ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯ ಹಳೇ ಟ್ವೀಟ್ ರೀಟ್ವೀಟ್ ಮಾಡಿ, ಲೇವಡಿ ಮಾಡಿದ ಕೇಜ್ರಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಯ ಕುರಿತಂತೆ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನರೇಮದ್ರ ಮೋದಿಯವರು ಪ್ರಧಾನಿಯಾಗುವ ಮುನ್ನ ಮಾಡಿದ್ದ ಟ್ವೀಟ್ ವೊಂದನ್ನು ರೀಟ್ವೀಟ್ ಮಾಡಿದ್ದಾರೆ!

ದೆಹಲಿ ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್, ತಂಡಕ್ಕೆ ಜಾಮೀನುದೆಹಲಿ ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್, ತಂಡಕ್ಕೆ ಜಾಮೀನು

2013 ರಲ್ಲಿ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಸಿಬಿಐ ಅನ್ನು ಅಂದಿನ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಮದು ಮೋದಿ ಟ್ವೀಟ್ ಮಾಡಿದ್ದರು.

ನಿರಂತರ ಐಟಿ ದಾಳಿ : ಮೋದಿ ಕ್ಷಮೆ ಕೇಳಬೇಕೆಂದ ಕೇಜ್ರಿವಾಲ್ ನಿರಂತರ ಐಟಿ ದಾಳಿ : ಮೋದಿ ಕ್ಷಮೆ ಕೇಳಬೇಕೆಂದ ಕೇಜ್ರಿವಾಲ್

ಅದೇ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಕೇಜ್ರಿವಾಲ್, ಇಂದಿನ ಸಿಬಿಐ ಬೆಳವಣಿಗೆಗೂ, ಆ ಟ್ವೀಟ್ ಗೂ ಹೋಲಿಸಿದ್ದಾರೆ.

Arvind Kejriwal retweets Narendra Modis old tweet, targets CBI

ಜೂನ್ 5, 2013 ರಂದು ಟ್ವೀಟ್ ಮಾಡಿದ್ದ ನರೇಂದ್ರ ಮೋದಿ, 'ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಸಿಬಿಐ ಅನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ' ಎಂದಿದ್ದರು.

ಲೋಕಸಭಾ ಚುನಾವಣೆಗೆ ಸಜ್ಜಾದ ಕೇಜ್ರಿವಾಲ್, ಬಿಜೆಪಿ ಗಡಗಡ?!ಲೋಕಸಭಾ ಚುನಾವಣೆಗೆ ಸಜ್ಜಾದ ಕೇಜ್ರಿವಾಲ್, ಬಿಜೆಪಿ ಗಡಗಡ?!

ಇದೀಗ ಸಿಬಿಐ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳಿಸುವು ಮೂಲಕ ಬಿಜೆಪಿಯೂ ಅದನ್ನೇ ಮಾಡುತ್ತಿದೆ. ಬಹುಶಃ ಸಿಬಿಐ ರಫೇಲ್ ಡಿಲ್ ಬಗ್ಗೆ ತನಿಖೆ ನಡೆಸಿಬಿಟ್ಟರೆ ಎಂಬ ಭಯಕ್ಕೆ ಎನ್ ಡಿಎ ಸರ್ಕಾರ ಇಂಥ ನಿರ್ಧಾರ ತೆಗೆದುಕೊಂಡಿರಬೇಕು ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಮತ್ತು ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಮಂಗಳವಾರ ತಡರಾತ್ರಿ ಪ್ರಧಾನಿ ಮೋದಿ ಆದೇಶಿಸಿದ್ದರು.

English summary
Delhi chief minister Arvind Kejriwal retweets PM Narendra Modi's 2013 tweet which had targetted then CBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X