ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Delhi CM Oath Ceremony : ಮೂರನೇ ಬಾರಿ; ದಿಲ್ಲಿಗೆ ಕೇಜ್ರಿವಾಲ್ ಮುಖ್ಯಮಂತ್ರಿ

|
Google Oneindia Kannada News

ನವದೆಹಲಿ, ಫೆಬ್ರವರಿ 16: ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. 70 ಕ್ಷೇತ್ರಗಳಿಗೆ ಕಳೆದ ವಾರ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿತ್ತು.

ತಮ್ಮ ಹಳೆಯ ಸಚಿವ ಸಂಪುಟವನ್ನೇ ಮುಂದುವರಿಸಿರುವ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ದಿಲ್ಲಿಯ ಲೆಫ್ಟಿನೆಂಟ್ ಗೌರ್ವನರ್ ಅನಿಲ್ ಬೈಜಾಲ್ ಪ್ರತಿಜ್ಞಾ ವಿಧಿ ಹಾಗೂ ಗೌಪ್ಯತಾ ವಿಧಿಗಳನ್ನು ಬೋಧಿಸಿದರು.

ಶಾಲೆಗಳ ಅಭಿವೃದ್ಧಿ, ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ನಡೆಸಿದ ಚುನಾವಣೆಯಲ್ಲಿ ಐದು ವರ್ಷಗಳ ಎಎಪಿ ಆಡಳಿತ ಪರೀಕ್ಷೆಗೆ ಒಳಗಾಗಿತ್ತು. ದಿಲ್ಲಿಯ ಜನ ಭರ್ಜರಿ ಸ್ಥಾನಗಳನ್ನು ನೀಡುವ ಮೂಲಕ ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ರತ್ನಗಂಬಳಿ ಹಾಸಿದ್ದಾರೆ.

ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!ದೆಹಲಿ ಚುನಾವಣೆ; ಎಎಪಿಗೆ ಶಕ್ತಿ ತಂದ 'TINA' ಪ್ರಚಾರ ತಂತ್ರ!

Arvind Kejriwal

ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದ ಲೈವ್ ಅಪ್‌ಡೇಟ್ಸ್ ಹಾಗೂ ದಿಲ್ಲಿ ರಾಜಕಾರಣದಲ್ಲಿ ಭಾನುವಾರ ನಡೆಯುವ ಪ್ರಮುಖ ಬೆಳವಣಿಗೆಗಳ ಚಿತ್ರಣ ಇಲ್ಲಿ ತತಕ್ಷಣವೇ ಲಭ್ಯವಾಗಲಿದೆ.

ಕೇಜ್ರಿವಾಲ್ ಕ್ಯಾಬಿನೆಟ್ಟಿಗೆ ಎಎಪಿ ಪ್ರಮುಖರಾದ ಆತಿಶಿ, ಛಡ್ಡಾ ಇಲ್ಲ? ಕೇಜ್ರಿವಾಲ್ ಕ್ಯಾಬಿನೆಟ್ಟಿಗೆ ಎಎಪಿ ಪ್ರಮುಖರಾದ ಆತಿಶಿ, ಛಡ್ಡಾ ಇಲ್ಲ?

Newest FirstOldest First
12:17 PM, 16 Feb

ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇಜ್ರಿವಾಲ್.
12:13 PM, 16 Feb

ರಾಷ್ಟ್ರಗೀತೆ ಮೂಲಕ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಧಿಕೃತ ಚಾಲನೆ. ಲೆಫ್ಟಿನೆಂಟ್ ಗೌರ್ವನರ್‌ ಅನಿಲ್ ಬೈಜಾಲ್ ಈಗ ಎಲ್ಲಾ ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
12:06 PM, 16 Feb

ಕ್ಷಣಗಣನೆ
11:56 AM, 16 Feb

ಪ್ರಮಾಣ ವಚನ ಸಮಾರಂಭದ ವೇದಿಕೆಯಿಂದ...
11:55 AM, 16 Feb

ದಿಲ್ಲಿ ಲೆಫ್ಟಿನೆಂಟ್ ಗೌರ್ವನರ್‌ ಅನಿಲ್ ಬೈಜಾಲ್ ಆಗಮನ.
11:51 AM, 16 Feb

ರಾಮಲೀಲ ಮೈದಾನಕ್ಕೆ ಆಗಮಿಸಿದ ಅರವಿಂದ್ ಕೇಜ್ರಿವಾಲ್. ಪ್ರಮಾಣ ವಚನ ಸ್ವೀಕಾರ ಸಮಾರಂಭದ ವಿಧಿವಿಧಾನಗಳು ಆರಂಭಗೊಂಡಿವೆ.
11:44 AM, 16 Feb

ರಾಮಲೀಲ ಮೈದಾನಕ್ಕೆ ಆಗಮಿಸಿದ ಅರವಿಂದ್ ಕೇಜ್ರಿವಾಲ್ ಪೋಷಕರು. ತಂದೆ, ತಾಯಿ ಕೂಡ ಮಗ ಮೂರನೇ ಬಾರಿಗೆ ಪ್ರದಗ್ರಹಣ ಮಾಡುವುದನ್ನು ಕಣ್ತುಂಬಿಕೊಳ್ಳಲಿದ್ದಾರೆ.
Advertisement
11:37 AM, 16 Feb

ರಾಮಲೀಲ ಕಡೆಗೆ ಕೇಜ್ರಿವಾಲ್

ದಿಲ್ಲಿಯ ರಾಮಲೀಲ ಮೈದಾನದಲ್ಲಿ ಹಮ್ಮಿಕೊಂಡಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಿವಾಸದಿಂದ ತೆರಳಿದ ಕೇಜ್ರಿವಾಲ್. ತಮ್ಮ ಹಳೆಯ ವ್ಯಾಗನಾರ್ ಕಾರಿನಲ್ಲಿ ಎಲ್ಲಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲಿಸಿಕೊಂಡು ರಾಮಲೀಲಾ ಮೈದಾನವನ್ನು ಕೇಜ್ರಿವಾಲ್ ತಲುಪುತ್ತಿದ್ದಾರೆ. ಕೆಂಪು ಸ್ವೆಟರ್‌ನಲ್ಲಿ ಮಿಂಚುತ್ತಿರುವ ಕೇಜ್ರಿವಾಲ್ ಇನ್ನೇನು ಕೆಲವೇ ಹೊತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
11:32 AM, 16 Feb

ಬೆಳಗ್ಗೆ 12.15ಕ್ಕೆ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ರಾಮಲೀಲ ಮೈದಾನಕ್ಕೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಗಮಿಸಿದ್ದಾರೆ.
11:21 AM, 16 Feb

ರಾಮಲೀಲ ಮೈದಾನದಿಂದ...
11:10 AM, 16 Feb

ಮೂರನೇ ಬಾರಿ ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಕೇಜ್ರಿವಾಲ್ ಹಾಗೂ ಕರ್ನಾಟಕ ಸಿಎಂ ಬಿಎಸ್‌ ಯಡಿಯೂರಪ್ಪ ಹೋಲಿಕೆ ಮಾಡಿದ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ ಹೀಗಿದೆ.
11:05 AM, 16 Feb

ಮುಂದಿನ ನಡೆ ಏನು?

ದಿಲ್ಲಿಯಲ್ಲಿ ಚುನಾವಣೆ ನಡೆಯುವ ಸಮಯದಲ್ಲೇ ಚಾಲ್ತಿಯಲ್ಲಿದ್ದ ಸಿಎಎ ವಿರೋಧಿ ಹೋರಾಟದ ಕಣ ಶಾಹೀನ್ ಭಾಗ್‌ನಿಂದ ಅಂತರ ಕಾಯ್ದುಕೊಂಡಿದ್ದರು ಅರವಿಂದ್ ಕೇಜ್ರಿವಾಲ್. ತಮ್ಮ ಅಭಿವೃದ್ಧಿ ರಾಜಕಾರಣದ ಎದುರು ಧರ್ಮಾಧಾರಿತ ರಾಜಕಾರಣ ಅಜೆಂಡಾ ತೊಡಕು ಆಗಲು ಬಿಡಲಿಲ್ಲ ಆಮ್‌ ಆದ್ಮಿ ಪಾರ್ಟಿಯ ಪ್ರಚಾರ. ಇದೀಗ ಪ್ರಮಾಣ ವಚನ ಸ್ವೀಕಾರದ ನಂತರ ಅರವಿಂದ್ ಕೇಜ್ರಿವಾಲ್ ನಿಲುವುಗಳೇನು ಎಂಬ ಬಗ್ಗೆ ಟ್ವಿಟರ್‌ ಪೋಸ್ಟ್‌ ಒಂದು ಹೀಗಿದೆ.
Advertisement
10:43 AM, 16 Feb

ದಿಲ್ಲಿ ಜನರಿಗೆ ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಇಂದು ಮುಂಜಾನೆಯೇ ದಿಲ್ಲಿಯ ದಿನ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತುಗಳನ್ನು ನೀಡಲಾಗಿದೆ.
10:40 AM, 16 Feb

ಎಎಪಿ ಅಭಿಮಾನಿಯೊಬ್ಬರ ಕಣ್ಣಿಗೆ ಬಿದ್ದ ರಾಮಲೀಲ ಮೈದಾನ. 51 ವರ್ಷದ ಮಾಜಿ ಅಧಿಕಾರಿ, ರಾಜಕಾರಣಿಯಾಗಿ ಬದಲಾದ ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
10:23 AM, 16 Feb

ವಿಶೇಷ ಆಹ್ವಾನ

ಅರವಿಂದ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯೊಬ್ಬರನ್ನು ಆಹ್ವಾನಿಸಲಾಗಿದೆ. ಅವರು ದೇಶದ ಪ್ರಧಾನಿಯಲ್ಲ, ಯಾವುದೇ ರಾಜ್ಯದ ಮುಖ್ಯಮಂತ್ರಿಯೂ ಅಲ್ಲ. ರಾಜಕೀಯ ಎಂದರೇನು? ಎಂದು ತಿಳಿಯದ ಒಂದು ವರ್ಷದ ಮಗು.
10:11 AM, 16 Feb

ಮನೀಶ್ ಸಿಸೋಡಿಯಾ, ಸತ್ಯೇಂಜರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರ ಗೌತಮ್ ಅರವಿಂದ ಕೇಜ್ರಿವಾಲ್ ಜೊತೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.
10:03 AM, 16 Feb

ದೆಹಲಿ ಬಸ್ ಸೇವೆ ಭದ್ರತೆಗೆ ನಿಯೋಜನೆಗೊಂಡಿರುವ 22 ವರ್ಷದ ಅರುಣ್ ಕುಮಾರ್ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭದ ಮುಖ್ಯ ಅತಿಥಿ. ನಾಲ್ಕು ವರ್ಷದ ಬಾಲಕಿಯ ಅಹಹರಣವನ್ನು ಅವರು ತಡೆದಿದ್ದಾರೆ.
9:58 AM, 16 Feb

36 ವರ್ಷದ ಗೃಹರಕ್ಷಕ ದಳದ ಸಿಬ್ಭಂದಿಯಾದ ದೇವಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ದೆಹಲಿ ಬಸ್ ಸೇವೆ ಭದ್ರತೆಗೆ ನಿಯೋಜಿತರಾಗಿರುವ ದೇವಿ ಒಬ್ಬ ಪಿಕ್ ಪಾಕೆಟರ್ ಬಂಧಿಸಿದ್ದಾರೆ.
9:55 AM, 16 Feb

ಯಾವುದೇ ರಾಜ್ಯದ ಮುಖ್ಯಮಂತ್ರಿಗಳು, ಯಾವುದೇ ರಾಜಕೀಯ ಪಕ್ಷಗಳ ನಾಯಕರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿಲ್ಲ. ದೆಹಲಿಯ ಜನರೇ ಇಂದಿನ ಸಮಾರಂಭದ ಮುಖ್ಯ ಅತಿಥಿಗಳು
9:43 AM, 16 Feb

ರಾಮ್ ಲೀಲಾ ಮೈದಾನದಲ್ಲಿ ಗಮನ ಸೆಳೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ
9:38 AM, 16 Feb

ಅರವಿಂದ ಕೇಜ್ರಿವಾಲ್ ಅದೇ ಮಂತ್ರಿ ಮಂಡಲವನ್ನು ಮುಂದುವರೆಸಲು ತೀರ್ಮಾನಿಸಿದರೆ ತಪ್ಪೇನಿಲ್ಲ. ನ್ ಸರ್ಕಾರ ಅದೇ ಸಚಿವರು ಮಾಡಿದ ಕೆಲಸದ ಮೇಲೆಯೇ ನಾವು ಈ ಬಾರಿ ಗೆದ್ದಿದ್ದೇವೆ. ನಮಗೆ ಜನರ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ ಎಂದು ಎಎಪಿ ಹಿರಿಯ ನಾಯಕ
9:30 AM, 16 Feb

ರಾಮ್ ಲೀಲಾ ಮೈದಾನದಲ್ಲಿ ಕಂಡು ಬಂದ ಬ್ಯಾನರ್. ಅನಿಲ್ ಕಪೂರ್ ನಾಯಕ್ ಸಿನಿಮಾಗೆ ಕೇಜ್ರಿವಾಲ್ ಹೋಲಿಕೆ ಮಾಡಲಾಗಿದೆ.
9:23 AM, 16 Feb

ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭದ ಹಿನ್ನಲೆಯಲ್ಲಿ ಲೂಧಿಯಾನದಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ
9:14 AM, 16 Feb

2 ರಿಂದ 3 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 10 ಗಂಟೆಗೆ ಪ್ರಮಾಣ ವಚನ ಸಮಾರಂಭ ಆರಂಭವಾಗಲಿದೆ.
9:07 AM, 16 Feb

ಅರವಿಂದ ಕೇಜ್ರಿವಾಲ್ ಜೊತೆ 6 ಶಾಸಕರು ಪ್ರಮಾಣ ವಚನವನ್ನು ಸ್ವೀಕಾರ ಮಾಡಲಿದ್ದಾರೆ.
9:00 AM, 16 Feb

ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. 2013ರಲ್ಲಿ ಮೊದಲು ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಜಯಗಳಿಸಿದಾಲೂ ಇಲ್ಲಿಯೇ ಪ್ರಮಾಣ ವಚನ ಸಮಾರಂಭ ನಡೆದಿತ್ತು.
8:50 AM, 16 Feb

ಪ್ರಧಾನಿ ನರೇಂದ್ರ ಮೋದಿ ತವರು ಕ್ಷೇತ್ರ ವಾರಣಾಸಿಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ, ಅರವಿಂದ ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ಗೈರಾಗಲಿದ್ದಾರೆ.
8:42 AM, 16 Feb

ಸಚಿವರ ಜೊತೆ ನಿಯೋಜಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
8:35 AM, 16 Feb

ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಪೊಲೀಸರು ಅಂತಿಮ ಹಂತದ ಭದ್ರತಾ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
8:29 AM, 16 Feb

ಪ್ರಮಾಣ ವಚನ ಸಮಾರಂಭದ ವಿಶೇಷ ಅತಿಥಿ Baby Mufflerman
READ MORE

English summary
Arvind Kejriwal swearing-in Delhi CM Live Updates in Kannada:Aam Aadmi Party (AAP) chief will take oath as chief minister for the third time at 10:00 am at Delhi's Ramlila Maidan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X