ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಕ್ಟರ್‌, ನರ್ಸ್ ನಿಯೋಜನೆ ಮಾಡಿ; ಅರವಿಂದ ಕೇಜ್ರಿವಾಲ್ ಪತ್ರ

|
Google Oneindia Kannada News

ನವದೆಹಲಿ, ಜೂನ್ 23 : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದಿದ್ದಾರೆ. ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 62,655ಕ್ಕೆ ಏರಿಕೆಯಾಗಿದ್ದು, ರಾಜ್ಯ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ.

Recommended Video

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಬಾರಿ ಮಳೆ | Weather Forecast | KSNDMC | Oneindia Kannada

ಮಂಗಳವಾರ ಅರವಿಂದ ಕೇಜ್ರಿವಾಲ್ ಅಮಿತ್‌ಗೆ ಶಾಗೆ ಪತ್ರ ಬರೆದಿದ್ದಾರೆ. ದಕ್ಷಿಣ ದೆಹಲಿಯ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕ್ಯಾಂಪಸ್‌ನಲ್ಲಿ ಕೋವಿಡ್ ಸೋಕಿತರಿಗೆ ಚಿಕಿತ್ಸೆ ನೀಡಲು ನಿರ್ಮಾಣ ಮಾಡಿರುವ ತಾತ್ಕಾಲಿಕ ಆಸ್ಪತ್ರೆ ವೀಕ್ಷಣೆ ಮಾಡುವಂತೆ ಆಹ್ವಾನ ನೀಡಿದ್ದಾರೆ.

ಕೋವಿಡ್ - 19 ಸೋಂಕು; ದೇಶದಲ್ಲಿ 2ನೇ ಸ್ಥಾನಕ್ಕೆ ಬಂದ ದೆಹಲಿ ಕೋವಿಡ್ - 19 ಸೋಂಕು; ದೇಶದಲ್ಲಿ 2ನೇ ಸ್ಥಾನಕ್ಕೆ ಬಂದ ದೆಹಲಿ

ದೆಹಲಿ ಸರ್ಕಾರ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕ್ಯಾಂಪಸ್‌ನಲ್ಲಿ 10 ಸಾವಿರ ಹಾಸಿಗೆಗಳ ಐಸೋಲೇಷನ್ ವಾರ್ಡ್‌ಗಳನ್ನು ನಿರ್ಮಾಣ ಮಾಡಿದೆ. ರಾಜ್ಯದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗಿದೆ.

ಕೋವಿಡ್-19 ನಿಭಾಯಿಸುವಲ್ಲಿ ಸರ್ಕಾರ ತಪ್ಪು ಮಾಡಿದೆ - ಅಮಿತ್ ಶಾಕೋವಿಡ್-19 ನಿಭಾಯಿಸುವಲ್ಲಿ ಸರ್ಕಾರ ತಪ್ಪು ಮಾಡಿದೆ - ಅಮಿತ್ ಶಾ

ಈ ಕ್ಯಾಂಪಸ್‌ನಲ್ಲಿರುವ ಆಸ್ಪತ್ರೆಗೆ ಡಾಕ್ಟರ್ ಮತ್ತು ನರ್ಸ್‌ಗಳನ್ನು ಐಟಿಬಿಪಿ ಮತ್ತು ಸೇನೆಯಿಂದ ನಿಯೋಜನೆ ಮಾಡಬೇಕು ಎಂದು ಅರವಿಂದ ಕೇಜ್ರಿವಾಲ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

ದೆಹಲಿ ಸಚಿವ ಸತ್ಯಂದರ್ ಜೈನ್ ಸ್ಥಿತಿ ಗಂಭೀರ, ಪ್ಲಾಸ್ಮಾ ಥೆರಪಿಗೆ ನಿರ್ಧಾರದೆಹಲಿ ಸಚಿವ ಸತ್ಯಂದರ್ ಜೈನ್ ಸ್ಥಿತಿ ಗಂಭೀರ, ಪ್ಲಾಸ್ಮಾ ಥೆರಪಿಗೆ ನಿರ್ಧಾರ

ಅಮಿತ್ ಶಾ ಸಭೆ ನಡೆಸಿದ್ದರು

ಅಮಿತ್ ಶಾ ಸಭೆ ನಡೆಸಿದ್ದರು

ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಮಿತ್ ಶಾ ಅರವಿಂದ ಕೇಜ್ರಿವಾಲ್ ಜೊತೆ ಕಳೆದ ವಾರ ಸಭೆ ನಡೆಸಿದ್ದರು. ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು.

ರೈಲ್ವೆ ಕೋಚ್‌ ಕಳಿಸಲಾಗಿತ್ತು

ರೈಲ್ವೆ ಕೋಚ್‌ ಕಳಿಸಲಾಗಿತ್ತು

ಗೃಹ ಸಚಿವರ ಜೊತೆಗಿನ ಸಭೆ ಬಳಿಕ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ರೈಲ್ವೆ ಐಸೋಲೇಷನ್‌ ವಾರ್ಡ್‌ಗಳನ್ನು ಹಂಚಿಕೆ ಮಾಡಿತ್ತು. ದೆಹಲಿಯಲ್ಲಿಯೂ ಆಸ್ಪತ್ರೆಗಳ ಕೊರತೆ ಉಂಟಾಗುವುದನ್ನು ತಡೆಯಲು 503 ವಾರ್ಡ್‌ಗಳನ್ನು ನೀಡಲಾಗಿತ್ತು.

10 ಸಾವಿರ ಬೆಡ್ ಆಸ್ಪತ್ರೆ

10 ಸಾವಿರ ಬೆಡ್ ಆಸ್ಪತ್ರೆ

ದೆಹಲಿ ಸರ್ಕಾರ ದಕ್ಷಿಣ ದೆಹಲಿಯ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕ್ಯಾಂಪಸ್‌ನಲ್ಲಿ ಕೋವಿಡ್ -19 ಸೋಕಿತರಿಗೆ ಚಿಕಿತ್ಸೆ ನೀಡಲು 10 ಸಾವಿರ ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಿದೆ. ಇದನ್ನು ವೀಕ್ಷಣೆ ಮಾಡುವಂತೆ, ವೈದ್ಯ ಮತ್ತು ನರ್ಸ್‌ಗಳನ್ನು ಒದಗಿಸುವಂತೆ ಅರವಿಂದ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.

2ನೇ ಸ್ಥಾನದಲ್ಲಿ ದೆಹಲಿ

2ನೇ ಸ್ಥಾನದಲ್ಲಿ ದೆಹಲಿ

ನವದೆಹಲಿಯಲ್ಲಿ ಸೋವಾರ 2909 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖವಾಗಿವೆ. ಈ ಮೂಲಕ ದೇಶದಲ್ಲಿನ ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ದೆಹಲಿ 2ನೇ ಸ್ಥಾನಕ್ಕೆ ಏರಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 62,655.

English summary
Delhi CM Arvind Kejriwal in a letter to union home minister Amit Shah requested for deployment of doctors and nurses from ITBP and Army to COVID care centre at Radha Soami Satsang Beas campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X