ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಣಿ ಪ್ರೊಡಕ್ಷನ್ ಅರ್ಪಿಸುವ ಎಎಪಿ ಸರ್ಕಾರ: ಟ್ವೀಟ್ಸ್

By Mahesh
|
Google Oneindia Kannada News

ನವದೆಹಲಿ, ಜ.20: ಕೇಂದ್ರ ಗೃಹ ಸಚಿವಾಲಯದ ಮುಂದೆ ತನ್ನ ಬೆಂಬಲಿಗರೊಂದಿಗೆ ಧರಣಿಗೆ ಮುಂದಾದ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ 'ಕ್ರೇಜಿ' ತನಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭರಪೂರ ಪ್ರತಿಕ್ರಿಯೆಗಳು ಹರಿದು ಬಂದಿದೆ.

ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವಾಲಯದ ನಾರ್ಥ್ ಬ್ಲಾಕಿನಲ್ಲಿ ಪೊಲೀಸರು ಹಾಗೂ ದೆಹಲಿ ಸರ್ಕಾರದ ನಡುವೆ ಟೆನ್ಷನ್ ಜಾರಿಯಲ್ಲಿರುವಾಗ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ದೆಹಲಿ ಸರ್ಕಾರ ಫುಲ್ ಕಾಮಿಡಿ ವಸ್ತುವಾಗಿಬಿಟ್ಟಿದೆ. ರಸ್ತೆಯಲ್ಲಿ ಕುಳಿತೇ ಸಂಪುಟ ಸಭೆ ನಡೆಸುತ್ತೇನೆ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ. [ದೆಹಲಿ ಸಿಎಂ ಬಂಧಿಸಬೇಕಾ?]

ಬಂಧಿತ ಭಯೋತ್ಪಾದಕ ಯಾಸೀನ್ ಭಟ್ಕಳ್ ಬಿಡುಗಡೆ ಸಲುವಾಗಿ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆಯ ಉಗ್ರರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಅಪಹರಿಸುವ ಸಂಚು ಸಫಲವಾದರೆ, ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. ಅತ್ಯಂತ ಸ್ನೇಹಮಯ ರೀತಿಯಲ್ಲಿ ನಡೆದ ಅಪಹರಣ ಇದಾಗಲಿದೆ ಎಂಬ ಟ್ವೀಟ್ ಗಳು ಬಂದಿವೆ. ಟ್ವೀಟ್ ಗಳ ಸಂಗ್ರಹ ಇಲ್ಲಿದೆ ಮುಂದೆ ನೋಡಿ...

Array

ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾದ ಅರವಿಂದ

ಮಹಾಸ್ವಾಮಿ ಎಲ್ಲಿ ಕುಳಿತುಕೊಳ್ಳುತ್ತೀರಾ, ಕುರ್ಚಿ, ಸೋಫಾ ಅಥವಾ ಧರಣಿ

Array

ದೆಹಲಿ ಸರ್ಕಾರದ ಜಲ ಸಮಸ್ಯೆ

20 ಲೀಟರ್ ಗಿಂತ ಅಧಿಕ ಕುಡಿಯುವ ನೀರು ಬಳಸಿದರೆ ಪೊಲೀಸರಿಗೂ ದಂಡ

ಬೀದಿಗಿಳಿದ ಆಮ್ ಆದ್ಮಿ ಸರ್ಕಾರ

ಬೀದಿಗಿಳಿದ ಆಮ್ ಆದ್ಮಿ ಸರ್ಕಾರ ಈಗ ನಿಮ್ಹಾನ್ಸ್ ನಿಂದ ಕಾರ್ಯನಿರ್ವಹಿಸಲಿದೆಯಂತೆ!

ತನ್ನ ಮೇಲೆ ಲಾಠಿಚಾರ್ಚ್ ಮಾಡಿ ಎಂದ ಕೇಜ್ರಿವಾಲ್

ಪ್ರತಿಭಟನೆ ವೇಳೆ ನನ್ನ ಮೇಲೆ ಲಾಠಿ ಚಾರ್ಚ್ ಮಾಡಿ ಎಂದು ಅರವಿಂದ ಹೇಳಿದರೂ ಅಚ್ಚರಿಯೇನಿಲ್ಲ

ಧರಣಿ ಮಾಡೋಣ ಬನ್ನಿರೋ ಎಎಪಿ ಕರೆ

ಸಾರ್ವಜನಿಕರೇ ಧರಣಿ ಮಾಡೋಕೆ ಬರಬೇಡಿ: ಅರವಿಂದ್ ಕೇಜ್ರಿವಾಲ.

ಧರಣಿ ಮಾಡೋಣ ಬನ್ನಿ : ಆಮ್ ಆದ್ಮಿ ಪಕ್ಷ ಯಾರನ್ನು ನಂಬುವುದು

ಅರವಿಂದ್ ಕೇಜ್ರಿವಾಲ್ ಅವರ ಟ್ವೀಟ್

ಗಣತಂತ್ರ ದಿನಾಚರಣೆ ಅಂಗವಾಗಿ ದೆಹಲಿಯ ವಿವಿಧೆಡೆ ತಾಲೀಮು ನಡೆಸಲಾಗುತ್ತಿದೆ. ನಾವು ಸೋಮವಾರ ನಡೆಸಲಿರುವ ಧರಣಿಗೆ ಸಾರ್ವಜನಿಕರು ಬರುವ ಅವಶ್ಯಕತೆ ಇಲ್ಲ

ಅರವಿಂದ್ ನಡೆ ನುಡಿಗೆ ಮಿಶ್ರ ಪ್ರತಿಕ್ರಿಯೆ

ಅರವಿಂದ್ ನಡೆ ನುಡಿಗೆ ಮಿಶ್ರ ಪ್ರತಿಕ್ರಿಯೆ

ಗಣತಂತ್ರ ದಿನಾಚರಣೆ ಅಂಗವಾಗಿ ಸುರಕ್ಷತೆ ಬಗ್ಗೆ ದೆಹಲಿ ಪೊಲೀಸರು ತಲೆಕೆಡಿಸಿಕೊಂಡಿರುವ ಸಂದರ್ಭದಲ್ಲಿ ಈ ರೀತಿ ಧರಣಿ ಬೇಕಿತ್ತಾ? ಎಂಬ ಪ್ರಶ್ನೆ ಎದ್ದಿದೆ

English summary
As Delhi CM Arvind Kejriwal along with ministers Somnath Bharti, Rakhi Birla and other members of AAP carries out a dharna demanding the suspension of five Delhi police officials. Twitteratti seem to have turned the entire dharna into a laughing episode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X