ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಮಹಿಳೆಯರ ಖಾತೆಗೆ 1 ಸಾವಿರ ಭರವಸೆ: ವಿಪಕ್ಷಗಳ ಟೀಕೆಗೆ ಕೇಜ್ರಿವಾಲ್‌ ತಿರುಗೇಟು

|
Google Oneindia Kannada News

ನವದೆಹಲಿ, ನವೆಂಬರ್‌ 28: ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಈಗಾಗಲೇ ಚುನಾವಣಾ ಕಾರ್ಯವನ್ನು ಆರಂಭ ಮಾಡಿದೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, "ಪಂಜಾಬ್‌ನಲ್ಲಿ ಎಎಪಿ ಗೆದ್ದರೆ 18 ವರ್ಷ ಮೇಲ್ಪಟ್ಟ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಹಾಕಲಾಗುವುದು," ಎಂದು ಆಶ್ವಾಸನೆ ನೀಡಿರುವುದು ವಿರೋಧ ಪಕ್ಷಗಳು ಟೀಕೆಗೆ ಗುರಿಯಾಗಿದೆ.

ಈ ಟೀಕೆಗೆ ತಿರುಗೇಟು ನೀಡಿರುವ ಅರವಿಂದ್‌ ಕೇಜ್ರಿವಾಲ್‌, "ಕಾಂಗ್ರೆಸ್‌, ಬಿಜೆಪಿ ಹಾಗೂ ಅಕಾಲಿದಳ ಎಂಬ ರಾಜ್ಯ ವಂಶದ ಪಕ್ಷಗಳು ಪಂಜಾಬ್‌ನಲ್ಲಿ ಆಡಳಿತ ನಡೆಸಿದೆ. ಈಗಾಗಲೇ ಈ ಪಕ್ಷಗಳು ಸರ್ಕಾರದ ಖಜಾನೆಯನ್ನು ಬರಿದು ಮಾಡಿ ಆಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ವರ್ಷಕ್ಕೆ 12,000 ಕೋಟಿ ರೂ. ಖರ್ಚು!, ಕಾರಣವೇನು?ಪಂಜಾಬ್‌ನಲ್ಲಿ ಎಎಪಿ ಗೆಲುವಿಗೆ ವರ್ಷಕ್ಕೆ 12,000 ಕೋಟಿ ರೂ. ಖರ್ಚು!, ಕಾರಣವೇನು?

ಎರಡನೇ ರಾಜ್ಯದಲ್ಲಿ ಎಎಪಿ ಅಧಿಕಾರ ಸ್ಥಾಪನೆ: ಸಿವೋಟರ್ ಸಮೀಕ್ಷೆಎರಡನೇ ರಾಜ್ಯದಲ್ಲಿ ಎಎಪಿ ಅಧಿಕಾರ ಸ್ಥಾಪನೆ: ಸಿವೋಟರ್ ಸಮೀಕ್ಷೆ

"ಪಂಜಾಬ್‌ನಲ್ಲಿ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಜಮೆ ಮಾಡಿದರೆ ಪಂಜಾಬ್‌ ಸರ್ಕಾರದ ಬೊಕ್ಕಸಕ್ಕೆ ತೊಂದರೆ ಉಂಟಾಗುತ್ತದೆ ಎಂದು ಕಾಂಗ್ರೆಸ್‌, ಅಕಾಲಿದಳ ಹಾಗೂ ಬಿಜೆಪಿ ನನ್ನನ್ನು ಟೀಕೆ ಮಾಡುತ್ತಿದೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.

Arvind Kejriwals Reaction After Punjab Poll Promise For Women Criticised

ಉತ್ತರ ಪ್ರದೇಶ, ಪಂಜಾಬ್‌, ಮಣಿಪುರ, ಗೋವಾ, ಉತ್ತರಾಖಂಡದಲ್ಲಿ 2022 ರಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಈ ರಾಜ್ಯಗಳಲ್ಲಿ ಚುನಾವಣಾ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಜ್ರಿವಾಲ್‌ ನೇತೃತ್ವದ ಎಎಪಿ ಎಲ್ಲಾ ರಾಜ್ಯಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಪ್ರಯತ್ನದಲ್ಲಿ ಇದೆ. ಈ ಪ್ರಯತ್ನಗಳ ಭಾಗವಾಗಿ ಅರವಿಂದ್ ಕೇಜ್ರಿವಾಲ್‌ ಪಂಜಾಬ್‌, ಗೋವಾ ಜನತೆಗೆ ಚುನಾವಣಾ ಪೂರ್ವ ಭರವಸೆಯನ್ನು ನೀಡುತ್ತಿದ್ದಾರೆ.

ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್‌ ಭರವಸೆಗಳು

ಇತ್ತೀಚೆಗೆ ಪಂಜಾಬ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್‌, "ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗುವಂತೆ ಜನರು ಮತವನ್ನು ಹಾಕಿದರೆ, 18 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಿಗೆ ನಾವು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಜಮೆ ಮಾಡುತ್ತೇವೆ," ಎಂದು ಆಶ್ವಾಸನೆ ನೀಡಿದ್ದಾರೆ.

2019 ರ ಲೋಕ ಸಭೆ ಚುನಾವಣೆಯ ಡೇಟಾ ಪ್ರಕಾರ ಪಂಜಾಬ್‌ ರಾಜ್ಯದಲ್ಲಿ 96.19 ಲಕ್ಷ ಮಂದಿ ಮಹಿಳೆಯರು ಇದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಉಲ್ಲೇಖ ಮಾಡಿದೆ. 2022 ರಲ್ಲಿ ಚುನಾವಣೆ ಮಾಡಲು ಹಕ್ಕು ಪಡೆದಿರುವವರ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಾಗಿದೆ. ಇನ್ನು ಎಎಪಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಈ ಯೋಜನೆಯು ರಾಜ್ಯದ ಒಂದು ಕೋಟಿ ಮಹಿಳೆಯರಿಗೆ ಸಹಾಯ ಮಾಡಲಿದೆ," ಎಂದು ಹೇಳಿಕೊಂಡಿದೆ. ಅಂದರೆ ಈ ಯೋಜನೆಯಲ್ಲಿ ಪ್ರತಿ ಪಂಜಾಬ್‌ನ ಮಹಿಳೆಗೆ ತಿಂಗಳಿಗೆ ಒಂದು ಸಾವಿರ ಎಂದಾದರೆ ವರ್ಷಕ್ಕೆ 12,000 ರೂಪಾಯಿ ಆಗುತ್ತದೆ. ಎಲ್ಲಾ ಮಹಿಳೆಯರಿಗೆ ನೀಡುವ ವೆಚ್ಚ ಸೇರಿದಾಗ ವರ್ಷಕ್ಕೆ 12,000 ಕೋಟಿ ರೂಪಾಯಿ ಆಗಲಿದೆ.

ಇನ್ನು ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 300 ಯುನಿಟ್‌ ಉಚಿತ ವಿದ್ಯುತ್‌ ಅನ್ನು ಪಂಜಾಬ್‌ ಜನತೆಗೆ ನೀಡಲಾಗುವುದು ಎಂದು ಕೂಡಾ ಭರವಸೆ ನೀಡಿದ್ದಾರೆ. ಹಾಗೆಯೇ ದಿನದ 24 ಗಂಟಗಳ ಕಾಲ ವಿದ್ಯುತ್‌ ಸರಬರಾಜು ಇರಲಿದೆ ಎಂದಿದ್ದಾರೆ. ಹಾಗೆಯೇ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

English summary
Arvind Kejriwal's Reaction After Punjab Poll Promise For Women Criticised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X