ ಜಾತ್ಯಾತೀತವಾದಿ: ಡೆರೆಕ್ ಓ ಬ್ರಿಯನ್

ಅಟಲ್‌ ಜೀ ಜಾತ್ಯಾತೀತವಾದಿ: ಡೆರೆಕ್ ಓ ಬ್ರಿಯನ್

ಟಿಎಂಸಿಯ ಮೇಲ್ಮನೆ ಸದಸ್ಯ ಡೆರೆಕ್ ಓ ಬ್ರಿಯನ್ ಮಾತನಾಡಿ, ಅಟಲ್ ಜೀ ಅವರು ಸಂಪೂರ್ಣ ಜಾತ್ಯಾತೀತವಾದಿಯಾಗಿದ್ದರು. ಮುಂಚೆ ಯಾರಾದರೂ ಅಗಲಿದಾಗ ರಿಪ್ (RIP-rest in peace) ಎಂದು ಬರೆಯುತ್ತಿದ್ದರು, ಆದರೆ ಆಗಸ್ಟ್‌ 16ರಂದು ಬರೆದ RIP ಯ ಅರ್ಥ 'Really Incredible Person' ಎಂದಾಗಿತ್ತು ಎಂದು ಅವರು ಹೇಳಿದರು.

ಪಕ್ಷ ಕಟ್ಟಿದ ನೇತಾರ: ಅಮಿತ್ ಶಾ

ಪಕ್ಷ ಕಟ್ಟಿದ ನೇತಾರ: ಅಮಿತ್ ಶಾ

ಬಿಜೆಪಿಯ ಮೊದಲ ರಾಷ್ಟ್ರಾಧ್ಯಕ್ಷ ಅಟಲ್‌ ಜೀ ಅವರ ಬಗ್ಗೆ ಈಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಾತನಾಡಿದರು. ಅವರು ಅಜಾತಶತೃ ಆಗಿದ್ದರ ಜೊತೆ-ಜೊತೆಗೆ ಕವಿ, ರಾಜಕಾರಣಿ, ಆಶಾವಾದಿ, ವಿದೇಶ ವ್ಯವಹಾರ ಪಾರಂಗತರೂ ಆಗಿದ್ದರು. ಅವರು ಬಿಜೆಪಿಯನ್ನು ಎಂದೂ ತನ್ನ ಸಿದ್ಧಾಂತದಿಂದ ಆಚೆಗೆ ಸರಿಯುವಂತೆ ಮಾಡಲಿಲ್ಲ ಎಂದರು.

English summary
In Delhi BJP organized Atal Bihari Vajapayee prayer meeting. In there many party leaders along with BJP's top leaders express there thoughts about Vajapayee ji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X