ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ವಾಯು ಪ್ರದೇಶ ಬಂದ್: ಏರ್ ಇಂಡಿಯಾ ವಿಮಾನ ವಾಪಸ್

|
Google Oneindia Kannada News

ನವದೆಹಲಿ, ಫೆಬ್ರವರಿ 24: ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲು ಹೋಗಿದ್ದ ಏರ್ ಇಂಡಿಯಾ ವಿಮಾನ ವಾಪಸಾಗಿದೆ.

ತನ್ನ ಪೂರ್ವ ಭಾಗಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ನಡೆಸುತ್ತಿರುವ ಕಾರಣ ತನ್ನ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಉಕ್ರೇನ್ ಹೇಳಿದ ಬಳಿಕ ಏರ್ ಇಂಡಿಯಾ ವಿಮಾನ ದೆಹಲಿಗೆ ಹಿಂದಿರುಗುತ್ತಿದೆ.

Russia-Ukraine War : ಉಕ್ರೇನ್-ರಷ್ಯಾ ಸೇನೆಗಳ ಬಲಾಬಲ ಹೇಗಿದೆ?Russia-Ukraine War : ಉಕ್ರೇನ್-ರಷ್ಯಾ ಸೇನೆಗಳ ಬಲಾಬಲ ಹೇಗಿದೆ?

ರಷ್ಯಾದೊಂದಿಗಿನ ಸಂಘರ್ಷದ ನಡುವೆ ಸಾವಿರಾರು ಭಾರತೀಯರು ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಗ್ಗೆ ರಷ್ಯಾದ ವಿಶೇಷ ಪಡೆಗಳಿಗೆ ಉಕ್ರೇನ್‌ನಲ್ಲಿ ಎರಡು ಪ್ರತ್ಯೇಕವಾದಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ರಷ್ಯಾ ಇದನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಿದೆ.

As Air India Flight Returns, Ukraine Evacuation Options Being Worked Out

ಉಕ್ರೇನ್‌ಗೆ ಹೋಗುವ ಎಲ್ಲಾ ವಿಮಾನಗಳಿಗೆ ಏರ್‌ಮೆನ್‌ಗಳಿಗೆ ಸೂಚನೆಯನ್ನು ಕಳುಹಿಸಿದ ಬಳಿಕ ಏರ್ ಇಂಡಿಯಾ ದೆಹಲಿಗೆ ಹಿಂದಿರುಗಲು ನಿರ್ಧರಿಸಿತು.

ರಷ್ಯಾದಿಂದ ಸಂಭಾವ್ಯ ವಾಯುದಾಳಿಯ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ದೇಶದ ಪೂರ್ವಭಾಗದಲ್ಲಿರುವ ವಾಯುವಲಯವನ್ನು 'ಅಪಾಯ ಪ್ರದೇಶ' ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ರಷ್ಯಾ ವಿಮಾನಯಾನ ಇಲಾಖೆ ಈ ವಾಯುಪ್ರದೇಶವನ್ನು ತನ್ನ ಸುಪರ್ದಿಗೆ ಪಡೆಯುವ ಸಾಧ್ಯತೆ ದಟ್ಟವಾಗಿದ್ದು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.

As Air India Flight Returns, Ukraine Evacuation Options Being Worked Out

ಈಗಾಗಲೇ ರಷ್ಯಾ ತನ್ನ ಆಕ್ರಮಣ ನೀತಿಯಿಂದ ಹಿಂದೆ ಸರಿಯುವಂತೆ ವಿಶ್ವಸಂಸ್ಥೆ ಪದೇ ಪದೇ ಮನವಿ ಮಾಡುತ್ತಿದೆ. ಇನ್ನೊಂದೆಡೆ, ಅಮೆರಿಕ ಸೇರಿದಂತೆ ಕೆಲವು ದೇಶಗಳು ರಷ್ಯಾಗೆ ಹಲವು ರೀತಿಯಲ್ಲಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದು ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.

ಉಕ್ರೇನ್ ಬಿಕ್ಕಟ್ಟಿನ ವಿಚಾರದ ಕುರಿತಂತೆ ಭಾರತದ ಸ್ವತಂತ್ರ ನಿಲುವನ್ನು ನಾವು ಸ್ವಾಗತಿಸುತ್ತೇವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಭಯ ದೇಶಗಳ ನಡುವಿನ ವಿಶೇಷವಾದ ಪಾಲುದಾರಿಕೆಯನ್ನು ಭಾರತದ ಈ ನಡೆ ಪ್ರತಿಬಿಂಬಿಸುತ್ತದೆ ರಷ್ಯಾ ಶ್ಲಾಫಿಸಿದೆ.

ಭಾರತವು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕ ವ್ಯವಹಾರಗಳಿಗೆ ಸ್ವತಂತ್ರ ಮತ್ತು ಸಮತೋಲಿತ ನಿರ್ಧಾರವನ್ನು ಭಾರತ ತೆಗೆದುಕೊಳ್ಳುತ್ತದೆ ಎಂದು ರಷ್ಯಾ ಮಿಷನ್​ನ ಉಪ ಮುಖ್ಯಸ್ಥ ರೋಮನ್​ ಬಾಬುಶ್ಕಿನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಹಿಂದೆ ಭಾರತವು ತೆಗೆದುಕೊಂಡ ಸ್ವತಂತ್ರ ನಿರ್ಧಾರಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ರೋಮನ್​ ಬಾಬುಶ್ಕಿನ್ ಆನ್‌ಲೈನ್ ಮಾಧ್ಯಮ ಸಂವಾದವೊಂದರಲ್ಲಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಚಟುವಟಿಕೆಗಳು ಉಭಯ ರಾಷ್ಟ್ರಗಳ ಪಾಲುದಾರಿಕೆಯನ್ನು ಸಂಪೂರ್ಣವಾಗಿ ಬಿಂಬಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್​ನ ಎರಡು ಪ್ರದೇಶಗಳನ್ನು ಸ್ವತಂತ್ರ ದೇಶಗಳನ್ನಾಗಿ ಘೋಷಿಸಿದ ನಂತರ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಮಧ್ಯೆ ವಿಶ್ವಸಂಸ್ಥೆಯ ತುರ್ತುಸಭೆಯಲ್ಲಿ ಭಾಗವಹಿಸಿದ್ದ ಭಾರತ ಉಕ್ರೇನ್ ಮತ್ತು ರಷ್ಯಾ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಾಬುಶ್ಕಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆ ಯಾರಿಗೂ ಯಾವುದೇ ಬೆದರಿಕೆಯನ್ನು ಪ್ರತಿನಿಧಿಸುವುದಿಲ್ಲ. ಭಾರತ-ರಷ್ಯಾ ಸಂಬಂಧ ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ರೋಮನ್​ ಬಾಬುಶ್ಕಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Recommended Video

ಫ್ರಾನ್ಸ್ ಜೊತೆ ಮತ್ತೆ ಒಪ್ಪಂದ ಮಾಡಿಕೊಳ್ಳುತ್ತ ಭಾರತ ! | Oneindia Kannada

English summary
India is looking for alternative routes to evacuate its citizens living in conflict-hit Ukraine after the east European nation closed its airspace following a Russian invasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X