ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಿಲುಕಿದ್ದ 178 ಪಾಕಿಸ್ತಾನಿಗಳು ವಾಘಾ ಗಡಿ ಮೂಲಕ ಸ್ವದೇಶಕ್ಕೆ ವಾಪಸ್

|
Google Oneindia Kannada News

ದೆಹಲಿ, ಮೇ 27: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಭಾರತದ ಹಲವು ಕಡೆ ಸಿಲುಕಿಕೊಂಡಿದ್ದ ಪಾಕಿಸ್ತಾನಿ ಪ್ರಜೆಗಳು ಬುಧವಾರ ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Recommended Video

3C ಪಾಲಿಸಿ ಮೂಲಕ ಕೊರೊನಾ ವಿರುದ್ಧ ಜಯಸಾಧಿಸಿದ ಜಪಾನ್..! | Japan against Corona

ಲಾಕ್‌ಡೌನ್‌ ಜಾರಿಯಾದ ದಿನದಿಂದ ಈವರೆಗೂ ಪಾಕಿಸ್ತಾನ ಹೈ ಕಮಿಷನ್ ಕೋರಿಕೆಯ ಮೆರೆಗೆ ನಾಲ್ಕು ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲಾಗಿದೆ. ಇದು ಐದನೇ ತಂಡ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.

ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ 'ಗೂಢಾಚಾರಿ ಪಾರಿವಾಳ' ಸೆರೆಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ 'ಗೂಢಾಚಾರಿ ಪಾರಿವಾಳ' ಸೆರೆ

ಕೆಲವು ಹಿಂದೂಗಳು ಸೇರಿದಂತೆ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಮತ್ತು ತೀರ್ಥಯಾತ್ರೆಗಳಿಗೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನ ಪ್ರಜೆಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ ನಂತರ ಸ್ವದೇಶಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.

Around 179 People Went Back To Pakistan Via Wagah Border on Wednesday

ಗುಜರಾತ್‌ನಲ್ಲಿ 10 ಜನರು, ಮಹಾರಾಷ್ಟ್ರದಲ್ಲಿ 36 ಜನ, ಮಧ್ಯಪ್ರದೇಶದಲ್ಲಿ 40 ಮಂದಿ, ಚತ್ತೀಸ್‌ಗಢದಲ್ಲಿ 47 ಜನ, ದೆಹಲಿಯಲ್ಲಿ 12 ಮಂದಿ, ಪಂಜಾಬ್‌ನಲ್ಲಿ 2, ರಾಜಸ್ಥಾನದಲ್ಲಿ 14, ಉತ್ತರಾಖಂಡದಲ್ಲಿ 2 ಮತ್ತು ಉತ್ತರಪ್ರದೇಶದಲ್ಲಿ 16 ಜನರು ಸಿಕ್ಕಿಬಿದಿದ್ದರು.

ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೂ ಸುಮಾರು 400 ಜನರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲಾಗಿದೆ. ಇನ್ನು ಪಾಕಿಸ್ತಾನದಲ್ಲೂ ಸುಮಾರು 300 ಜನ ಭಾರತೀಯರು ಸಿಲುಕಿಕೊಂಡಿದ್ದು, ಅವರನ್ನು ಕರೆತರುವ ಕೆಲಸ ಆರಂಭವಾಗಿದೆ ಎಂದು ಮಾಹಿತಿ ಸಿಕ್ಕಿದೆ.

English summary
179 Pakistan nationals, who stranded due to coronavirus lockdown in india went to back to their nation via attari-wagah Border on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X