ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತ ಶಿಕ್ಷಣ, ವಿದ್ಯುತ್‌, ಆರೋಗ್ಯ ಸೇವೆಗೆ ಕೇಜ್ರಿವಾಲ್ ಆಗ್ರಹ

|
Google Oneindia Kannada News

ನವದೆಹಲಿ,ಆಗಸ್ಟ್‌.8: ದೇಶದ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ, 300 ಯೂನಿಟ್ ವಿದ್ಯುತ್ ಮತ್ತು ನಿರುದ್ಯೋಗ ಭತ್ಯೆ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಸೋಮವಾರ ಒತ್ತಾಯಿಸಿದ್ದಾರೆ.

ದೇಶದ ಶಾಂತಿಯುತ ವಾತಾವರಣವನ್ನು ಕದಡುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಉಚಿತ ಶಿಕ್ಷಣ, ಉಚಿತ ವಿದ್ಯುತ್, ಉಚಿತ ನೀರು ನೀಡುವುದು ಅಪರಾಧ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.

ದೆಹಲಿಯಲ್ಲಿ ಮದ್ಯ ನೀತಿ ರಾದ್ಧಾಂತ: ಹೆಂಡಕ್ಕಾಗಿ ಉದ್ದುದ್ದ ಕ್ಯೂ!ದೆಹಲಿಯಲ್ಲಿ ಮದ್ಯ ನೀತಿ ರಾದ್ಧಾಂತ: ಹೆಂಡಕ್ಕಾಗಿ ಉದ್ದುದ್ದ ಕ್ಯೂ!

ಬಿಜೆಪಿ ಕೆಲವರ 10 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಅವರಲ್ಲಿ ಕೆಲವರು ಅವರಿಗೆ ಸ್ನೇಹಿತರಿದ್ದಾರೆ ಎಂದು ಜನಮಾನಸದಲ್ಲಿ ಹೇಳಲಾಗುತ್ತಿದೆ. ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಉತ್ತಮ ಶಿಕ್ಷಣ, ಆರೋಗ್ಯ, 300 ಯೂನಿಟ್ ವಿದ್ಯುತ್ ಮತ್ತು ನಿರುದ್ಯೋಗ ಭತ್ಯೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ, ಇದನ್ನು ರೇವಡಿ ಎಂದು ಕರೆಯುವವರು ದೇಶದ್ರೋಹಿಗಳು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೇಶದ ಅಭಿವೃದ್ಧಿಗೆ ಅಪಾಯಕಾರಿ

ದೇಶದ ಅಭಿವೃದ್ಧಿಗೆ ಅಪಾಯಕಾರಿ

ಈ ವರ್ಷದ ಜುಲೈನಲ್ಲಿ ಪ್ರಧಾನಿ ಮೋದಿಯವರು, ದೆಹಲಿಯ ಈ ರೆವ್ಡಿ ಸಂಸ್ಕೃತಿ (ಅಥವಾ ಫ್ರೀಬಿಸ್ ಸಂಸ್ಕೃತಿ) ದೇಶದ ಅಭಿವೃದ್ಧಿಗೆ ಅಪಾಯಕಾರಿ. ರೆವ್ಡಿ ಸಂಸ್ಕೃತಿ ಹೊಂದಿರುವವರು ನಿಮಗಾಗಿ ಹೊಸ ಎಕ್ಸ್‌ಪ್ರೆಸ್‌ವೇಗಳನ್ನು, ಹೊಸ ವಿಮಾನ ನಿಲ್ದಾಣಗಳನ್ನು ಅಥವಾ ರಕ್ಷಣಾ ಕಾರಿಡಾರ್‌ಗಳನ್ನು ಎಂದಿಗೂ ನಿರ್ಮಿಸುವುದಿಲ್ಲ. ಒಟ್ಟಾಗಿ ನಾವು ಈ ಮನಸ್ಥಿತಿಯನ್ನು ಸೋಲಿಸಬೇಕು, ದೇಶದ ರಾಜಕೀಯದಿಂದ ರೇವಡಿ ಸಂಸ್ಕೃತಿಯನ್ನು ತೊಡೆದುಹಾಕಬೇಕು ಎಂದು ಹೇಳಿದ್ದರು.

ಹಳೆಯ ಮದ್ಯ ನೀತಿ ಮುಂದುವರಿಸಲು ದೆಹಲಿ ಸರ್ಕಾರ ನಿರ್ಧಾರಹಳೆಯ ಮದ್ಯ ನೀತಿ ಮುಂದುವರಿಸಲು ದೆಹಲಿ ಸರ್ಕಾರ ನಿರ್ಧಾರ

ಉಚಿತವಾಗಿ ಎಲ್ಲವನ್ನು ಹಂಚುತ್ತಿದ್ದಾರೆ

ಉಚಿತವಾಗಿ ಎಲ್ಲವನ್ನು ಹಂಚುತ್ತಿದ್ದಾರೆ

ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಭಾನುವಾರ ಗುಜರಾತ್‌ನಲ್ಲಿ ಮಾತನಾಡಿ, "ಹಣ ಲೂಟಿ ಮಾಡುತ್ತಿದ್ದಾರೆ, ಉಚಿತವಾಗಿ ಎಲ್ಲವನ್ನು ಹಂಚುತ್ತಿದ್ದಾರೆ ಎಂದು ಈ ಜನರು ನನ್ನನ್ನು ನಿಂದಿಸುತ್ತಾರೆ. ಆದರೆ ಕೇಜ್ರಿವಾಲ್ ಅವರು ಹಣದೊಂದಿಗೆ ಸ್ವಿಸ್ ಬ್ಯಾಂಕ್‌ಗೆ ಹೋಗಿಲ್ಲ, ಅವರು ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿಲ್ಲ" ಎಂದು ಹೇಳಿದರು.

ಎಎಪಿ ಮತ್ತು ಬಿಜೆಪಿ ನಡುವೆ ಗುದ್ದಾಟ

ಎಎಪಿ ಮತ್ತು ಬಿಜೆಪಿ ನಡುವೆ ಗುದ್ದಾಟ

"ಗುಜರಾತ್ ಕಾಂಗ್ರೆಸ್ ಅಲ್ಲಿನ ಬಿಜೆಪಿ ಘಟಕದೊಂದಿಗೆ ವಿಲೀನಗೊಳ್ಳಲಿದೆ. ಏಕೆಂದರೆ ಅವರ ನಡುವೆ ಪರಸ್ಪರ ಪ್ರೀತಿ ಇದೆ. ಗುಜರಾತ್ ಚುನಾವಣೆಯು ಎಎಪಿ ಮತ್ತು ಬಿಜೆಪಿ ನಡುವೆ ನಡೆಯಲಿದೆ. ಗುಜರಾತ್ ಕಾಂಗ್ರೆಸ್ ಗುಜರಾತ್ ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ. ಒಂದು ಕಡೆ ಬಿಜೆಪಿ- ಕಾಂಗ್ರೆಸ್‌ನ ಪ್ರೀತಿ ಕೊನೆಗೊಳ್ಳುತ್ತದೆ. 27 ವರ್ಷಗಳ ಬಿಜೆಪಿ ದುರಾಡಳಿತ ಮತ್ತು ಮತ್ತೊಂದೆಡೆ ಎಎಪಿಯ ಹೊಸ ರಾಜಕೀಯ ಮುಂಬರಲಿದೆ" ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.

25 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್‌

25 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್‌

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಕೇಜ್ರಿವಾಲ್ ಅವರು ಭಾನುವಾರ ಗುಜರಾತ್‌ನ ಜನರಿಗೆ ಉಚಿತ ವಿದ್ಯುತ್ ಪೂರೈಕೆಯಿಂದ ಹಿಡಿದು ರಾಜ್ಯದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವವರೆಗೆ ಹಲವಾರು ಭರವಸೆಗಳನ್ನು ನೀಡಿದ್ದಾರೆ.

ಪಂಜಾಬ್‌ನಲ್ಲಿ ಸುಮಾರು 25 ಲಕ್ಷ ಮನೆಗಳು ಇತ್ತೀಚೆಗೆ ಶೂನ್ಯ ರೂಪಾಯಿಯ ವಿದ್ಯುತ್ ಬಿಲ್‌ಗಳನ್ನು ಪಡೆದಿವೆ. ದೆಹಲಿಯಲ್ಲಿ ವಾಸಿಸುವ ಅನೇಕ ಜನರು ಸಹ ಅದೇ ಸವಲತ್ತು ಹೊಂದಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹೇಳಿದ್ದಾರೆ. ಪಂಜಾಬ್ ಮತ್ತು ದೆಹಲಿ ಎರಡರಲ್ಲೂ ಎಎಪಿ ಅಧಿಕಾರದಲ್ಲಿದೆ. ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಅರವಿಂದ್ ಕೇಜ್ರಿವಾಲ್ ತಮ್ಮ ಪ್ರಚಾರದ ಭಾಗವಾಗಿ ಶನಿವಾರದಿಂದ ಎರಡು ದಿನಗಳ ಗುಜರಾತ್ ಭೇಟಿಯಲ್ಲಿದ್ದರು.

English summary
Delhi Chief Minister Arvind Kejriwal on Monday urged the central government to provide better education, health, 300 units of electricity and unemployment benefits to the people of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X