ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡುರಿಗೆ ಕೊವಿಡ್-19 ಸೋಂಕು

|
Google Oneindia Kannada News

ಇಟಾನಗರ್, ಸಪ್ಟೆಂಬರ್.15: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಹೋಮ್ ಐಸೋಲೇಷನ್ ನಲ್ಲಿರುವುದಾಗಿ ತಿಳಿಸಿದ್ದಾರೆ.

"ನಾನು RT-PCR ಪರೀಕ್ಷೆಗೆ ಒಳಗಾದ ಸಂದರ್ಭದಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಯಾವುದೇ ರೋಗದ ಲಕ್ಷಣಗಳಿಲ್ಲದಿದ್ದರೂ, ಆರೋಗ್ಯವಂತನಾಗಿ ಇರುವಂತೆ ಭಾಸವಾದರೂ, ಅನ್ಯರ ಸುರಕ್ಷತೆ ಮತ್ತು ಪ್ರಮಾಣಿಕ ಕಾರ್ಯ ನಿರ್ವಹಣಾ ಪದ್ಧತಿ ಅನುಗುಣವಾಗಿ ಸೆಲ್ಫ್ ಐಸೋಲೇಷನ್ ನಲ್ಲಿ ಇದ್ದೇನೆ" ಎಂದು ಪೆಮಾ ಖಂಡು ಟ್ವೀಟ್ ಮಾಡಿದ್ದಾರೆ.

Arunachal Pradesh CM Pema Khandu Tests Positive For Coronavirus

ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾರಿಗೆ ಕೊವಿಡ್-19 ಪಾಸಿಟಿವ್ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾರಿಗೆ ಕೊವಿಡ್-19 ಪಾಸಿಟಿವ್

ಇನ್ನು, ತಮ್ಮ ಜೊತೆಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕವನ್ನು ಹೊಂದಿದ್ದ ಬೆಂಬಲಿಗರು, ಸಚಿವರು ಮತ್ತು ಶಾಸಕರು ಮುನ್ನೆಚ್ಚರಿಕೆ ದೃಷ್ಟಿಯಿಂದ ಕೊರೊನಾವೈರಸ್ ಸೋಂಕಿನ ತಪಾಸಣೆ ಮಾಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಪೆಮಾ ಖಂಡು ಮನವಿ ಮಾಡಿಕೊಂಡಿದ್ದಾರೆ.

ಮೂರು ದಿನದ ಹಿಂದೆ ದೆಹಲಿಗೆ ಪ್ರಯಾಣ:

Recommended Video

Diganth ಹಾಗು Aindrita Ray ಮೊದಲ ದಿನದ ವಿಚಾರಣೆ ಹೇಗಾಯ್ತು | Oneindia Kannada

ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರು ಕಳೆದ ಮೂರು ದಿನಗಳ ಹಿಂದೆಯಷ್ಟೇ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದರು. ಆಡಳಿತಾತ್ಮಕ ಕಾರ್ಯದ ನಿಮಿತ್ತ ಸೆಪ್ಟೆಂಬರ್.12ರಂದು ನವದೆಹಲಿಗೆ ತೆರಳಿದ್ದರು. ಅಲ್ಲಿನ ನಿಯಮದ ಪ್ರಕಾರ, ಕೊವಿಡ್-19 ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ನವದೆಹಲಿಯ ನಿವಾಸದಲ್ಲಿಯೇ ಸಿಎಂ ಪೆಮಾ ಖಂಡು ಅವರು ಹೋಮ್ ಐಸೋಲೇಷನ್ ನಲ್ಲಿದ್ದಾರೆ.

English summary
Arunachal Pradesh CM Pema Khandu Tests Positive For Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X