• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಇವಿ ಬಸ್: ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ

|
Google Oneindia Kannada News

ನವದೆಹಲಿ ಮೇ 17: ದೆಹಲಿಯ ಜನರು ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಪ್ರಯಾಣಿಸಲು ಸಿದ್ಧತೆಗಳು ನಡೆದಿವೆ. ದೆಹಲಿ ಸರ್ಕಾರ ಸಾರ್ವಜನಿಕರಿಗಾಗಿ 1,500 ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಅನುಮೋದನೆ ನೀಡಿದೆ. ದೆಹಲಿ ಇವಿ ನೀತಿ 2020 ರ ಅಡಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಬ್ಯಾಟರಿ ವ್ಯಾಪಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ವಿವಿಧ ಏಜೆನ್ಸಿಗಳಿಗೆ 10 ಸೈಟ್‌ಗಳನ್ನು ನೀಡಲು ದೆಹಲಿ ಸಾರಿಗೆ ನಿಗಮ (ಡಿಟಿಸಿ) ನಿರ್ಧರಿಸಿದೆ. ಇದಲ್ಲದೆ, ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 11 ಮಾರ್ಗಗಳಲ್ಲಿ 75 ಅಂತರರಾಜ್ಯ ಬಸ್‌ಗಳನ್ನು ಓಡಿಸಲು ಅನುಮೋದನೆ ನೀಡಲಾಗಿದೆ.

ಇದರಿಂದ ದೆಹಲಿಯ ಜನರು ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ. ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ವಿವಿಧ ಸೇವಾ ಪೂರೈಕೆದಾರರಿಗೆ 10 ಸೈಟ್‌ಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಅಂಬೇಡ್ಕರ್ ನಗರ ಡಿಪೋ, ಜಲ ವಿಹಾರ್ ಟರ್ಮಿನಲ್, ದಿಲ್ಶಾದ್ ಗಾರ್ಡನ್ ಟರ್ಮಿನಲ್, ಕರವಾಲ್ ನಗರ ಟರ್ಮಿನಲ್, ಶಾದಿಪುರ್ ಡಿಪೋ, ಮಾಯಾಪುರಿ ಡಿಪೋ, ಬಿಂದ್‌ಪುರ್ ಟರ್ಮಿನಲ್, ಪೂರ್ವ ವಿನೋದ್ ನಗರ, ಪಂಜಾಬಿ ಬಾಗ್ ಮತ್ತು ರೋಹಿಣಿ ಡಿಪೋ-I ಸೇರಿವೆ. ದೆಹಲಿ ಟ್ರಾನ್ಸ್‌ಕೋ ಲಿಮಿಟೆಡ್ (DTL) ಹರಾಜು ಪ್ರಕ್ರಿಯೆಯ ಮೂಲಕ ನಾಲ್ಕು ಸೇವಾ ಪೂರೈಕೆದಾರರನ್ನು ಗುರುತಿಸಿದೆ. ಅವರು ಈ ಸ್ಥಳಗಳಲ್ಲಿ EV ಚಾರ್ಜಿಂಗ್/ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು DTC ಯೊಂದಿಗೆ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯವನ್ನು ನಿಗ್ರಹಿಸಲು ದೆಹಲಿ ಸರ್ಕಾರವು ಕ್ಯಾಬ್ ಅಗ್ರಿಗೇಟರ್ ಕಂಪನಿಗಳಿಗೆ ಹೊಸ ನೀತಿಗಳನ್ನು ಪ್ರಕಟಿಸಿದೆ. ಅದರ ಅಡಿಯಲ್ಲಿ ಈಗ ದೆಹಲಿಯ ಕ್ಯಾಬ್ ಕಂಪನಿಗಳು ತಮ್ಮ ಬ್ಯಾಚ್ ವಾಹನಗಳಲ್ಲಿ 50 ಪ್ರತಿಶತ ಎಲೆಕ್ಟ್ರಿಕ್ ವಾಹನಗಳನ್ನು ಇರಿಸಬೇಕಾಗುತ್ತದೆ. ದೆಹಲಿ ಸರ್ಕಾರದ ಅಧಿಸೂಚನೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿರುವ ಎಲ್ಲಾ ಕ್ಯಾಬ್ ಅಗ್ರಿಗೇಟರ್ ಕಂಪನಿಗಳು ಮಾರ್ಚ್ 2023 ರ ವೇಳೆಗೆ ತಮ್ಮ ದ್ವಿಚಕ್ರ ವಾಹನಗಳ 50 ಪ್ರತಿಶತ ಮತ್ತು ನಾಲ್ಕು ಚಕ್ರಗಳ ವಾಹನಗಳಲ್ಲಿ 25 ಪ್ರತಿಶತವನ್ನು ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯವಾಗಿ ಸೇರಿಸಬೇಕಾಗುತ್ತದೆ.

ಕರಡು ಅಗ್ರಿಗೇಟರ್ಸ್ ನೀತಿಯ ಪ್ರಕಾರ, ಹೊಸ ದ್ವಿಚಕ್ರ ವಾಹನಗಳಲ್ಲಿ ಶೇಕಡಾ 10 ಮತ್ತು ಹೊಸ ನಾಲ್ಕು ಚಕ್ರಗಳ ಶೇಕಡಾ 5 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಓಡಿಸಲು ಕಡ್ಡಾಯಗೊಳಿಸಲಾಗುತ್ತದೆ. ಅದರ ನಂತರ, ಎಲ್ಲಾ ಹೊಸ ದ್ವಿಚಕ್ರ ವಾಹನಗಳಲ್ಲಿ 50 ಪ್ರತಿಶತ ಮತ್ತು ಎಲ್ಲಾ ಹೊಸ ನಾಲ್ಕು ಚಕ್ರಗಳ 25 ಪ್ರತಿಶತವು ಮಾರ್ಚ್ 2023 ರ ವೇಳೆಗೆ ಎಲೆಕ್ಟ್ರಿಕ್ ಆಗಿರಬೇಕು.

ಮಾಲಿನ್ಯವನ್ನು ಪರಿಶೀಲಿಸಲು ದೆಹಲಿ ಸಾರಿಗೆ ಇಲಾಖೆಯು ಕಳೆದ ವರ್ಷ ದೆಹಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳ ನೋಂದಣಿಯನ್ನು ರದ್ದುಗೊಳಿಸಿದೆ. ಮಾತ್ರವಲ್ಲದೆ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತಿದೆ.

Around 1,500 electric buses will soon travel in Delhi

ದೆಹಲಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬಡ್ಡಿದರದಲ್ಲಿ ಶೇಕಡಾ 5 ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ದೆಹಲಿಯಲ್ಲಿ ಲಘು ಸರಕುಗಳನ್ನು ಸಾಗಿಸುವ ಇ-ರಿಕ್ಷಾಗಳು, ತ್ರಿಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಇದರ ಪ್ರಯೋಜನವನ್ನು ನೀಡಲಾಗುವುದು. ವಿಶೇಷ ವರ್ಗದ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಾಲದ ಮೇಲೆ ಶೇಕಡಾ 5 ರಷ್ಟು ಬಡ್ಡಿ ರಿಯಾಯಿತಿ ಇರುತ್ತದೆ. ದೆಹಲಿ EV ನೀತಿಯ ಅಡಿಯಲ್ಲಿ 30,000 ರೂಪಾಯಿಗಳ ಖರೀದಿಗೆ 7,500 ರೂಪಾಯಿಗಳ ಪ್ರೋತ್ಸಾಹದ ದನ ಲಭ್ಯವಿರುತ್ತದೆ ಎಂದು ದೆಹಲಿಯ ಸಾರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಈ ಯೋಜನೆಯ ಮೂಲಕ, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್ ಲೈಟ್ ವಾಣಿಜ್ಯ ವಾಹನಗಳು 25,000 ರೂ.ವರೆಗೆ ಹೆಚ್ಚುವರಿ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ವೈಯಕ್ತಿಕ ಖರೀದಿದಾರರಿಗೆ ಮಾತ್ರವಲ್ಲದೆ ಇ-ರಿಕ್ಷಾ ಚಾಲಕರು, ದಿನಸಿ ವಿತರಕರು ಮತ್ತು ಇ-ಕಾಮರ್ಸ್ ವಾಹನಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ದೆಹಲಿ ಪರಿಸರ ಸಚಿವ ಕೈಲಾಶ್ ಗಹ್ಲೋಟ್ ಹೇಳಿದ್ದಾರೆ.

English summary
1500 electric bus fleet will start shortly in Delhi and preparations are underway to set up battery charging stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X