ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಬ್, ಆಟೋ ಡ್ರೈವರ್‌ಗಳಿಗೆ ಸಿಹಿ ಸುದ್ದಿ ಕೊಟ್ಟ ಕೇಜ್ರಿವಾಲ್

|
Google Oneindia Kannada News

ನವ ದೆಹಲಿ, ಏಪ್ರಿಲ್ 2: ಕ್ಯಾಬ್, ರಿಕ್ಷಾ, ಆಟೋ, ಇ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸಿಹಿ ಸುದ್ದಿ ನೀಡಿದ್ದಾರೆ. ಈ ವಾಹನಗಳ ಡ್ರೈವರ್‌ಗಳಿಗೆ 5 ಸಾವಿರ ನೆರವು ನಡುವುದಾಗಿ ಘೋಷಣೆ ಮಾಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ವಿವರ ನೀಡಿರುವ ಅವರು ''ಲಾಕ್ ಡೌನ್‌ನಿಂದ ಕ್ಯಾಬ್, ಆಟೋ, ಟ್ಯಾಕ್ಸಿ ಡ್ರೈವರ್ ಈ ರೀತಿ ಸಾರ್ವಜನಿಕ ಸಾರಿಗೆ ಚಾಲಕರ ಪರಿಸ್ಥಿತಿ ಕಷ್ಟವಾಗಿದೆ ಎನ್ನುವ ಮನವಿಯನ್ನು ಅನೇಕರು ಮಾಡಿದರು. ಅವರೆಲ್ಲ ನನ್ನ ಅಣ್ಣತಮ್ಮಂದಿರು. ಅವರಿಗೆ ಪರಿಹಾರ ನೀಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ.'' ಎಂದು ಹೇಳಿದ್ದಾರೆ.

ವೈದ್ಯರಿಗೆ 1 ಕೋಟಿ ರುಪಾಯಿ ನೆರವು ಘೋಷಿಸಿದ ಅರವಿಂದ್ ಕೇಜ್ರಿವಾಲ್ವೈದ್ಯರಿಗೆ 1 ಕೋಟಿ ರುಪಾಯಿ ನೆರವು ಘೋಷಿಸಿದ ಅರವಿಂದ್ ಕೇಜ್ರಿವಾಲ್

''ನಮ್ಮ ಬಳಿ ನಿಮ್ಮ (ಚಾಲಕರ) ಬ್ಯಾಂಕ್ ಖಾತೆಯ ವಿವರಗಳು ಇಲ್ಲ. ಅದನ್ನು ಹೇಗೆ ಸಂಗ್ರಹ ಮಾಡಬೇಕು ಎನ್ನುವ ತಯಾರಿ ನಡೆಯುತ್ತದೆ. ಸರ್ಕಾರದ ವತಿಯಿಂದ ಎಲ್ಲ ಚಾಲಕರ ಖಾತೆಗೆ 5 ಸಾವಿರ ರೂಪಾಯಿ ನೆರವು ನೀಡಲಾಗುವುದು'' ಎಂದು ತಿಳಿಸಿದ್ದಾರೆ.

Arvind Kejriwal Announced 5000 Rupees To Auto And Cab Drivers

ಮುಂದಿನ 7 ರಿಂದ 10 ದಿನಗಳ ಒಳಗೆ ಚಾಲಕರ ಖಾತೆಗೆ ಹಣ ಜಮಾ ಆಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಲಾಕ್ ಡೌನ್‌ ಸಮಯದಲ್ಲಿ ಜನ ರಸ್ತೆಗೆ ಇಳಿಯುವ ಹಾಗಿಲ್ಲ. ವಾಹನಗಳ ಚಲಾವಣೆಗೆ ಅವಕಾಶ ಇಲ್ಲ ಹೀಗಾಗಿ ದೆಹಲಿಯ ಸಾರ್ವಜನಿಕ ಸಾರಿಗೆ ಚಾಲಕರು ಕಂಗಾಲಾಗಿದ್ದಾರೆ.

ಈವರೆಗೆ, ದೆಹಲಿಯಲ್ಲಿ 209 ಮಂದಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ನಿಜಾಮುದ್ದೀನ್ ಮರ್ಕಜ್‍ನಲ್ಲಿದ್ದ 2346 ಜನರ ಪೈಕಿ 1810 ಜನರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

English summary
Lockdown: Delhi CM Arvind Kejriwal announced 5000 rupees to auto and cab drivers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X