ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ತೆರವು; ಜನರ ಸಲಹೆ ಕೇಳಿದ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಮೇ 12 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇ 17ರ ಬಳಿಕ ಲಾಕ್ ಡೌನ್‌ನಲ್ಲಿ ವಿನಾಯಿತಿ ನೀಡಲು ಜನರ ಸಲಹೆ ಕೇಳಿದ್ದಾರೆ. ದೆಹಲಿಯಲ್ಲಿ ಇದುವರೆಗೂ 7639 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 86 ಜನರು ಮೃತಪಟ್ಟಿದ್ದಾರೆ.

Recommended Video

ಇಂದಿನಿಂದ ರೈಲ್ವೇ ಸಂಚಾರ ಪ್ರಾರಂಭ , ಹಾಗಂತ ಎಲ್ಲಾ ರೈಲುಗಳು ಓಡಾಡೋದಿಲ್ಲ | Railways | Oneindia Kannada

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರ ಸಲಹೆ ಕೇಳಿದ್ದಾರೆ. ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಬೇಕು ಎಂದು ಸಭೆಯಲ್ಲಿ ಕೇಜ್ರಿವಾಲ್ ಮನವಿ ಮಾಡಿದ್ದರು.

ಬೆಂಗಳೂರು-ದೆಹಲಿ ರೈಲಿನ ಟಿಕೆಟ್ ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್! ಬೆಂಗಳೂರು-ದೆಹಲಿ ರೈಲಿನ ಟಿಕೆಟ್ ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್!

ಮೇ 17ರ ಬಳಿಕ ಯಾವ ಸೇವೆಗಳು ಅಗತ್ಯವಾಗಿ ಬೇಕು ಎಂದು ಜನರು ತಮ್ಮ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ಮೇ 13ರ ಸಂಜೆಯೊಳಗೆ ಸಲ್ಲಿಸಬೇಕು. ಎಲ್ಲಾ ಸಲಹೆಗಳನ್ನು ಪರಿಶೀಲಿಸಿ ಸರ್ಕಾರ ತನ್ನ ತೀರ್ಮಾನವನ್ನು ಕೈಗೊಳ್ಳಲಿದೆ.

ಕನ್ನಡಿಗರಿಗಾಗಿ ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು ಕನ್ನಡಿಗರಿಗಾಗಿ ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು

Arvind Kejriwal Asked People For Suggestions On Lockdown Post May 17

ಜನರು 1031 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಲಹೆ ನೀಡಬಹುದು. 8800007722 ನಂಬರ್‌ಗೆ ವಾಟ್ಸಪ್ ಸಂದೇಶ ಕಳಿಸಬಹುದು. [email protected] ವಿಳಾಸಕ್ಕೆ ಇ-ಮೇಲ್ ಕಳಿಸಬಹುದಾಗಿದೆ.

ದೇಶದಲ್ಲಿ 130 ಜಿಲ್ಲೆ ರೆಡ್ ಜೋನ್: ದೆಹಲಿ, ಮುಂಬೈ, ಬೆಂಗಳೂರು ಡೇಂಜರ್ದೇಶದಲ್ಲಿ 130 ಜಿಲ್ಲೆ ರೆಡ್ ಜೋನ್: ದೆಹಲಿ, ಮುಂಬೈ, ಬೆಂಗಳೂರು ಡೇಂಜರ್

ದೆಹಲಿಯ ಎಲ್ಲಾ 11 ಜಿಲ್ಲೆಗಳನ್ನು ಕೆಂಪು ವಲಯ ಎಂದು ಗುರುತಿಸಿರುವುದು ಸರಿಯಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಲು ಅನುಮತಿ ನೀಡಬೇಕು ಎಂದು ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ದೆಹಲಿಯಲ್ಲಿ ಕೊರೊನಾ ಕೆಂಪು ವಲಯಗಳನ್ನು ವಾರ್ಡ್ ಆಧಾರದ ಮೇಲೆ ಗುರುತಿಸಿ, ಜಿಲ್ಲೆಯ ಆಧಾರದ ಮೇಲೆ ಅಲ್ಲ ಎಂಬುದು ಸರ್ಕಾರದ ವಾದವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಡೀ ದೆಹಲಿಯನ್ನು ಕೆಂಪು ವಲಯ ಎಂದು ಘೋಷಣೆ ಮಾಡಿದೆ.

English summary
Delhi CM Arvind Kejriwal has asked people for suggestions on lockdown post May 17. Union Health Ministry announced entire Delhi as red zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X