ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಕಳೆದ 15 ವರ್ಷಗಳಲ್ಲಿ ಕಂಡಿರದ ಕನಿಷ್ಠ ತಾಪಮಾನ ದಾಖಲು

|
Google Oneindia Kannada News

ನವದೆಹಲಿ, ಜನವರಿ 01: ದೆಹಲಿಯಲ್ಲಿ ಕಳೆದ 15 ವರ್ಷಗಳಲ್ಲಿ ಕಂಡಿರದ ಕನಿಷ್ಠ ತಾಪಮಾನ ದಾಖಲಾಗಿದೆ.1.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ವರ್ಷ ಜನವರಿಯಲ್ಲಿ 2.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಈ ತಾಪಮಾನ ಸಫ್ತರ್‌ಜಂಗ್‌ನಲ್ಲಿ ದಾಖಲಾಗಿದೆ. 2006ರ ಜನವರಿ 8 ರಂದು 0.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.ನಾಳೆಯಿಂದ ಕನಿಷ್ಠ ಉಷ್ಣಾಂಶ ಹೆಚ್ಚಾಗಲು ಆರಂಭವಾಗುತ್ತದೆ. ಜನವರಿ 2 ರಿಂದ ಜನವರಿ 6ರವರೆಗೂ ಕನಿಷ್ಠ ಉಷ್ಣಾಂಶ ಹೆಚ್ಚಾಗಲಿದೆ. ಜನವರಿ 4-5ರ ಸಮಯದಲ್ಲಿ 8 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.

ಇಂದು ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಇಂದು ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ

ತುಂಬಾ ದಟ್ಟವಾದ ಮಂಜಿರುವುದರಿಂದ ಗೋಚರತೆ 0 ಮತ್ತು 50 ಮೀಟರ್ ನಡುವೆ ಇದೆ. ಗುರುವಾರ ದೆಹಲಿಯಲ್ಲಿ 3.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಡಿಸೆಂಬರ್ 18 ರಂದು 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿತ್ತು.

 At 1.1 Degrees, Delhi Records Coldest New Years Day In 15 Years

ದೆಹಹಲಿಯಲ್ಲಿ ದಾಖಲೆಯ ಚಳಿ ಅನುಭವವಾಗುತ್ತಿದೆ, ಅದೆಷ್ಟೆ ಬೆಚ್ಚಗಿನ ಬಟ್ಟೆ, ಜರ್ಕಿನ್ ಧರಿಸಿದರೂ ಕೊರೆವ ಚಳಿಗೆ ಸಾಕಾಗುತ್ತಿಲ್ಲ, ಮುಂದಿನ ಕೆಲವು ದಿನಗಳ ಕಾಲ ಮಂಜು ಆವರಿಸಿದ ವಾತಾವರಣ ಕೂಡ ಕಂಡುಬರಲಿದೆ.

English summary
Dense fog and numbing cold gripped Delhi on New Year's Day as the mercury plummeted to 1.1 degrees celsius, the lowest in 15 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X