• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತದಾನ: ಕಾಶ್ಮೀರ - ಶೇ. 72.3, ಜಾರ್ಖಂಡ್‌ - ಶೇ. 61.92

By Kiran B Hegde
|

ನವದೆಹಲಿ, ನ. 25: ನಕ್ಸಲೀಯರ ದಾಳಿಯಿಂದ ನಲುಗಿರುವ ಜಾರ್ಖಂಡ್ ಹಾಗೂ ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗಿರುವ ಕಾಶ್ಮೀರದಲ್ಲಿ ವಿಧಾನಸಭೆಗೆ ಮಂಗಳವಾರ ನಡೆದ ಪ್ರಥಮ ಹಂತದ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಅತ್ಯುತ್ತಮವಾಗಿದೆ.

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ 15 ಕ್ಷೇತ್ರಗಳಲ್ಲಿ ಶೇ. 72.3ರಷ್ಟು ಮತದಾನವಾಗಿದೆ. ಪ್ರತ್ಯೇಕವಾದಿಗಳು ಚುನಾವಣೆ ಬಹಿಷ್ಕರಿಸಿದ್ದರೂ ಇದು ಹಿಂದಿನ ಚುನಾವಣೆಗಿಂತ ಶೇ. 9ರಷ್ಟು ಹೆಚ್ಚು ಎಂಬುದು ಗಮನಾರ್ಹ. ಇಲ್ಲಿ 7 ಸಚಿವರು ಸೇರಿದಂತೆ 12 ಹಾಲಿ ಶಾಸಕರ ಸಹಿತ 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ. [ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್ ಚುನಾವಣೆ ವೇಳಾಪಟ್ಟಿ]

ಸಂಜೆ 4 ಗಂಟೆಗೇ ಚುನಾವಣೆ ಮುಕ್ತಾಯಗೊಳ್ಳಬೇಕೆಂದು ಸೂಚಿಸಿದ್ದರೂ ಕೆಲವೆಡೆ ಮುಂದುವರಿಯುತ್ತಿದ್ದುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಶೇಕಡಾವಾರು ಮತದಾನ ಇನ್ನೂ 2-3ರಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಉಪ ಚುನಾವಣಾ ಆಯುಕ್ತ ವಿನೋದ ಜುಟ್ಶಿ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮೊದಲ ಹಂತವು ಶಾಂತಿಯುತವಾಗಿ ಮುಗಿದಿದೆ. ಇದು ಶೇ. 100ರಷ್ಟು ದೋಷರಹಿತ ಚುನಾವಣೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಚಿತ್ರಗಳಲ್ಲಿ ಜಮ್ಮು ಕಾಶ್ಮೀರ ಚುನಾವಣೆ]

ಪ್ರತ್ಯೇಕತಾವಾದಿಗಳಾದ ಹುರಿಯತ್ ಕಾನ್ಫರೆನ್ಸ್ ಹಾಗೂ ಜೆಕೆಎಲ್‌ಎಫ್ ಸಂಘಟನೆಗಳು ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದ್ದವು. ಆದರೂ ಮತದಾನದ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿರುವುದರಿಂದ ಪ್ರತ್ಯೇಕತಾವಾದಿಗಳಿಗೆ ಮುಖಭಂಗವಾದಂತಾಗಿದೆ.

ಜಾರ್ಖಂಡ್: ಈ ರಾಜ್ಯದ 13 ಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 61.92 ರಷ್ಟು ಮತದಾನವಾಗಿದೆ. ಕೆಲವೆಡೆ ಮತಯಂತ್ರ ಹಾನಿ ಸಂಭವಿಸಿದ್ದು ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮತದಾನದ ಪ್ರಮಾಣ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಚುನಾವಣೆ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. [ಕಾಶ್ಮೀರಿ ನಿರಾಶ್ರಿತರ ಸಮಸ್ಯೆ ಬಗೆಹರಿಸ್ತೇವೆ]

ಚುನಾವಣೆ ನಡೆದ ಹೆಚ್ಚಿನವು ದಲಿತ ಮೀಸಲು ಕ್ಷೇತ್ರಗಳಾಗಿದ್ದವು. 191 ಹಾಗೂ 192ನೇ ಸಂಖ್ಯೆಯ ಚುನಾವಣೆ ಬೂತ್‌ನಲ್ಲಿ ಮತಯಂತ್ರ ಹಾನಿಗೊಳಗಾಗಿದ್ದವು. ಈ ಹಿನ್ನೆಲೆಯಲ್ಲಿ ಇಲ್ಲಿ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

English summary
Amidst possible Maoist attacks on politicians in Jharkhand and militant groups poll boycott call in Jammu and Kashmir, voting has been done for the first phase assembly elections in both states. Jammu and Kashmir makes history as voting turned out 72.3%. Jarkhand proved fearless as voting turned out 61.92%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X