ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ, ಏಮ್ಸ್ ನತ್ತ ಕೋವಿಂದ್

|
Google Oneindia Kannada News

ನವದೆಹಲಿ, ಆಗಸ್ಟ್ 16: ಅನಾರೋಗ್ಯದ ಕಾರಣ ದೆಹಲಿಯ AIIMS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೇಟ್ಲಿ ಅವರನ್ನು ಭೇಟಿಯಾಗಲು ಶುಕ್ರವಾರ ಬೆಳಿಗ್ಗೆ ಏಮ್ಸ್ ಗೆ ತೆರಳಿದ್ದಾರೆ.

ಆಗಸ್ಟ್ 9 ರಂದು ತೀವ್ರ ನಿತ್ರಾಣ ಮತ್ತು ಆಯಾಸದಿಂದ ಬಳಲುತ್ತಿದ್ದ ಅವರನ್ನು ಏಮ್ಸ್ ಗೆ ದಾಖಲಿಸಲಾಗಿದೆ. ಅಂದೇ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಆಅಸ್ಪತ್ರೆಗೆ ಭೇಟಿ ನೀಡಿ, ಜೇಟ್ಲಿ ಅವರು ಬಹುಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಅರುಣ್ ಜೇಟ್ಲಿ ಜೊತೆ ಜಗಳಕ್ಕಾಗಿ ಕಾಯುತ್ತಿದ್ದೇನೆ: ಶಶಿ ತರೂರ್ಅರುಣ್ ಜೇಟ್ಲಿ ಜೊತೆ ಜಗಳಕ್ಕಾಗಿ ಕಾಯುತ್ತಿದ್ದೇನೆ: ಶಶಿ ತರೂರ್

ಸದ್ಯಕ್ಕೆ ತೀವ್ರ ನಿಗಾ ಘಟಕದಲ್ಲಿರುವ 66 ವರ್ಷದ ಅರುಣ್ ಜೇಟ್ಲಿ ಅವರಿಗೆ ಎಂಡೋಕ್ರಿನೋಲಾಜಿಸ್ಟ್, ನೆಪ್ರೋಲಾಜಿಸ್ಟ್ ಮತ್ತು ಕಾರ್ಡಿಯಾಲಜಿಸ್ಟ್ ಗಳ ತಂಡವು ಚಿಕಿತ್ಸೆ ನೀಡುತ್ತಿದೆ.

Arun Jaitley Is In Critical Condition, Says AIIMS Sources

ಕಳೆದ ವರ್ಷ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಜ್ಯಸಭಾ ಸದಸ್ಯ ಅರುಣ್ ಜೇಟ್ಲಿ ಹಲವು ತಿಂಗಳ ಕಾಲ ರಾಜಕೀಯದಿಂದ ದೂರವೇ ಉಳಿದಿದ್ದರು. ಅದೇ ಕಾರಣದಿಂದಲೇ ಕಳೆದ ಬಾರಿ ಅರುಣ್ ಜೇಟ್ಲಿ ಅವರ ಬದಲಾಗಿ ಹಂಗಾಮಿ ವಿತ್ತ ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರೇ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು.

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಈಗ ಹೇಗಿದೆ?ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಈಗ ಹೇಗಿದೆ?

ಆರೋಗ್ಯ ಸಮಸ್ಯೆಯ ಕಾರಣ ನೀಡಿ ಅವರು, 2019 ರ ಚುನಾವಣೆಯ ನಂತರವೂ ಸಚಿವ ಸಂಪುಟ ಸೇರದಿರಲು ನಿರ್ಧರಿಸಿದ್ದರು.

English summary
Former Finance minister Arun Jaitley, who is admitted to AIIMS, is in critical condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X