ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿನ್ ರಾವತ್ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ?

|
Google Oneindia Kannada News

ನವದೆಹಲಿ, ಆಗಸ್ಟ್ 15: ಮೂರು ಸಶಸ್ತ್ರ ಪಡೆಗಳ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಹುದ್ದೆಯನ್ನು ಸೃಷ್ಟಿಸುವುದಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದ ಭಾಷಣದಲ್ಲಿ ಹೇಳಿದ್ದಾರೆ.

ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ನಡುವೆ ಸಮನ್ವಯತೆ ಸಾಧಿಸಿ ಅವುಗಳ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಹುದ್ದೆ ಸೃಷ್ಟಿಸಲು ನಿರ್ಧರಿಸಲಾಗಿದೆ.

ಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿಸೇನೆಗೆ ಬಲ ತುಂಬಲು ಹೊಸ ಹುದ್ದೆ ಸೃಷ್ಟಿಸಿದ ಪ್ರಧಾನಿ ಮೋದಿ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನೂ ಮೂರೂ ಸೇನಾಪಡೆಗಳ ಪರವಾಗಿ ಸರ್ಕಾರದೊಂದಿಗೆ ಸಂವಹನ ನಡೆಸುವುದು ಇದರ ಮೂಲ ಉದ್ದೇಶ. ಸಿಡಿಎಸ್ ಹುದ್ದೆಯು ಪಂಚತಾರಾ ಶ್ರೇಣಿಯದ್ದಾಗಿರಲಿದೆ. ಇದು ಸೇನಾ ಪಡೆ, ವಾಯುಪಡೆ ಮತ್ತು ನೌಕಾಪಡೆಗಳ ಮುಖ್ಯಸ್ಥರಿಗಂತಲೂ ಉನ್ನತವಾದ ಹುದ್ದೆಯಾಗಿರಲಿದೆ.

Army Chief Bipin Rawat Could Be First CDS Of Indian

ಈ ಮೂರೂ ಸೇನಾಪಡೆಗಳಲ್ಲಿನ ಅತ್ಯಂತ ಹಿರಿಯ ಅಧಿಕಾರಿಯನ್ನು ಸಿಡಿಎಸ್‌ಗೆ ನೇಮಕ ಮಾಡಲಾಗುತ್ತದೆ. ಈಗಿನ ಸೇನಾ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಅವರನ್ನು ಸಿಡಿಎಸ್ ಹುದ್ದೆಗೆ ನೇಮಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಪಾಕ್ ನಿಂದ ಹೆಚ್ಚುವರಿ ಸೇನೆ; ಚಿಂತೆ ಮಾಡಬೇಕಿಲ್ಲ: ಬಿಪಿನ್ ರಾವತ್ಪಾಕ್ ನಿಂದ ಹೆಚ್ಚುವರಿ ಸೇನೆ; ಚಿಂತೆ ಮಾಡಬೇಕಿಲ್ಲ: ಬಿಪಿನ್ ರಾವತ್

'ಸುಧಾರಣೆ ಎನ್ನುವುದು ಕೂಡ ಅಗತ್ಯ. ರಕ್ಷಣಾ ಸುಧಾರಣೆ ಹಲವು ಸಮಯದಿಂದ ನಡೆಯುತ್ತಿದೆ. ಸಿಡಿಎಸ್ ಸೃಷ್ಟಿಯ ಸಂಬಂಧದ ವರದಿಯು ಹಲವು ಬಾರಿ ಮಂಡನೆಯಾಗಿತ್ತು. ಸಮರದ ನಿಯಮಗಳು ಬದಲಾಗುತ್ತಿವೆ ಮತ್ತು ಭಾರತವು ಭ್ರಮೆಯಲ್ಲಿ ಆಲೋಚನೆ ಮಾಡಲು ಸಾಧ್ಯವಿಲ್ಲ. ನಮ್ಮ ಪಡೆಗಳು ಒಟ್ಟಾಗಿ ಮುನ್ನಡೆಯಬೇಕಿದೆ. ಅವು ಹಿಂದೆ ಬೀಳಲು ಸಾಧ್ಯವಿಲ್ಲ. ಒಂದು ಪಡೆಯೊಂದಿಗೆ ಇನ್ನೊಂದು ಪರಸ್ಪರ ಸಮನ್ವಯ ಹೊಂದಿರಬೇಕು. ಆ ಕಾರಣಕ್ಕಾಗಿ ಸೇನಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆ ಸೃಷ್ಟಿಸಲು ನಿರ್ಧರಿಸಿದ್ದೇನೆ' ಎಂದು ಮೋದಿ ಹೇಳಿದ್ದಾರೆ.

English summary
Army chief Bipin Rawat may become the first Chief of Defence Staff-CDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X