ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ ಆದ್ಮಿ ಪಕ್ಷ ತೊರೆದ ಹಿರಿಯ ನಾಯಕ ಆಶುತೋಷ್

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ನಡುವೆ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಆಶುತೋಷ್ ಅವರು ವೈಯಕ್ತಿಕ ಕಾರಣಗಳಿಂದ ಪಕ್ಷದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ, ಹೀಗಾಗಿ, ಎಎಪಿ ತೊರೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪತ್ರಕರ್ತರಾಗಿದ್ದ ಆಶುತೋಷ್(53) ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟು 2014ರ ಲೋಕಸಭ್ ಚುನಾವಣೆಯನ್ನು ಐತಿಹಾಸಿಕ ಚಾಂದಿನಿ ಚೌಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ನಂತರ ಎಎಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗುವ ಇರಾದೆ ಇಟ್ಟುಕೊಂಡಿದ್ದರು. ಆದರೆ, ಪಕ್ಷದಿಂದ ಸಂಜಯ್ ಸಿಂಗ್, ಎನ್ . ಡಿ ಗುಪ್ತಾ ಹಾಗ್ ಸುಶೀಲ್ ಗುಪ್ತಾ ಅವರು ನಾಮಾಂಕಿತರಾದರು.

ಎಎಪಿ ಸಾಗರೋತ್ತರ ಅಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಆಯ್ಕೆಎಎಪಿ ಸಾಗರೋತ್ತರ ಅಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಆಯ್ಕೆ

'ಇದೊಂದು ದುರಾದೃಷ್ಟಕರ ನಿರ್ಧಾರ, ಈ ಬಗ್ಗೆ ಅಶುತೋಷ್ ಅವರ ಬಳಿ ಚರ್ಚಿಸುವೆ ಎಂದು ಎಎಪಿ ದೆಹಲಿ ಸಂಚಾಲಕ, ಸಚಿವ ಗೋಪಾಲ್ ರಾಯ್ ಪ್ರತಿಕ್ರಿಯಿಸಿದ್ದಾರೆ.

Ashutosh ends AAP innings, cites personal reason for resignation

ಆದರೆ, ದೆಹಲಿ ಮುಖ್ಯಮಂತ್ರಿ, ಎಎಪಿ ಸಹ ಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು ಪ್ರತಿಕ್ರಿಯಿಸಿ, ಆಶುತೋಷ್ ಅವರ ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

' ಪ್ರತಿಯೊಂದು ಪ್ರಯಾಣಕ್ಕೂ ಅಂತ್ಯವೊಂದಿದೆ. ಆಪ್ ಜೊತೆಗಿನ ನನ್ನ ಸುಂದರ/ಕ್ರಾಂತಿಕಾರಿ ಸಂಬಂಧವೂ ಕೊನೆಗೊಂಡಿದೆ. ನಾನು ವೈಯಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದ ಎಲ್ಲರಿಗೂ ನನ್ನ ಧನ್ಯವಾದಗಳು' ಎಂದು ಟ್ವೀಟ್ ಮಾಡಿದ್ದಾರೆ.

English summary
Aam Aadmi Party leader Ashutosh on Wednesday(Aug 15) announced that he had resigned from the party, citing personal reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X