• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ: ಎಷ್ಟು ಚಳಿ ಇರಬಹುದು ನೀವೇ ಊಹಿಸಿಕೊಳ್ಳಿ

|

ನವದೆಹಲಿ,ಜನವರಿ 14:ದೆಹಲಿಯಲ್ಲಿ 2 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಜನವರಿ 1 ರಂದು 1.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ಇಂದು ದೆಹಲಿಯ ಸಫ್ದರ್‌ಜುಂಗ್‌ನಲ್ಲಿ 2 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಪಲಂನಲ್ಲಿ 4.9 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಜನವರಿ 17ರವರೆಗೂ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ

ದೆಹಲಿಯಲ್ಲಿ ವಾಯುಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಇಡೀ ದಿನ ಮಂಜುಕವಿದ ವಾತಾವರಣವಿದೆ. ಚಳಿಗಾಲಕ್ಕೂ ಮೊದಲಿನಿಂದಲೂ ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾಗಿದೆ. ಆದರೆ ಕೊರೊನಾ ಹಾಗೂ ವಾಯು ಮಾಲಿನ್ಯದಿಂದಾಗಿ ಚಳಿಗಾಲದಲ್ಲಿ ಉರಿರಾಟದ ತೊಂದರೆಗಳು, ಹೃದಯಾಘಾತ ಹೆಚ್ಚಾಗಿದೆ.

ದೆಹಲಿಯ ಆಸುಪಾಸಿನ ರಾಜ್ಯಗಳಾದ ಹರ್ಯಾಣ, ಪಂಜಾಬ್ ನಲ್ಲೂ ಚಳಿ ಮುಂದುವರೆದಿದೆ. ಹರ್ಯಾಣದಲ್ಲಿ 1.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ದಾಲ್ ಲೇಕ್ ಸೇರಿದಂತೆ ಇತರೆ ನದಿಗಳು ಹೆಪ್ಪುಗಟ್ಟಿವೆ.ಇನ್ನು ಹರ್ಯಾಣ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಚಳಿಯಲಲ್ಲಿಯೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶ್ರೀನಗರದಲ್ಲಿ ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಕಳೆದ 30 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಉಷ್ಣಾಂಶ ಇದಾಗಿದೆ.ಗುಲ್ಮಾರ್ಗ್‌ನಲ್ಲಿ ಮೈನಸ್ 7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಮಧ್ಯರಾತ್ರಿಯಷ್ಟೊತ್ತಿಗೆ ಮೈನಸ್ 10 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಲಿದೆ.

English summary
Residents of the national capital woke up to biting chill this morning after the winter temperature fell to 2 degree Celsius. The coldest day this season was on January 1 when the weather office recorded 1.1 degree Celsius.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X