ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗೆ ಬಸ್, ಮೆಟ್ರೋ ಪ್ರಯಾಣ ಉಚಿತ: ಕೇಜ್ರಿವಾಲ್ ಹೊಸ ಪ್ಲ್ಯಾನ್

|
Google Oneindia Kannada News

ನವದೆಹಲಿ, ಜೂನ್ 03: ದೆಹಲಿಯಲ್ಲಿ 2020 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ತಯಾರಿ ಎಂಬಂತೆ ಮಹಿಳೆಯರಿಗೆ ಮೆಟ್ರೋ ಮತ್ತು ಬಸ್ ಪ್ರಯಾಣ ಸೌಲಭ್ಯವನ್ನು ಉಚಿತವಾಗಿ ನೀಡಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ.

ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಸುವುದನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.

ನರೇಂದ್ರ ಮೋದಿ ನನ್ನ ಸಾವು ಬಯಸಿದ್ದಾರೆ: ಅರವಿಂದ್ ಕೇಜ್ರಿವಾಲ್ ನರೇಂದ್ರ ಮೋದಿ ನನ್ನ ಸಾವು ಬಯಸಿದ್ದಾರೆ: ಅರವಿಂದ್ ಕೇಜ್ರಿವಾಲ್

ಜೂನ್ 3 ರಂದು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿರುವ ಅವರು, "ದೆಹಲಿ ಸಾರಿಗೆ ನಿಗಮ ಮತ್ತು ದೆಹಲಿ ಮೆಟ್ರೋದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸಂಚರಿಸುವ ಮೂಲಕ ಸ್ವಂತ ವಾಹನ ಬಳಕೆಯನ್ನು ಕಡಿಮೆ ಮಾಡಬೇಕಿದೆ. ಇದರಿಂದ ಮಾಲಿನ್ಯ ನಿಯಂತ್ರಣವೂ ಸಾಧ್ಯ, ಜೊತೆಗೆ ಮಹಿಳೆಯರಿಗೂ ಉತ್ತೇಜನ ಸಿಕ್ಕಂತಾಗುತ್ತದೆ" ಎಂದಿದ್ದಾರೆ.

Arvind Kejriwal planning to make metro and bus travels free for women in Delhi

ಅಷ್ಟೇ ಅಲ್ಲದೆ, ಈಗಾಗಲೆ ದೆಹಲಿ ವಿದ್ಯುತ್ ಇಲಾಖೆಯ ಅಧಿಕಾರಿಗಳೊಂದಿಗೆ ಅರವಿಂದ್ ಕೇಜ್ರಿವಾಲ್ ಅವರು ಮಾತುಕತೆ ನಡೆಸಿದ್ದು, ಸದ್ಯದಲ್ಲೇ ವಿದ್ಯುತ್ ದರವನ್ನೂ ಕಡಿತಗೊಳಿಸಲಾಗುವುದು ಎಂದು ಅವಅರು ತಿಳಿಸಿದ್ದಾರೆ.

ಕೇಜ್ರಿವಾಲ್ ಗೆ ಇಂದಿರಾಗಾಂಧಿಯಂತೆ ಹತ್ಯೆಯ ಭೀತಿ ಏಕೆ?ಕೇಜ್ರಿವಾಲ್ ಗೆ ಇಂದಿರಾಗಾಂಧಿಯಂತೆ ಹತ್ಯೆಯ ಭೀತಿ ಏಕೆ?

2020 ರಲ್ಲಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಲೋಕಸಭೆ ಚುನಾವಣೆಯ ಕಳಪೆ ಪ್ರದರ್ಶನದಿಂದ ಆತಂಕಗೊಂದಿರುವ ಎಎಪಿ ಈಗಿನಿಂದಲೇ ವಿಧಾನಸಭೆ ಚುನಾವಣೆಯ ಗೆಲುವಿಗೆ ಪ್ರಯತ್ನ ನಡೆಸುತ್ತಿದೆ.

English summary
Delhi chief minister and Aam Aadmi party leader keeping an eye on assembly elections which is due early next year, planning to make metro and bus travel free for women in Delhi “to encourage them to use public transport”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X