ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪಿಲ್‌ ಹುಟ್ಟುಹಬ್ಬದ ಹಿನ್ನೆಲೆ ವಿಪಕ್ಷಗಳಿಗೆ ಔತಣಕೂಟ: ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಚರ್ಚೆ

|
Google Oneindia Kannada News

ನವದೆಹಲಿ, ಆ.10: ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಸೋಮವಾರ ದೆಹಲಿಯ ತನ್ನ ನಿವಾಸದಲ್ಲಿ ವಿರೋಧ ಪಕ್ಷದ ನಾಯಕರ ಔತಣಕೂಟ ಏರ್ಪಡಿಸಿದ್ದರು. ಆಗಸ್ಟ್‌ 8 ರಂದು ಕಪಿಲ್‌ ಸಿಬಲ್‌ರ ಹುಟ್ಟು ಹಬ್ಬವಾದ ಹಿನ್ನೆಲೆ ಸೋಮವಾರ ಔತಣ ನೀಡಿದ್ದರೂ ಕೂಡಾ ಈ ಔತಣಕೂಟದೊಂದಿಗಿನ ಸಭೆಯು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಚರ್ಚಿಸಲು ಸೇರಿದಂತ ಕೇಂದ್ರವಾಗಿ ಮಾರ್ಪಟ್ಟಿತ್ತು ಎಂದು ವರದಿ ಉಲ್ಲೇಖ ಮಾಡಿದೆ.

ಗಾಂಧಿಯವರನ್ನು ತಮ್ಮ ನಾಯಕತ್ವದ ಹಿಡಿತದಿಂದ ಮುಕ್ತಗೊಳಿಸಿದರೆ ಮಾತ್ರ ಉತ್ತಮ ಎಂದು ಕೆಲವು ನಾಯಕರು ಸೂಚಿಸಿದ್ದಾರೆ. ಹಾಗೆಯೇ ಇದರಿಂದಾಗಿ ಕಾಂಗ್ರೆಸ್‌ನ ನವ ಯೌವನ ಪಡೆಯುವುದರ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕೂಟದಲ್ಲಿ ಇರಲಿಲ್ಲ ಎನ್ನಲಾಗಿದೆ.

ಮುಂಗಾರು ಅಧಿವೇಶನದ ಅಂತಿಮ ವಾರದಲ್ಲಿ ಕೇಂದ್ರಕ್ಕೆ ಸಂದೇಶ ನೀಡಿದ ಪ್ರತಿಪಕ್ಷಗಳುಮುಂಗಾರು ಅಧಿವೇಶನದ ಅಂತಿಮ ವಾರದಲ್ಲಿ ಕೇಂದ್ರಕ್ಕೆ ಸಂದೇಶ ನೀಡಿದ ಪ್ರತಿಪಕ್ಷಗಳು

ಕಳೆದ ವರ್ಷ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಸ್ಫೋಟಕ ಪತ್ರವೊಂದನ್ನು ಬರೆದ ಭಿನ್ನಮತೀಯರಲ್ಲಿ ಕಪಿಲ್‌ ಸಿಬಲ್ ಕೂಡ ಒಬ್ಬರು, ಈ ಪತ್ರದಲ್ಲಿ 2014 ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಪಕ್ಷದ ಕುಸಿತದ ಬಗ್ಗೆ ಭಿನ್ನಮತೀಯರು ಕಳವಳ ವ್ಯಕ್ತಪಡಿಸಿದ್ದರು. ದಿಗ್ಭ್ರಮೆಗೊಳಿಸುವ ಧಿಕ್ಕಾರದ ಕ್ರಿಯೆಯಂತೆ, ಕಾಂಗ್ರೆಸ್‌ ರಾಜಕೀಯ ವಲಯದಲ್ಲಿ ಈ ಪತ್ರ ಸಂಚಲನ ಮೂಡಿಸಿತ್ತು. "ಸಕ್ರಿಯ, ಗೋಚರ ನಾಯಕತ್ವ" ಮತ್ತು ಆಂತರಿಕ ಚುನಾವಣೆಗಳನ್ನು ಒಳಗೊಂಡಂತೆ ಸಂಘಟನಾತ್ಮಕ ಬದಲಾವಣೆಗಳನ್ನು ಈ ಪತ್ರದ ಮೂಲಕ ಒತ್ತಾಯಿಸಲಾಗಿತ್ತು.

 ಯಾರೆಲ್ಲಾ ಸಿಬಲ್‌ ಔತಣಕೂಟದಲ್ಲಿ ಭಾಗಿ?

ಯಾರೆಲ್ಲಾ ಸಿಬಲ್‌ ಔತಣಕೂಟದಲ್ಲಿ ಭಾಗಿ?

ಇನ್ನು ಈ ಕಪಿಲ್‌ ಸಿಬಲ್‌ರ ಹುಟ್ಟು ಹಬ್ಬದ ಔತಣಕೂಟದಲ್ಲಿದ್ದ ಆಹ್ವಾನಿತರು ಈ ಸ್ಫೋಟಕ ಪತ್ರವೊಂದನ್ನು ಬರೆದ ಭಿನ್ನಮತೀಯರು ಒಳಗೊಂಡಿದ್ದರು. ಪಿ ಚಿದಂಬರಂ, ಶಶಿ ತರೂರ್ ಮತ್ತು ಆನಂದ್ ಶರ್ಮಾ ಈ ಆಹ್ವಾನಿತರು. ಮೂವರೂ ಪಕ್ಷದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ನಾಯಕರಲ್ಲಿ ಸೇರಿದ್ದಾರೆ. ಇದನ್ನು ಹೊರತುಪಡಿಸಿ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಶಿವಸೇನೆಯ ಸಂಜಯ್ ರಾವತ್‌, ತೃಣಮೂಲದ ಡೆರೆಕ್ ಒಬ್ರಿಯಾನ್‌ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ ಸೇರಿದಂತೆ ವಿರೋಧ ಪಕ್ಷದ ನಾಯಕರು ಹಾಜರಿದ್ದರು. ಇನ್ನು ಮೊದಲನೇ ಬಾರಿಗೆ ಈ ಹಿಂದೆ ಬಿಜೆಪಿ ಮೈತ್ರಿಕೂಟವಾಗಿದ್ದ ಅಕಾಲಿದಳವನ್ನು ಕೂಡ ಸಭೆಗೆ ಆಹ್ವಾನ ಮಾಡಲಾಗಿತ್ತು. ಅಕಾಲಿದಳ ಪಕ್ಷದ ಹಿರಿಯ ನಾಯಕ ನರೇಶ್ ಗುಜ್ರಾಲ್ ಹಾಜರಿದ್ದರು. ನವೀನ್ ಪಟ್ನಾಯಕ್‌ರ ಬಿಜು ಜನತಾದಳದಿಂದ ಪಿನಾಕಿ ಮಿಶ್ರಾ ಕೂಡಾ ಇದ್ದರು ಎನ್ನಲಾಗಿದೆ.

 ಹುಟ್ಟುಹಬ್ಬದ ಔತಣಕೂಟದಲ್ಲಿ ಕೇಂದ್ರದ ವಿರುದ್ದ ಸಿಬಲ್‌ ವಾಗ್ದಾಳಿ

ಹುಟ್ಟುಹಬ್ಬದ ಔತಣಕೂಟದಲ್ಲಿ ಕೇಂದ್ರದ ವಿರುದ್ದ ಸಿಬಲ್‌ ವಾಗ್ದಾಳಿ

ಕಪಿಲ್‌ ಸಿಬಲ್‌ ತನ್ನ ಹುಟ್ಟುಹಬ್ಬದ ಔತಣಕೂಟದಲ್ಲಿ ನಡೆದ ಸಭೆಯಲ್ಲಿ ಮೊದಲು ಸರ್ಕಾರದ ವಿರುದ್ಧ ದಾಳಿಯನ್ನು ಆರಂಭಿಸಿದರು. ಪ್ರತಿ ಸಂಸ್ಥೆಯು ತನ್ನ ಅಧಿಕಾರಾವಧಿಯಲ್ಲಿ ಹೇಗೆ ನಾಶವಾಗಿದೆ ಎಂಬುದನ್ನು ವಿವರಿಸಿದರು. ಎಲ್ಲಾ ವಿರೋಧ ಪಕ್ಷಗಳು ಸ್ಪಷ್ಟವಾದ ಗಮನದಿಂದ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಕಾಂಗ್ರೆಸ್ ಯಾವಾಗ ಪ್ರಬಲವಾಗುತ್ತದೆಯೋ ಆಗ ಪ್ರತಿಪಕ್ಷಗಳು ಬಲಗೊಳ್ಳುತ್ತವೆ ಮತ್ತು ಪಕ್ಷವನ್ನು ಬಲಪಡಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

'ಸಾರ್ವಜನಿಕ ಜೀವನಕ್ಕೆ ತಾತ್ಕಾಲಿಕ ವಿರಾಮ': ಪಂಜಾಬ್‌ ಸಿಎಂ ಸಲಹೆಗಾರ ಸ್ಥಾನಕ್ಕೆ ಚಾಣಕ್ಯ ರಾಜೀನಾಮೆ'ಸಾರ್ವಜನಿಕ ಜೀವನಕ್ಕೆ ತಾತ್ಕಾಲಿಕ ವಿರಾಮ': ಪಂಜಾಬ್‌ ಸಿಎಂ ಸಲಹೆಗಾರ ಸ್ಥಾನಕ್ಕೆ ಚಾಣಕ್ಯ ರಾಜೀನಾಮೆ

 ಮತ್ತೆ ರಾಹುಲ್‌ ಗಾಂಧಿ ನಾಯಕತ್ವಕ್ಕೆ ಒತ್ತಾಯ

ಮತ್ತೆ ರಾಹುಲ್‌ ಗಾಂಧಿ ನಾಯಕತ್ವಕ್ಕೆ ಒತ್ತಾಯ

ಅಕಾಲಿದಳದ ನರೇಶ್ ಗುಜ್ರಾಲ್ ಗಾಂಧಿಯ ಮೇಲೆ ನೇರ ವಾಗ್ದಾಳಿ ನಡೆಸಿದರು. ಗಾಂಧಿ ಪಕ್ಷವನ್ನು ನಿಯಂತ್ರಿಸುವವರೆಗೂ ಪಕ್ಷವನ್ನು ಬಲಪಡಿಸುವುದು ತುಂಬಾ ಕಷ್ಟ ಎಂದು ಅಭಿಪ್ರಾಯಿಸಿದರು. ಪಕ್ಷದೊಳಗಿನ ನಾಯಕರು ಮತ್ತು ಇತರ ವಿರೋಧ ಪಕ್ಷಗಳು ಕಾಂಗ್ರೆಸ್ ಅನ್ನು ಬಲಪಡಿಸಲು, ನಾಯಕತ್ವದಲ್ಲಿ ಬದಲಾವಣೆಯನ್ನು ಹೊಂದಿರಬೇಕು ಎಂದು ಆಗಾಗ್ಗೆ ಸೂಚಿಸಿದರು. ಆದಾಗ್ಯೂ, ಅನೇಕ ನಾಯಕರು ರಾಹುಲ್ ಗಾಂಧಿಯವರ ಪುನರಾಗಮನಕ್ಕಾಗಿ ಒತ್ತಾಯಿಸುತ್ತಿದ್ದಾರೆ.

 ರಾಹುಲ್‌ ಪ್ರತಿಕ್ರಿಯಿಸಿದ್ದು ಹೀಗೆ..

ರಾಹುಲ್‌ ಪ್ರತಿಕ್ರಿಯಿಸಿದ್ದು ಹೀಗೆ..

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಈ ವಿಷಯದ ಬಗ್ಗೆ ರಾಹುಲ್‌ ಗಾಂಧಿಯನ್ನು ಪ್ರಶ್ನಿಸಿದಾಗ, "ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ಪಕ್ಷದ ಕಾರ್ಯಕರ್ತರು ನಿರ್ಧರಿಸಬೇಕು. ಪಕ್ಷವು ನಾನು ಏನು ಮಾಡಬೇಕೆಂದು ಬಯಸುತ್ತದೆಯೋ ಅದನ್ನು ನಾನು ಮಾಡುತ್ತೇನೆ," ಎಂದು ಹೇಳಿದರು. ಈ ವಿಷಯದ ಬಗ್ಗೆ ಚರ್ಚಿಸಲು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಕಾರ್ಯಕಾರಿ ಸಮಿತಿಯ ಹಲವು ಸಭೆಗಳ ಹೊರತಾಗಿಯೂ ಭಿನ್ನಮತೀಯರಿಗೆ ನೀಡಿದ ಆಂತರಿಕ ಚುನಾವಣೆಗಳು ಇನ್ನೂ ನಡೆದಿಲ್ಲ.

ಅಸ್ಸಾಂ ಕಾಂಗ್ರೆಸ್ ಶಾಸಕ ಸುಶಾಂತ ಪಕ್ಷ ತೊರೆದು ಬಿಜೆಪಿ ಸೇರಲು ಸಜ್ಜು: 'ಕೈ' ಪಾಳಯಕ್ಕೆ ಬಿತ್ತು ಮತ್ತೆ ಪೆಟ್ಟುಅಸ್ಸಾಂ ಕಾಂಗ್ರೆಸ್ ಶಾಸಕ ಸುಶಾಂತ ಪಕ್ಷ ತೊರೆದು ಬಿಜೆಪಿ ಸೇರಲು ಸಜ್ಜು: 'ಕೈ' ಪಾಳಯಕ್ಕೆ ಬಿತ್ತು ಮತ್ತೆ ಪೆಟ್ಟು

 ಬಿಜೆಪಿ ನಿರ್ಮೂಲನೆಗೆ ಕಾರ್ಯನಿರ್ವಹಿಸೋಣ ಎಂದ ಲಾಲೂ

ಬಿಜೆಪಿ ನಿರ್ಮೂಲನೆಗೆ ಕಾರ್ಯನಿರ್ವಹಿಸೋಣ ಎಂದ ಲಾಲೂ

ಇತ್ತೀಚಿನವರೆಗೂ ಜೈಲಿನಲ್ಲಿದ್ದ ಮತ್ತು ಅಪರೂಪವಾಗಿ ಕಾಣಿಸಿಕೊಂಡಿದ್ದ ಲಾಲೂ ಯಾದವ್, ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವಂತೆ ಮತ್ತು ಬಿಜೆಪಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದರು. ಹಾಗೆಯೇ ಬಿಜೆಪಿ ನಿರ್ಮೂಲನೆಗೆ ಕಾರ್ಯನಿರ್ವಹಿಸೋಣ ಎಂದು ಹೇಳಿದರು. ಕಾಂಗ್ರೆಸ್‌ನ ಚಿದಂಬರಂ, ಬಿಜೆಪಿಯ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ಮಾಡಲು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಒಂದು ಮಾತುಕತೆಗೆ ಬರಬೇಕು ಎಂದು ಸಲಹೆ ನೀಡಿದರು. ಆರಂಭವನ್ನು ಮಾಡಲಾಗಿದೆ ಮತ್ತು ಹೆಚ್ಚಿನ ರಾಜಕೀಯ ನಾಯಕರು ಬಿಜೆಪಿಯನ್ನು ಸೋಲಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೆಚ್ಚಿನ ವಿರೋಧ ಪಕ್ಷದ ನಾಯಕರಿಗೆ ಸೂಚಿಸಲಾಯಿತು. ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಖಿಲೇಶ್ ಯಾದವ್‌ಗೆ ಶುಭ ಹಾರೈಸಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
At Former Union Minister Kapil Sibal's birthday dinner meet for Opposition, Congress Leadership Change take center stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X