ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯುಸಿ ಪಾಸಾದ ವಿದ್ಯಾರ್ಥಿನಿಯರಿಗೆ ಸ್ಕೂಟರ್ ಉಚಿತ!

|
Google Oneindia Kannada News

ದೀಸ್ ಪುರ್, ಆಗಸ್ಟ್.19: ಅಸ್ಸಾಂನಲ್ಲಿ ಉನ್ನತ ಮಾಧ್ಯಮಿಕ ಅಂತಿಮ ಪರೀಕ್ಷೆ(ಪಿಯುಸಿ)ಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ 22,000 ವಿದ್ಯಾರ್ಥಿನಿಯರಿಗೆ ಉಚಿತವಾಗಿ ದ್ವಿಚಕ್ರ ವಾಹನಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.

ಜನತಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಮತ್ತು ಶಿಕ್ಷಣ ಸಚಿವ ಹೀಮಂತ್ ಬಿಸ್ವಾ ಸರ್ಮಾ ಈ ಬಗ್ಗೆ ತಿಳಿಸಿದ್ದಾರೆ. ಮೊದಲಿಗೆ ವಿದ್ಯುತ್ ಚಾಲಿತ ಸ್ಕೂಟರ್ ನೀಡುವ ಕುರಿತು ತೀರ್ಮಾನಿಸಲಾಗಿತ್ತು.

ಮಕ್ಕಳ ಶಿಕ್ಷಣಕ್ಕಾಗಿ ಹಸು ಮಾರಿ ಸ್ಮಾರ್ಟ್‌ಫೋನ್ ಕೊಡಿಸಿದ ಬಡ ವ್ಯಕ್ತಿಮಕ್ಕಳ ಶಿಕ್ಷಣಕ್ಕಾಗಿ ಹಸು ಮಾರಿ ಸ್ಮಾರ್ಟ್‌ಫೋನ್ ಕೊಡಿಸಿದ ಬಡ ವ್ಯಕ್ತಿ

ರಾಜ್ಯದಲ್ಲಿ ಪ್ರತಿನಿತ್ಯ ಸ್ಕೂಟರ್ ಗಳನ್ನು ಚಾರ್ಜ್ ಮಾಡುವುದಕ್ಕೆ ಸಮಯ ಸಾಕಾಗುವುದಿಲ್ಲ. ಅಲ್ಲದೇ ಒಂದು ಬಾರಿ ಚಾರ್ಜ್ ಮಾಡಿದ ಸ್ಕೂಟರ್ ನಲ್ಲಿ ಕೇವಲ 30 ಕಿಲೋ ಮೀಟರ್ ಸಂಚರಿಸುವುದಕ್ಕಷ್ಟೇ ಸಾಧ್ಯವಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೆಟ್ರೋಲ್ ಚಾಲಿತ ಸ್ಕೂಟರ್ ನೀಡುವುದಾಗಿ ತಿಳಿಸಿದರು.

Assam Govt Gifts Scooters To 22,000 Girls Who Secured 1st Division In 12th Boards

ವಿದ್ಯಾರ್ಥಿನಿಯರ ಆಯ್ಕೆಗೆ ಬಿಟ್ಟ ಸರ್ಕಾರ:

ವಿದ್ಯುತ್ ಚಾಲಿತ ಅಥವಾ ಪೆಟ್ರೋಲ್ ಚಾಲಿತ ಸ್ಕೂಟರ್ ಬೇಕೇ ಎನ್ನುವುದರ ಬಗ್ಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಬಹುದು. ಒಂದು ವೇಳೆ ವಿದ್ಯಾರ್ಥಿನಿಯರು ವಿದ್ಯುತ್ ಚಾಲಿತ ಸ್ಕೂಟರ್ ಗಾಗಿ ಮನವಿ ಮಾಡಿದ್ದಲ್ಲಿ ಅದನ್ನೇ ವಿತರಿಸಲಾಗುತ್ತದೆ. ಅಸ್ಸಾಂ ಸರ್ಕಾರವು ಅದಕ್ಕಾಗಿ sebaonline.org ವೆಬ್ ಸೈಟ್ ತೆರೆಯಲಾಗಿದೆ. ಅದರಲ್ಲಿ ವಿದ್ಯಾರ್ಥಿನಿಯರು ವಿದ್ಯುತ್ ಚಾಲಿತ ಸ್ಕೂಟರ್ ಬೇಕಿದ್ದಲ್ಲಿ ಮನವಿ ಸಲ್ಲಿಸಬಹುದು. ಯಾವುದೇ ರೀತಿ ಮನವಿ ಸಲ್ಲಿಸದ ವಿದ್ಯಾರ್ಥಿನಿಯರಿಗೆ ಪೆಟ್ರೋಲ್ ಚಾಲಿತ ಸ್ಕೂಟರ್ ಗಳನ್ನೇ ನೀಡಲಾಗುತ್ತದೆ ಎಂದು ತಿಳಿಸಿದರು.

ಮೂರು ವರ್ಷಗಳವರೆಗೂ ಮಾರಾಟಕ್ಕೆ ನಿರ್ಬಂಧ:

ಸರ್ಕಾರದಿಂದ ಪಡೆದುಕೊಂಡ ಸ್ಕೂಟರ್ ಗಳ ನೋಂದಣಿ ವೆಚ್ಚವನ್ನು ವಿದ್ಯಾರ್ಥಿನಿಯರೇ ಭರಿಸಬೇಕು. ಇದರ ಜೊತೆಗೆ ಸ್ಕೂಟರ್ ಬಳಸಲಾಗುತ್ತಿದೆಯೇ ಎನ್ನುವುದರ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತದೆ. ಸರ್ಕಾರದಿಂದ ಉಚಿತವಾಗಿ ಪಡೆದ ಸ್ಕೂಟರ್ ಗಳನ್ನು ಯಾವುದೇ ಕಾರಣಕ್ಕೂ ಮೂರು ವರ್ಷಗಳವರೆಗೂ ಮಾರಾಟ ಮಾಡುವಂತಿಲ್ಲ. ಈ ಸ್ಕೂಟರ್ ಗಳ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

English summary
Assam Govt Gifts Scooters To 22,000 Girls Who Secured 1st Division In 12th Boards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X