• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್ ತೀರ್ಪು ನ್ಯಾಯಾಂಗದ ವಿಶ್ವಾಸಾರ್ಹತೆ ತಗ್ಗಿಸಿದೆ: ಅರುಣ್ ಶೌರಿ

|

ನವದೆಹಲಿ, ಫೆಬ್ರುವರಿ 11: ರಫೇಲ್ ಡೀಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ ಎಂದು ಹಿರಿಯ ಪತ್ರಕರ್ತ, ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಹೇಳಿದ್ದಾರೆ.

ರಫೇಲ್ ಒಪ್ಪಂದದ ಕುರಿತು ಸುಪ್ರೀಂಕೋರ್ಟ್‌ಗೆ ಹೋಗಿದ್ದಕ್ಕೆ ಪಶ್ಚಾತ್ತಾಪವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಇಲ್ಲ ಇಲ್ಲ, ನಾನೇಕೆ ಪಶ್ಚಾತ್ತಾಪ ಪಡಲಿ? ವಾಸ್ತವವಾಗಿ ಕೋರ್ಟ್ ನೀಡಿರುವ ತೀರ್ಪು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಕುಸಿಯುವಂತೆ ಮಾಡಿದೆ. ಸರ್ಕಾರವು ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯ ಆಧಾರದಲ್ಲಿಯಷ್ಟೇ ಪ್ರಕಟವಾಗಿದೆ. ಹೀಗಾಗಿ ನಮ್ಮ ವಾದವನ್ನು ನಾವು ಸಾಬೀತುಪಡಿಸಿದ್ದೇವೆ ಎಂದು ಹೇಳಿದರು.

ರಫೇಲ್ ಹಸ್ತಕ್ಷೇಪ : ವರದಿ ಪ್ರಕಟಿಸಿದ ಪತ್ರಿಕೆಗೆ ನಿರ್ಮಲಾ ಸವಾಲು

ಈ ಸಂಬಂಧ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತಿರುವುದಾಗಿ ಶೌರಿ ತಿಳಿಸಿದರು.

ಪತ್ರಕರ್ತರಿಂದ ನಾವು ನಿರೀಕ್ಷಿಸಿದಂತೆ ಕೆಲಸ ಮಾಡುತ್ತಿರುವ ಕೆಲವೇ ಸುದ್ದಿಪತ್ರಿಕೆ ಮತ್ತು ವಾಹಿನಿಗಳು ಉಳಿದುಕೊಂಡಿವೆ. ಪತ್ರಿಕೋದ್ಯಮವು ಎರಡೂ ಕಡೆಯ ಅಭಿಪ್ರಾಯ ಸಂಗ್ರಹಕ್ಕೆ ಸೀಮಿತವಾಗಿವೆ. ಉಳಿದವು ಸರ್ಕಾರದ ಪ್ರಚಾರ ಮಾಧ್ಯಮಗಳಾಗಿಬಿಟ್ಟಿವೆ. ವಾಸ್ತವವನ್ನು ಪಡೆದುಕೊಳ್ಳಲು ಮತ್ತು ಓದಲು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ರಫೇಕ್ ಪ್ರಕರಣದಲ್ಲಿ ನೀವು ಸತ್ಯ ತಿಳಿದುಕೊಳ್ಳಲು ಕೇವಲ ಇಂಟರ್‌ನೆಟ್‌ ತೆರೆದು ರಕ್ಷಣ ಖರೀದಿ ನೀತಿ ಮತ್ತು ಆಫ್‌ಸೆಟ್ ನೀತಿಗಳನ್ನು ಓದಿದರೆ ಸಾಕು. ಆದರೆ, ಅದು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರ ಮತ್ತು ಜನರಿಗೆ ಸತ್ಯವನ್ನು ಹೇಳುವುದು ಪತ್ರಕರ್ತರ ಕರ್ತವ್ಯ. ಬಾಯಿಯಲ್ಲಿ ಮೂಳೆ ಹೊಂದಿರುವ ನಾಯಿ ಬೊಗಳಲಾರದು. ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎಂಬುದು ಇಲ್ಲಿ ಪ್ರಶ್ನೆಯಲ್ಲ. ನೀವು ಏನು ಮಾಡಿದ್ದಾರೆ ಎನ್ನುವುದು ಪ್ರಶ್ನೆ. ತಾವು ಏನು ಎಂಬುದನ್ನು ನೀವು ಸದಾ ನಂಬಬೇಕು ಎಂದು ಆಡಳಿತ ನಡೆಸುವವರು ಬಯಸುತ್ತಾರೆಯೇ ವಿನಾ ನೀವು ಯಾವುದನ್ನು ನಂಬುತ್ತೀರಿ ಎಂಬುದನಲ್ಲ ಎಂದು ಶೌರಿ ಹೇಳಿದರು.

ರಫೇಲ್ : ಸಮಾನಾಂತರ ಮಾತುಕತೆ ಬಗ್ಗೆ ರಕ್ಷಣಾ ಮಂತ್ರಾಲಯ ಆಕ್ಷೇಪ

ರಾಜೀವ್ ಮೆಹರ್ಷಿ ಹೊರನಡೆಯಲಿ

ರಫೇಲ್ ಒಪ್ಪಂದದ ಬಗ್ಗೆ ಮಹಾಲೇಖಪಾಲ (ಸಿಎಜಿ) ರಾಜೀವ್ ಮಹರ್ಷಿ ವರದಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಅವರು ರಫೇಲ್ ಡೀಲ್ ಲೆಕ್ಕಾಚಾರ ಚಟುವಟಿಕೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದೆ.

ರಫೇಲ್ ಡೀಲ್ - ರಾಹುಲ್ ಹೇಳಿದ 10 ಸುಳ್ಳುಗಳು : ತಿರುಗಿಬಿದ್ದ ಬಿಜೆಪಿ

ರಫೇಲ್ ಒಪ್ಪಂದ ನಡೆದ ಸಂದರ್ಭದಲ್ಲಿ ರಾಜೀವ್ ಮಹರ್ಷಿ ಅವರು ಹಣಕಾಸು ಕಾರ್ಯದರ್ಶಿಯಾಗಿದ್ದರು. ಈಗ ಅವರು ಮಹಾಲೇಖಪಾಲರಾಗಿ ರಫೇಲ್ ಒಪ್ಪಂದದ ಲೆಕ್ಕಪತ್ರ ತಯಾರಿಕೆಯಲ್ಲಿ ಅವರು ಭಾಗಿಯಾಗುವುದರಿಂದ ಹಿತಾಸಕ್ತಿಯ ಸಂಘರ್ಷವಾಗಲಿದೆ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

English summary
Former Union Minister, senior Journalist Arun Shourie said, Supreme Court judgment on Rafale deal had diminished judiciary's credibility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more