ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿ ಹಿಟ್ ಲಿಸ್ಟ್ ನಲ್ಲಿರುವ ರಾಜ್ಯದ ನಾಲ್ವರು ಯಾರು?

|
Google Oneindia Kannada News

ನವದೆಹಲಿ, ಜ.31 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ವೇಳೆ ಸಂಸತ್ ಭವನವನ್ನು ಸ್ವಚ್ಛಗೊಳಿಸಬೇಕಾಗಿದ್ದು, ಆದ್ದರಿಂದ ಭ್ರಷ್ಟರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಕರೆ ನೀಡಿದ್ದಾರೆ. ಇದರಲ್ಲಿ ಕರ್ನಾಟಕದ ನಾಲ್ವರು ನಾಯಕರು ಇದ್ದಾರೆ.

ಶುಕ್ರವಾರ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಭ್ರಷ್ಟ ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿರುವ ನಾಯಕರನ್ನು ಸೋಲಿಸುವ ಮೂಲಕ ಸಂಸತ್ ಭವನನ್ನು ಸ್ವಚ್ಛಗೊಳಿಸಲು ಜನರು ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದರು.

ಕೇಜ್ರಿವಾಲ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಅನಂತ್ ಕುಮಾರ್, ವೀರಪ್ಪ ಮೊಯ್ಲಿ ಅವರ ಹೆಸರುಗಳಿವೆ. ಇವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂದು ಕೇಜ್ರಿವಾಲ್ ಕರೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ದೇಶದ ಇತರ ರಾಜ್ಯಗಳ ಪ್ರಭಾವಿ ರಾಜಕೀಯ ವ್ಯಕ್ತಿಗಳ ಹೆಸರುಗಳು ಸಹ ಇವೆ.

ಬಿ.ಎಸ್.ಯಡಿಯೂರಪ್ಪ ಕೇಜ್ರಿವಾಲ್ ಪಟ್ಟಿಯಲ್ಲಿ

ಬಿ.ಎಸ್.ಯಡಿಯೂರಪ್ಪ ಕೇಜ್ರಿವಾಲ್ ಪಟ್ಟಿಯಲ್ಲಿ

ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿರುವ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇದೆ. ಈಗಾಗಲೇ ಕರ್ನಾಟಕದಲ್ಲಿ ಹಲವಾರು ಹಗರಣಗಳಲ್ಲಿ ಇವರ ಹೆಸರು ಸೇರಿಕೊಂಡಿದ್ದು, ಸಿಬಿಐ ತನಿಖೆ ಸಹ ಯಡಿಯೂರಪ್ಪ ವಿರುದ್ಧ ನಡೆಯುತ್ತಿದೆ.

ಕೇಜ್ರಿವಾಲ್ ಪಟ್ಟಿ ಸೇರಿದ ಕುಮಾರಸ್ವಾಮಿ

ಕೇಜ್ರಿವಾಲ್ ಪಟ್ಟಿ ಸೇರಿದ ಕುಮಾರಸ್ವಾಮಿ

ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿರುವ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಇದೆ.

ಅನಂತ್ ಕುಮಾರ್ ಪಟ್ಟಿಯಲ್ಲಿ

ಅನಂತ್ ಕುಮಾರ್ ಪಟ್ಟಿಯಲ್ಲಿ

ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿರುವ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರ ಹೆಸರು ಇದೆ. ಇವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಕೇಜ್ರಿವಾಲ್ ಕರೆ ನೀಡಿದ್ದಾರೆ.

ಕೇಂದ್ರ ಸಚಿವ ಮೊಯ್ಲಿ ಟಾರ್ಗೆಟ್

ಕೇಂದ್ರ ಸಚಿವ ಮೊಯ್ಲಿ ಟಾರ್ಗೆಟ್

ಕೇಂದ್ರ ಇಂಧನ ಮತ್ತು ಪರಿಸರ ಮತ್ತು ಅರಣ್ಯ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರನ್ನು ಕೇಜ್ರಿವಾಲ್ ಭ್ರಷ್ಟರ ಪಟ್ಟಿಗೆ ಸೇರಿಸಿದ್ದಾರೆ. ಇವರನ್ನು ಸಹ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಎಂದು ಅವರು ಕರೆ ನೀಡಿದ್ದಾರೆ.

ಕೇಜ್ರಿವಾಲ್ ಪಟ್ಟಿಯಲ್ಲಿರುವ ಪ್ರಮುಖರು

ಕೇಜ್ರಿವಾಲ್ ಪಟ್ಟಿಯಲ್ಲಿರುವ ಪ್ರಮುಖರು

ಕೇಜ್ರಿವಾಲ್ ಬಿಡುಗಡೆ ಮಾಡಿರುವ ಭ್ರಷ್ಟರ ಪಟ್ಟಿಯಲ್ಲಿ ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಕೇಂದ್ರ ಸಚಿವ ಚಿದಂಬರಂ, ಅಳಗಿರಿ, ಸಚಿವ ಸಲ್ಮಾನ್ ಖುರ್ಷಿದ್, ಜಿ.ಕೆ.ವಾಸನ್, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಜಗನ್ ಮೋಹನ್ ರೆಡ್ಡಿ, ಸಚಿವ ಕಪಿಲ್ ಸಿಬಲ್, ಸಚಿವ ಕಮಲ್ ನಾಥ್, ಫಾರುಕ್ ಅಬ್ದುಲ್ಲಾ, ಎ.ರಾಜಾ ಮುಂತಾದವರ ಹೆಸರುಗಳಿವೆ.

English summary
Clearly eyes set on Lok Sabha election 2014 Aam Admi Party supremo Arvind Kejriwal has prepared a black list of politicians, who he thinks are corrupt and should be defeated. He has enlisted B.S. Yeddyurappa, Ananth Kumar (Bangalore South), Veerappa Moily (Chikkaballapur) and H.D. Kumaraswamy from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X