ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಮಾಜಿ ಸ್ಪೀಕರ್ ರಮೇಶ್ ಶ್ಲಾಘನೆ

|
Google Oneindia Kannada News

ನವದೆಹಲಿ, ಸೆ. 10: ಕರ್ನಾಟಕದ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‍ ರವರು ದೆಹಲಿ ಶಾಲೆಗಳ ಗುಣಮಟ್ಟವನ್ನು ನೋಡಿ ಸಂತೋಷಸಹಿತ ಆಶ್ಚರ್ಯ ವ್ಯಕ್ತಪಡಿಸಿ, ಅರವಿಂದ ಕೇಜ್ರಿವಾಲ್‍ರಂತಹ ಪ್ರಾಮಾಣಿಕ ನಾಯಕರ ಅಗತ್ಯ ದೇಶಕ್ಕಿದೆ ಎಂದಿದ್ದಾರೆ.

Recommended Video

ಮೋದಿ ಬಗ್ಗೆ ಕೇಜ್ರಿವಾಲ್ ಹೇಳಿದ ಮಾತು ಕೇಳಿ ಎಲ್ಲರೂ ಶಾಕ್..? | arvind kejriwal

ಸಾರ್ವಜನಿಕ ಶಿಕ್ಷಣ ಕ್ಷೇತ್ರವು ಖಾಸಗೀಕರಣಗೊಂಡು ಖಾಸಗಿಯವರು ಮೇಲುಗೈ ಸಾಧಿಸಿದ್ದು, ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿ ಮಾರಾಟಕ್ಕಿಟ್ಟಿರುವ ಸಂದರ್ಭದಲ್ಲಿ ಶಿಕ್ಷಣವು ಕೆಲವೇ ಕೆಲವು ಜನರ ಸ್ವತ್ತಾಗುತ್ತಿದೆ.

ಐಐಟಿಯಲ್ಲಿ ದರ್ಜಿ ಮಗನೊಂದಿಗೆ ನನ್ನ ಮಗನೂ ಓದುತ್ತಾನೆ: ಕೇಜ್ರಿವಾಲ್ಐಐಟಿಯಲ್ಲಿ ದರ್ಜಿ ಮಗನೊಂದಿಗೆ ನನ್ನ ಮಗನೂ ಓದುತ್ತಾನೆ: ಕೇಜ್ರಿವಾಲ್

ಕೆಳವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟನ್ನು ಬಗೆಹರಿಸಲು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಉತ್ತಮ ತರಬೇತಿ ಪಡೆದ ಶಿಕ್ಷಕರ ಜೊತೆಗೆ ದೂರದೃಷ್ಟಿಯುಳ್ಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸರ್ಕಾರವೂ ಕೈಜೋಡಿಸಬೇಕು. ಅಂತಹ ಮೌಲ್ಯಯುತವಾದ ಕೆಲಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿದ್ದಾರೆ.

Arvind Kejriwal brought a silent revolution in government schools: Ramesh Kumar

ಭಾರತದಂತಹ ದೇಶದಲ್ಲಿ ಸರ್ಕಾರವೊಂದು ಇಂತಹ ಅದ್ಭುತವಾದ, ಉತ್ತಮ ಗುಣಮಟ್ಟದ ಶಾಲೆಗಳನ್ನು ಕಟ್ಟಲು ಸಾಧ್ಯವೇ ಎಂದು ಆಶ್ಚರ್ಯವಾಯಿತು. ಖಾಸಗಿ ಶಾಲೆಗಳನ್ನು ಮೀರಿಸುವಂತಹ ಅತ್ಯುತ್ತಮ ದರ್ಜೆಗೆ ಸರ್ಕಾರಿ ಶಾಲೆಗಳನ್ನು ಏರಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಕ್ಕಳ ಬದುಕಿಗೆ ಅರ್ಥ ಕಲ್ಪಿಸಿದ್ದಾರೆ.

ಶಾಲೆಗಳಲ್ಲಿ ಶಿಕ್ಷಕರ ಬದ್ಧತೆ ಮತ್ತು ಮಕ್ಕಳ ಮೇಲೆ ಅವರಿಗಿರುವ ಕಾಳಜಿಯು ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಒಂದು ರಾಜ್ಯದ ಅಥವಾ ದೇಶದ ನಾಯಕತ್ವ ವಹಿಸಿಕೊಂಡವರಿಗೆ ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿಯ ಹೃದಯವಿದ್ದರೆ ಅದ್ಭುತವಾದ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಅರವಿಂದ ಕೇಜ್ರಿವಾಲ್ರವರ ಪರಿಶ್ರಮವೇ ಸಾಕ್ಷಿ.

ಕರ್ನಾಟಕದ 1 ನಕಲಿ ವಿವಿ ಸೇರಿ 23 ಅನಧಿಕೃತ ಸಂಸ್ಥೆ ಪಟ್ಟಿ ಬಹಿರಂಗಕರ್ನಾಟಕದ 1 ನಕಲಿ ವಿವಿ ಸೇರಿ 23 ಅನಧಿಕೃತ ಸಂಸ್ಥೆ ಪಟ್ಟಿ ಬಹಿರಂಗ

ಶಿಕ್ಷಣವನ್ನು ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಕೆಳ ವರ್ಗದ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣವನ್ನು ಕೊಡುವ ಮೌನ ಕ್ರಾಂತಿಯನ್ನೇ ಮಾಡಿದ್ದಾರೆ. ಅರವಿಂದ ಕೇಜ್ರಿವಾಲ್ರವರ ಕಾರ್ಯದಕ್ಷತೆಯನ್ನು ನೋಡಿ ನಾನು ನಿಜವಾಗಿಯೂ ಚಕಿತಗೊಂಡಿದ್ದೇನೆ ಎಂದಿದ್ದಾರೆ.

ದೇಶದ ಎಲ್ಲಾ ಜನವರ್ಗಗಳ ಕೈಗೆಟಕುವಂತಹ, ಸರ್ಕಾರವೇ ಜಾರಿಗೆ ತರುವ ಗುಣಮಟ್ಟದ ಸರ್ಕಾರಿ ಶಾಲಾ ಶಿಕ್ಷಣದಿಂದ ಮಾತ್ರ ದೇಶವು ಬಡತನ ಮತ್ತು ಸಾಮಾಜಿಕ ದಾರಿದ್ರ್ಯಗಳಿಂದ ಬಿಡಿಸಿಕೊಂಡು ಮೇಲೇಳಲು ಸಾಧ್ಯ. ಅಂತಹ ಅದ್ಭುತವಾದ ಸಾಧನೆಯನ್ನು ದೆಹಲಿಯ ಕೇಜ್ರಿವಾಲ್ ಅವರ ಸರ್ಕಾರ ಮಾಡಿದೆ. ಇಡೀ ದೇಶವು ಇವರ ಮಾರ್ಗವನ್ನು ಅನುಸರಿಸಿದರೆ ದೇಶಕ್ಕೆ ಒಳ್ಳೆಯ ಭವಿಷ್ಯವಿದೆ, ದೇಶವು ಮುಂಚೂಣಿ ರಾಷ್ಟ್ರವಾಗಿ ಬೆಳೆಯಲಿದೆ ಎಂದು ರಮೇಶ್ ಕುಮಾರ್ ಹೇಳಿದರು.

English summary
On his visit to Delhi, former Karnataka assembly speaker and cabinet minister Ramesh Kumar expressed surprise and happiness about the standards of the Delhi government schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X