ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

200 ಯೂನಿಟ್ಸ್‌ವರೆಗಿನ ವಿದ್ಯುತ್ ಬಳಕೆ ಉಚಿತ: ನಂತರ ಅರ್ಧ ಬೆಲೆ ಮಾತ್ರ

|
Google Oneindia Kannada News

ನವದೆಹಲಿ, ಆಗಸ್ಟ್ 1: ಇನ್ನುಮುಂದೆ 200 ಯೂನಿಟ್ಸ್ವರೆಗಿನ ವಿದ್ಯುತ್ ಬಳಕೆ ಉಚಿತ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಘೋಷಣೆ ಮಾಡಿದೆ.

ಚುನಾವಣೆ ಇನ್ನೇನು ಸನ್ನಿಹಿತವಾಗುತ್ತಿದೆ ಎನ್ನುವಾಗ ಈ ಘೋಷಣೆ ಮಾಡಲಾಗಿದೆ. ಕೆಲವೇ ದಿನಗಳ ಹಿಂದೆ ಮಹಿಳೆಯರಿಗೆ ಬಸ್ ಹಾಗೂ ಮೆಟ್ರೋದಲ್ಲಿ ಉಚಿತ ಪ್ರಯಾಣ ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದರು.

24/7 ವಿದ್ಯುತ್ ಪೂರೈಕೆಗೆ ನೀಲಿನಕ್ಷೆ ತಯಾರು24/7 ವಿದ್ಯುತ್ ಪೂರೈಕೆಗೆ ನೀಲಿನಕ್ಷೆ ತಯಾರು

ಸುಮಾರು 200 ಯೂನಿಟ್‌ ವರೆಗಿನ ವಿದ್ಯುತ್‌ ಅನ್ನು ಇಂದಿನಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. 201ರಿಂದ 400 ಯೂನಿಟ್‌ಗಳವರೆಗಿನ ವಿದ್ಯುತ್‌ ಬಳಕೆಗೆ ಅರ್ಧ ಬೆಲೆಯನ್ನು ವಿಧಿಸುವುದಾಗಿ ತಿಳಿಸಿದ್ದಾರೆ.

Arvind Kejriwal Announces Free Electricity in Delhi

ಅವರ ಪ್ರಕಾರ, ಬೇಸಿಗೆಯಲ್ಲಿ 200 ಯೂನಿಟ್ಸ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ದೆಹಲಿಯ ಸುಮಾರು ಶೇ. 33ರಷ್ಟು ಬಳಕೆದಾರರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಚಳಿಗಾಲದಲ್ಲಿ ಶೇ. 70ರಷ್ಟು ಜನರು 200 ಯೂನಿಟ್ಸ್‌ಗಿಂತಲೂ ಕಡಿಮೆ ವಿದ್ಯುತ್‌ ಅನ್ನು ಬಳಸುತ್ತಿದ್ದಾರೆ ಎನ್ನುತ್ತಾರೆ.

ಇನ್ನು ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಟ್ವೀಟ್‌ ಮಾಡಿ, ಉತ್ತಮ ಶಿಕ್ಷಣ ಮತ್ತು ಆರೋಗ್ಯದ ರಕ್ಷಣೆಯಂತೆಯೇ ಮನೆಯಲ್ಲಿ ದೀಪ ಅಥವಾ ಫ್ಯಾನ್‌ಗಳನ್ನು ಚಲಾಯಿಸಲು ಮೂಲಭೂತ ಪ್ರಮಾಣದ ವಿದ್ಯುತ್ ಅತ್ಯಗತ್ಯ ಎಂದು ಟ್ವೀಟ್‌ ಮಾಡಿ ಪೆಹಲೆ ಹಾಫ್‌ ಅಬ್‌ ಮಾಫ್‌ ಎಂಬ ಹ್ಯಾಷ್‌ಟ್ಯಾಗ್‌ ಹಾಕಿದ್ದಾರೆ.

ಇಂದು ದೇಶದಲ್ಲಿ ಅಗ್ಗದ ವಿದ್ಯುತ್‌ ದೆಹಲಿಯಲ್ಲಿದೆ. ಇದು ವಿದ್ಯುತ್‌ ಉಳಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ. ವಿಐಪಿಗಳು ಮತ್ತು ದೊಡ್ಡ ರಾಜಕಾರಣಿಗಳಿಗೆ ಉಚಿತವಾಗಿ ವಿದ್ಯುತ್‌ ಸಿಕ್ಕರೆ ಸಿಕ್ಕರೆ ಯಾರೂ ಏನನ್ನೂ ಹೇಳುವುದಿಲ್ಲ. ಆದರೆ, ಸಾಮಾನ್ಯರು ಮಾತ್ರ ಏಕೆ ಇದರಿಂದ ವಂಚಿತರಾಗಬೇಕು ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

English summary
Arvind Kejriwal Announces Free Electricity in Delhi, Delhi Chief Minister Arvind Kejriwal announced on Thursday. power consumption does not exceed 200 units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X