ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭಾಷಣ ಮಾಡುವಾಗ 'ನಿದ್ದೆ'ಗೆ ಜಾರಿದ ಧುರೀಣರು!

By Prasad
|
Google Oneindia Kannada News

ನವದೆಹಲಿ, ಆಗಸ್ಟ್ 15 : ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲು ನಿಂತರೆ ದೇಶದ ಜನತೆ ಮಾತ್ರವಲ್ಲ, ಇಡೀ ವಿಶ್ವ ಮೈಯೆಲ್ಲಾ ಕಿವಿಯಾಗಿ ಕೇಳುತ್ತದೆ. ಆ ಪ್ರಖರತೆ ಅವರ ಮಾತಿನ ಮೋಡಿಯಲ್ಲಿದೆ. ಗಡದ್ ನಿದ್ದೆಯಲ್ಲಿದ್ದರೂ ಎದ್ದು ಕುಳಿತು ಅವರ ವಾಕ್ಚಾತುರ್ಯ ಭರಿತ ಭಾಷಣವನ್ನು ಆಲಿಸಬೇಕು.

ಅಂಥದ್ದರಲ್ಲಿ, ವಿರೋಧಿಗಳನ್ನು ಗಡಗಡನೆ ನಡುಗಿಸಬಲ್ಲ ಮಾತಿನಮಲ್ಲರೇ ಗುರುಗುರು ನಿದ್ದೆ ಹೊಡೆಯುತ್ತ ಕುಳಿತರೆ ಹೇಗೆ? ಅಥವಾ ನಿದ್ದೆಯ ಭಂಗಿಯಲ್ಲಿ ದೇಶದ ಬಗ್ಗೆ 'ಚಿಂತನೆ' ಮಾಡುತ್ತ ಕುಳಿತರೆ ಹೇಗೆ? ಇಂಥದ್ದೇ ದೃಶ್ಯಗಳು ಕಂಡುಬಂದಿದ್ದು, 70ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ನರೇಂದ್ರ ಮೋದಿಯವರು ಪೇಟ ಸುತ್ತಿಕೊಂಡು ಪಟ್ಟಾಗಿ ಮಾತಿಗೆ ನಿಂತಾಗ! [70ನೇ ಸ್ವಾತಂತ್ರ್ಯೋತ್ಸವ : ಮೋದಿ ಭಾಷಣದ ಮುಖ್ಯಾಂಶಗಳು]

ಮೋದಿಯವರನ್ನು, ಅವರ ರಾಜನೀತಿಗಳನ್ನು ವಾಚಮಗೋಚರವಾಗಿ ಶಪಿಸುವ, ದೆಹಲಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಅರವಿಂದ್ ಕೇಜ್ರಿವಾಲ್ ಅವರು ಇಂಥದೊಂದು ಭಂಗಿಯಲ್ಲಿ ಕುಳಿತಿದ್ದಾಗ ಕಿಲಾಡಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇದು ಮೋದಿ ಅವರ ಭಾಷಣದ ಬಗ್ಗೆ ಇದ್ದ ಧೋರಣೆಯೋ ಅಥವಾ 94 ನಿಮಿಷಗಳ ಮೋದಿ ಭಾಷಣ ಅವರಿಗೆ ತೀರಾ ಬೋರು ಹೊಡೆಸಿತೋ? [ಬೆತ್ತಲೆ ಮಲ್ಕೊಂಡರ ದೊಡ್ಡ ಕನಸ ಬೀಳ್ತಾವ!]

Arvind Kejriwal, Arun Jaitley nap as Modi speaks

ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡಿ. 'ಐಸೆ ಭಾಷಣ್ ಕೋ ಮೈನೇ ಬಹುತ್ ಸುನಾ ಹೈ' ಅಂತ ಜಾರಿದ್ದರೂ ಜಾರಿರಬಹುದು. ಆದರೆ, ದೇಶದ ರಕ್ಷಣೆಯ ಹೊಣೆ ಹೊತ್ತಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಲು ಪಣತೊಟ್ಟಿರುವ ಅರುಣ್ ಜೇಟ್ಲಿ ಅವರಿಗೇನಾಗಿತ್ತು?

ಅವರಿಬ್ಬರು ಕೂಡ, ಅದೇ ನಿದ್ರಾಭಂಗಿಯಲ್ಲಿ ಏಕಕಾಲಕ್ಕೆ ಕಾಣಿಸಿಕೊಂಡರು. ಅಲ್ಲಿ ನೋಡಿದರೆ, ಪಾಕಿಸ್ತಾನ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ಕಾಶ್ಮೀರದಲ್ಲಿ ದಾಳಿಗೆ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗುತ್ತಿರುವ ಗ್ರೆನೇಡುಗಳ, ಗುಂಡುಗಳ ಸದ್ದು ಕನ್ಯಾಕುಮಾರಿಗೂ ಕೇಳಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ... ಅಥವಾ ಅವರು ಕಣ್ಣುರೆಪ್ಪೆ ಮುಚ್ಚಿದ್ದಕ್ಕೂ ಕ್ಯಾಮೆರಾ ಕ್ಲಿಕ್ ಆಗಿದ್ದಕ್ಕೂ ಸರಿಹೋಯಿತಾ? [ನಾಚಿಕೆಗೇಡು! ಸದನದಲ್ಲಿ ಸಿಎಂ 'ನಿದ್ದೆ'ರಾಮಯ್ಯ ಆಗ್ತಾರೆ]

Arvind Kejriwal, Arun Jaitley nap as Modi speaks

94 ನಿಮಿಷಗಳ ಸುದೀರ್ಘ ಭಾಷಣ ಮಾಡಿರುವ ನರೇಂದ್ರ ಮೋದಿ ಅವರು ಹಲವಾರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಉದ್ದುದ್ದ ಭಾಷಣದ ದಾಖಲೆಯನ್ನೂ ಮುರಿದಿದ್ದಾರೆ. ಸಾಕಷ್ಟು ಅಂಕಿಸಂಖ್ಯೆಗಳು, ಒಂದಿಷ್ಟು ಸಂದೇಶ, ಮತ್ತೊಂದಿಷ್ಟು ಸಾಧನೆಗಳು, ಕಡೆಗೆ ಪಾಕಿಸ್ತಾನಕ್ಕೆ ಮಾತಿನ ಚಾಟಿಯಿಂದ ಕೂಡಿದ್ದ ಭಾಷಣ ಎಂಥ ಕುಂಭಕರ್ಣವನ್ನೂ ಬಡಿದೆಬ್ಬಿಸುವಂತಿತ್ತು.

ಆಮ್ಮ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರ ಪ್ರಕಾರ, ಬಹುಶಃ ನರೇಂದ್ರ ಮೋದಿ ಅವರ ಭಾಷಣ 'ಬೋರಿಂಗ್' ಆಗಿತ್ತಂತೆ! ಮತ್ತೊಬ್ಬರು ಅವರಿವರಿರಲಿ, ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನೂ ನಿದ್ದೆಗೆ ತಳ್ಳುವಂತಿತ್ತು ಮೋದಿ ಭಾಷಣ. ಇದಕ್ಕೆ ನಿಮ್ಮ ಅಭಿಪ್ರಾಯವೇನು? [ಪಲ್ಲಂಗ ಶಯನ್ ಮತ್ತು ಸ್ವಪ್ನಧರ್ ನಿದ್ರಾಪುರಾಣ]

English summary
Narendra Modi'e are speeches are so powerful, it awakes anyone who is listening to it. But, what happened to Arun Jaitley, Manohar Parrikar, and his bete noire Arvind Kejriwal? Was Modi's speech so boring? Or is it the timing of camera click that did the trick?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X