ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೂಮಪಾನಿಗಳು, ಅಸ್ತಮಾ ರೋಗಿಗಳಲ್ಲಿ ಕೊವಿಡ್-19 ಸೋಂಕು ಕಡಿಮೆ!

|
Google Oneindia Kannada News

ನವದೆಹಲಿ, ಡಿಸೆಂಬರ್.02: ಕೊರೊನಾವೈರಸ್ ಸೋಂಕು ಯಾವ ವಯಸ್ಸಿನವರಿಗೆ, ಯಾವ ಆರೋಗ್ಯ ಸಮಸ್ಯೆ ಉಳ್ಳವರಿಗೆ ಹೆಚ್ಚು ಅಪಾಯಕಾರಿ ಎನ್ನುವುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಜಾಗತಿಕ ಮಟ್ಟದಲ್ಲಿ ಕೊವಿಡ್-19 ಸೋಂಕಿನ ಕುರಿತು ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಒಂದು ಕಡೆಗೆ ಕೊರೊನಾವೈರಸ್ ಲಸಿಕೆ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಗಳು ನಡೆಯುತ್ತಿದೆ. ಇದರ ನಡುವೆ ಅಸ್ತಮಾ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರಿಗೆ ಕೊರೊನಾವೈರಸ್ ಸೋಂಕು ತಗುಲುವ ಪ್ರಮಾಣ ತೀರಾ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.

ನಾವು ಇಡೀ ದೇಶಕ್ಕೆ ಕೊರೊನಾ ಲಸಿಕೆ ಒದಗಿಸುತ್ತೇವೆ ಎಂದು ಹೇಳಿಲ್ಲ: ಆರೋಗ್ಯ ಸಚಿವಾಲಯನಾವು ಇಡೀ ದೇಶಕ್ಕೆ ಕೊರೊನಾ ಲಸಿಕೆ ಒದಗಿಸುತ್ತೇವೆ ಎಂದು ಹೇಳಿಲ್ಲ: ಆರೋಗ್ಯ ಸಚಿವಾಲಯ

ಕಳೆದ ನವೆಂಬರ್, 24ರಂದು ಪ್ರಕಟವಾದ "ದಿ ಜರ್ನಲ್ ಆಫ್ ಅಲರ್ಜಿ ಅಂಡ್ ಕ್ಲಿನಿಕಲ್ ಇಮ್ಯುನೊಲಾಜಿ" ಅಧ್ಯಯನದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ನಾವು ಗಮನಿಸಿದಂತೆ ಅಸ್ತಮಾ ರೋಗಕ್ಕೆ ತುತ್ತಾಗಿರುವವರಲ್ಲಿ ಕೊವಿಡ್-19 ಸೋಂಕು ತಗಲುವಿಕೆ ಪ್ರಮಾಣವು ತೀರಾ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇಸ್ರೇಲ್ ಕೊವಿಡ್-19 ದತ್ತಾಂಶಗಳ ಅಧ್ಯಯನ

ಇಸ್ರೇಲ್ ಕೊವಿಡ್-19 ದತ್ತಾಂಶಗಳ ಅಧ್ಯಯನ

ಅಸ್ತಮಾ ರೋಗದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಕೊವಿಡ್-19 ಸೋಂಕು ತಗಲಿದವರ ಪ್ರಮಾಣ ತೀರಾ ಕಡಿಮೆಯಾಗಿದೆ. ಇಸ್ರೇಲ್ ರಾಷ್ಟ್ರೀಯ ಆರೋಗ್ಯ ನಿರ್ವಹಣಾ ಸಂಘವು ನೀಡಿರುವ ದತ್ತಾಂಶ ಬಳಸಿಕೊಂಡು ಅಧ್ಯಯನ ನಡೆಸಲಾಗಿದೆ. 2020ರ ಫೆಬ್ರವರಿಯಿಂದ ಜೂನ್ ವರೆಗೆ ದಾಖಲಾದ ಕೊವಿಡ್-19 ತಪಾಸಣೆ ಬಗ್ಗೆ ಎಲ್ಲ ರಾಷ್ಟ್ರೀಯ ಆರೋಗ್ಯ ನಿರ್ವಹಣಾ ಸಂಘಟನೆಗಳು ಅಂಕಿ-ಅಂಶಗಳನ್ನು ಇಟ್ಟುಕೊಂಡು ಅಧ್ಯಯನ ನಡೆಸಲಾಗಿದೆ.

ಶೇ.6.05ರಷ್ಟು ಜನರಿಗೆ ಮಾತ್ರ ಕೊವಿಡ್-19 ಸೋಂಕು

ಶೇ.6.05ರಷ್ಟು ಜನರಿಗೆ ಮಾತ್ರ ಕೊವಿಡ್-19 ಸೋಂಕು

ದೇಶದಲ್ಲಿ ಒಟ್ಟು 37469 ಜನರನ್ನು ಆರ್ ಟಿ- ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 2266 ಜನರಿಗೆ ಮಾತ್ರ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಅಂದರೆ ಒಟ್ಟು ತಪಾಸಣೆಯಲ್ಲಿ ಶೇ.6.05ರಷ್ಟು ಜನರಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿದೆ.

ಅಸ್ತಮಾ ರೋಗಿಗಳಲ್ಲಿ ಕೊವಿಡ್-19 ಸೋಂಕಿಲ್ಲ

ಅಸ್ತಮಾ ರೋಗಿಗಳಲ್ಲಿ ಕೊವಿಡ್-19 ಸೋಂಕಿಲ್ಲ

ಕೊರೊನಾವೈರಸ್ ಸೋಂಕು ನೆಗೆಟಿವ್ ಬಂದಿರುವ ಜನರಲ್ಲಿ ಅಸ್ತಮಾ ರೋಗಿಗಳೇ ಹೆಚ್ಚಾಗಿರುವ ಅಂಶ ಬೆಳಕಿಗೆ ಬಂದಿದೆ. 37469 ಜನರನ್ನು ಕೊವಿಡ್-19 ಸೋಂಕು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಈ ಪೈಕಿ 3388 ಜನರು ಅಸ್ತಮಾ ರೋಗಿಗಳಿಗೆ ಕೊವಿಡ್-19 ಸೋಂಕು ನೆಗೆಟವ್ ವರದಿ ಬಂದಿತ್ತು. ಕೇವಲ 153 ಜನರಿಗೆ ಮಾತ್ರ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಅಧ್ಯಯನದ ಕುರಿತು ಸಂಶೋಧಕರು ಹೇಳುವುದೇನು?

ಅಧ್ಯಯನದ ಕುರಿತು ಸಂಶೋಧಕರು ಹೇಳುವುದೇನು?

ಅಸ್ತಮಾ ರೋಗಿಗಗಳು ಹಲವು ಪ್ರಕರಣಗಳಲ್ಲಿ ಬೇರೆ ವೈರಸ್ ಗಳಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಸಂಶೋಧನೆಯ ಮುಖ್ಯಸ್ಥ ಈಗೆನ್ ಮರ್ಜೊನ್ ತಿಳಿಸಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಮೇಲೆ ಸಂಶೋಧನೆ ನಡೆಸಬೇಕಿದೆ. ಏಕೆಂದರೆ ಅಸ್ತಮಾದಿಂದ ಬಳಲುತ್ತಿರುವ ಹೊರ ರೋಗಿಗಳು ಆಸ್ಪತ್ರೆಗೆ ದಾಖಲಾದ ರೋಗಿಗಳಿಗಿಂತ ಭಿನ್ನವಾಗಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಧೂಮಪಾನಿಗಳಲ್ಲಿ ಕೊರೊನಾವೈರಸ್ ಸೋಂಕು ಕಡಿಮೆ

ಧೂಮಪಾನಿಗಳಲ್ಲಿ ಕೊರೊನಾವೈರಸ್ ಸೋಂಕು ಕಡಿಮೆ

ಅಸ್ತಮಾ ರೋಗಿಗಳಲ್ಲಿ ಕೊರೊನಾವೈರಸ್ ಸೋಂಕು ಕಡಿಮೆ ಎಂಬುದು ಒಂದು ವರದಿಯಾಗಿದೆ. ಇದರ ನಡುವೆ ಧೂಮಪಾನ ಮಾಡುವವರಲ್ಲಿ ಕೊರೊನಾವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಕೊವಿಡ್-19 ನೆಗೆಟಿವ್ ವರದಿಯನ್ನು ಹೊಂದಿರುವ ಅತಿಹೆಚ್ಚು ಜನರು ಧೂಮಪಾನ ಮಾಡುವವರೇ ಆಗಿದ್ದಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

English summary
Asthma Patients May Be Less Likely To Contract Covid-19, Reveals Study. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X