ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಸ್ಪರ್ಧಿಸುವುದು ಅನುಮಾನ

|
Google Oneindia Kannada News

ನವದೆಹಲಿ, ಜನವರಿ 14: ಆಮ್‌ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತರೋ? ಇಲ್ಲವೋ? ಎಂಬ ಪ್ರಶ್ನೆಗೆ ಆಮ್ ಆದ್ಮಿ ಪಕ್ಷದಿಂದಲೆ ಉತ್ತರ ಸಿಕ್ಕಿದೆ.

ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಕಿಡ್ನ್ಯಾಪ್ ಬೆದರಿಕೆ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಕಿಡ್ನ್ಯಾಪ್ ಬೆದರಿಕೆ

ಕೇಜ್ರಿವಾಲ್ ಅವರು 2019ರಲ್ಲಿ ವಾರಾಣಸಿಯಿಂದ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದಿಂದ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಆಪ್‌ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್ ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್

'ತಮ್ಮ ರಾಜ್ಯಕ್ಕೆ ವಿಶೇಷ ಗಮನಹರಿಸುವ ಸಲುವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್‌ ಅವರು ಸ್ಪರ್ಧಿಸುವುದಿಲ್ಲ. ಆಪ್‌ನಿಂದ ದೆಹಲಿ, ಪಂಜಾಬ್‌, ಹರಿಯಾಣ ಮತ್ತು ಗೋವಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.

Arvind Kejriwal will not contest 2019 Lok Sabha elections

ಉತ್ತರ ಪ್ರದೇಶದ ಕೆಲವು ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದ್ದು, ಫೆಬ್ರವರಿ ಕೊನೆಯಲ್ಲಿ ಈ ಕುರಿತ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ವಾರಾಣಸಿ ಹೊರತುಪಡಿಸಿ ಪಕ್ಷವು ಪ್ರಬಲ ಸಂಘಟನೆಯಿರುವ ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶಗಳ ಸ್ಥಾನದಿಂದ ಸ್ಪರ್ಧಿಸಲಿದೆ ಎಂದರು.

ಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲ ಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲ

ದೆಹಲಿಯಲ್ಲಿ ನಮ್ಮ ಪಕ್ಷವು ಶಿಕ್ಷಣ, ಆರೋಗ್ಯ, ರೈತರು, ವಿದ್ಯುತ್‌ ಮತ್ತು ಕುಡಿಯುವ ನೀರನ್ನು ಒದಗಿಸುವತ್ತ ಗಮನ ಹರಿಸಿದೆ. ಎಲ್ಲರಿಗೂ ಶಿಕ್ಷಣ, ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉಚಿತ ಶಿಕ್ಷಣವನ್ನು ನೀಡುವುದು, ನಿರುದ್ಯೋಗ ನಿರ್ಮೂಲನೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ದೇಶದೆಲ್ಲೆಡೆ ಅನುಷ್ಠಾನಗೊಳಿಸುವ ಕುರಿತು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.(ಪಿಟಿಐ)

English summary
AAP convener and Delhi Chief Minister Arvind Kejriwal will not be contesting Lok Sabha elections 2019. Kejriwal, who had contested against Prime Minister Narendra Modi from Varanasi in the last general elections, would focus on Delhi, AAP said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X