ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಮಸೂದೆ: ಕೇಂದ್ರ ಸರ್ಕಾರಕ್ಕೆ ಕೇಜ್ರಿವಾಲ್ ತರಾಟೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಕೃಷಿ ಮಸೂದೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಹಾಗೆಯೇ ಕೇಂದ್ರ ಸರ್ಕಾರದ ಒಳಗೂ ಕೂಡ ಇದರ ವಿರುದ್ಧ ಅಪಸ್ವರವೆದ್ದಿದೆ.

ಕೃಷಿ ಮಸೂದೆಯನ್ನು ಅಪಾಯಕಾರಿ ಎಂದು ಹೇಳಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , ರಾಜ್ಯಸಭೆಯಲ್ಲಿ ಮತಗಳನ್ನು ವಿಭಾಗಿಸದೇ ಮಸೂದೆ ಅಂಗೀಕಾರ ಮಾಡಿರುವುದನ್ನು ಖಂಡಿಸಿದ್ದಾರೆ.

8 ಸಂಸದರ ಅಮಾನತು: ಸಂಸತ್ತಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ 8 ಸಂಸದರ ಅಮಾನತು: ಸಂಸತ್ತಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ

ಇದೇ ವೇಳೆ ದುರ್ವರ್ತನೆ ತೋರಿ ಅಮಾನತುಗೊಂಡು, ಪ್ರತಿಭಟನೆ ನಡೆಸುತ್ತಿರುವ ಸಂಸದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಜ್ರಿವಾಲ್, ಪ್ರತಿಭಟನಾ ನಿರತ 8 ಸಂಸದರು ಬಿಸಿಲು, ಸೊಳ್ಳೆಗಳ ಕಾಟವನ್ನು ಲೆಕ್ಕಿಸದೇ ರೈತರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರು ತಮಗಾಗಿ ಏನನ್ನೂ ಕೇಳುತ್ತಿಲ್ಲ. ದೇಶದ ರೈತರಿಗಾಗಿ ಅವರ ಹೋರಾಟ ಎಂದು ಟ್ವೀಟ್ ಮಾಡಿದ್ದಾರೆ.

ಮತಕ್ಕೆ ಹಾಕದೇ ಅಂಗೀಕರಿಸಲಾಗಿದೆ

ಮತಕ್ಕೆ ಹಾಕದೇ ಅಂಗೀಕರಿಸಲಾಗಿದೆ

ದೇಶಾದ್ಯಂತ ಇರುವ ರೈತರು ಈ ಮಸೂದೆ ತಮ್ಮನ್ನು ಅಂತ್ಯಗೊಳಿಸಲಿದೆ ಎಂದು ಹೇಳುತ್ತಿದ್ದಾರೆ. ಇಂತಹ ಅಪಾಯಕಾರಿ ಮಸೂದೆಯನ್ನು ಮತಕ್ಕೆ ಹಾಕದೇ ಅಂಗೀಕರಿಸಲಾಗಿದೆ. ಹಾಗಾದಲ್ಲಿ ಸಂಸತ್, ಚುನಾವಣೆಗಳಿಗೆ ಅರ್ಥವೇನು ಉಳಿಯಲಿದೆ? ಚುನಾವಣೆಗೆ ಏನು ಅರ್ಥ? ಸಂಸತ್ ಅಧಿವೇಶನವನ್ನು ಏಕೆ ಕರೆದಿರಿ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಉಪಾಧ್ಯಕ್ಷ ಪ್ರತಿಟನಾ ನಿರತರಿಗೆ ಟೀ ನೀಡಿದ್ದಾರೆ

ಉಪಾಧ್ಯಕ್ಷ ಪ್ರತಿಟನಾ ನಿರತರಿಗೆ ಟೀ ನೀಡಿದ್ದಾರೆ

ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಪ್ರತಿಭಟನಾ ನಿರತ ಸಂಸದರಿಗೆ ಟೀ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಸಂಜಯ್ ಸಿಂಗ್, ನಿಮ್ಮ ಟೀಯನ್ನು ವಿನಮ್ರವಾಗಿ ವಾಪಸ್ ನೀಡುತ್ತೇನೆ, ನೀವು ರೈತರ ಫಸಲನ್ನು ವಾಪಸ್ ನೀಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಬ್ರಿಟಿಷ್ ಸರ್ಕಾರಕ್ಕೆ ಹೋಲಿಕೆ

ಬ್ರಿಟಿಷ್ ಸರ್ಕಾರಕ್ಕೆ ಹೋಲಿಕೆ

ಮನೀಷ್ ಸಿಸೋಡಿಯಾ ಕೇಂದ್ರ ಸರ್ಕಾರವನ್ನು ಬ್ರಿಟೀಷ್ ಸರ್ಕಾರಕ್ಕೆ ಹೋಲಿಕೆ ಮಾಡಿದ್ದಾರೆ. ರೈತರು, ಕಾರ್ಮಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದರು, ನಂತರ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧಿ ಹಾಗೂ ಇನ್ನಿತರ ನಾಯಕರಿಗೆ ಟೀ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ಮಾಡುತ್ತಿದೆ ಎಂದು ಸಿಸೊಡಿಯಾ ಹೇಳಿದ್ದಾರೆ.

ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತ ಉಪಸಭಾಪತಿ

ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತ ಉಪಸಭಾಪತಿ

ಕೃಷಿ ಮಸೂದೆ ಮಂಡನೆ ವೇಳೆ ಗದ್ದಲ ಮಾಡಿದ್ದ ರಾಜ್ಯಸಭೆ ಸದಸ್ಯರ ವರ್ತನೆ ಕುರಿತಂತೆ ಉಪಸಭಾಪತಿ ಹರಿವಂಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಸದರ ವರ್ತನೆ ವಿರುದ್ಧ ಸಂಸತ್ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ನಿನ್ನೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಗದ್ದಲವಾಗಿ ಎಂಟು ಸಂಸದರ ಅಮಾನತುಗೊಂಡ ಬಳಿಕವೂ ದೆಹಲಿ ರಾಜಕೀಯ ಹೈಡ್ರಾಮ ಮುಂದುವರಿದಿದ್ದು, ಒಂದೆಡೆ ವಿಪಕ್ಷ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಗೆ ಅಮಾನತುಗೊಂಡ ಎಂಟು ಸಂಸದರು ಕೂಡ ಸಾಥ್ ನೀಡಿದ್ದಾರೆ. ಇನ್ನು ನಿನ್ನೆ ಇದೇ ಸಂಸದರ ಆಕ್ರೋಶಕ್ಕೆ ಗುರಿಯಾಗಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಕೂಡ ಉಪವಾಸ ನಿರಶನಕ್ಕೆ ಕೂತಿದ್ದಾರೆ.

English summary
Delhi Chief Minister Arvind Kejriwal on Tuesday targeted the government over the passage of the "dangerous" farm Bills without division of votes in Rajya Sabha, while lauding the sit-in protest on the Parliament premises by the eight suspended MPs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X