ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್‌ನಲ್ಲಿ ಕಾವೇರಿದ ಚರ್ಚೆ

|
Google Oneindia Kannada News

ನವದೆಹಲಿ, ನವೆಂಬರ್ 14: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ತೀವ್ರ ಚರ್ಚೆ ನಡೆದಿದೆ.

ರಫೇಲ್: ಬೆಲೆಯ ವಿವರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ನೀಡಿದ ಕೇಂದ್ರರಫೇಲ್: ಬೆಲೆಯ ವಿವರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ನೀಡಿದ ಕೇಂದ್ರ

ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿದಾರರ ಪರವಾಗಿ ಹಾಜರಾಗಿರುವ ವಕೀಲ ಪ್ರಶಾಂತ್ ಭೂಷಣ್ ಮತ್ತು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ನಡುವೆ ಕುತೂಹಲಕಾರಿ ವಾದ-ವಿವಾದಗಳು ನಡೆದಿದೆ.

36 ಯುದ್ಧ ವಿಮಾನಗಳ ಖರೀದಿಗೆ ತಾವು ಯಾವ ರೀತಿ ನಿರ್ಣಯ ಕೈಗೊಳ್ಳುವಿಕೆಯ ಪ್ರಕ್ರಿಯೆಯನ್ನು ನಡೆಸಿದೆವು ಮತ್ತು ಬೆಲೆ ನಿಗದಿಯ ಕಾರ್ಯಗಳು ನಡೆದವು ಎಂಬ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು.

argument in supreme court between venugopal and prashant bhushan on rafale deal

ಈ ಒಪ್ಪಂದದ ಕುರಿತು ತಜ್ಞರು ಮಾತ್ರವೇ ನಿರ್ಧರಿಸಲು ಸಾಧ್ಯವೇ ಹೊರತು ಕೋರ್ಟ್‌ಗಲ್ಲ ಎಂದು ವೇಣುಗೋಪಾಲ್, ಒಪ್ಪಂದವನ್ನಿ ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದದ್ದಾರೆ.

ಆಫ್‌ಸೆಟ್ ಉತ್ಪಾದನೆಯ ಪಾಲುದಾರಿಕೆ ಇಲ್ಲ: ಎಚ್‌ಎಎಲ್ ಸ್ಪಷ್ಟನೆಆಫ್‌ಸೆಟ್ ಉತ್ಪಾದನೆಯ ಪಾಲುದಾರಿಕೆ ಇಲ್ಲ: ಎಚ್‌ಎಎಲ್ ಸ್ಪಷ್ಟನೆ

* ರಫೇಲ್ ಒಪ್ಪಂದದ ಅನುಸಾರ ಯುದ್ಧ ವಿಮಾನಗಳಿಗೆ ಮಾಡಲಾದ ಬೆಲೆ ನಿರ್ಧಾರದ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದರು.

* ಬಳಿಕ ಭೂಷಣ್ ಅವರು ಒಪ್ಪಂದದ ಗೋಪ್ಯತೆಯ ಮಾಹಿತಿಯನ್ನು ವಿವರಿಸಿದರು.

* ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಕೆ ವೇಣುಗೋಪಾಲ್, ಇದು ಅವರಿಗೆ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದರು. ಇದು ಗೋಪ್ಯವಾಗಿಯೇ ಇರಬೇಕಾಗಿರುವುದು. ಅವರು ತಮ್ಮ ಮೂಲವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

'ರಫೇಲ್ ರಾದ್ಧಾಂತದ ತನಿಖೆಯಾದರೆ ಮೋದಿ ಕತೆ ಅಷ್ಟೇ ಎಂದ ರಾಹುಲ್!''ರಫೇಲ್ ರಾದ್ಧಾಂತದ ತನಿಖೆಯಾದರೆ ಮೋದಿ ಕತೆ ಅಷ್ಟೇ ಎಂದ ರಾಹುಲ್!'

* ಇದನ್ನು 2008ರಲ್ಲಿ ಪ್ರಕರವಾದ ರಕ್ಷಣಾ ಇಲಾಖೆಯ ಪುಸ್ತಕವೊಂದರಲ್ಲಿ ಪಡೆದುಕೊಂಡಿದ್ದಾಗಿ ಭೂಷಣ್ ಹೇಳಿದರು.

* ದರ ರಾಜಿಯು ರಾಷ್ಟ್ರೀಯ ಭದ್ರತೆಯ ವಿಚಾರ ಹೇಗೆ ಆಗುತ್ತದೆ? ಈ ಬಗ್ಗೆ ಹಿಂದೆ ಸಂಸತ್‌ನಲ್ಲಿ ಎರಡು ಬಾರಿ ಬಹಿರಂಗಪಡಿಸಲಾಗಿತ್ತು.

* ಒಂದು ವೇಳೆ ಅದು ರಾಷ್ಟ್ರೀಯ ಭದ್ರತೆಯ ವಿಚಾರವಾದರೆ ಸಂಸತ್‌ನಲ್ಲಿ ಬೆಲೆ ಮಾಹಿತಿ ನೀಡುವ ಮೂಲಕ ಸರ್ಕಾರ ಎರಡು ಬಾರಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿಯಾಗಿದೆ ಎಂದರು.

* ಬೆಲೆ ವಿಚಾರಕ್ಕ ಸಂಬಂಧಿಸಿದಂತೆ ಸರ್ಕಾರವು ಹಿಂದಿನ ದರಕ್ಕಿಂತಲೂ ಇದು ಹೆಚ್ಚು ಉತ್ತಮವಾಗಿದೆ ಎಂದಿತ್ತು. ಇದು ಹೇಗೆ? ಎಂದು ಪ್ರಶ್ನಿಸಿದರು.

ರಫೇಲ್ ಒಪ್ಪಂದ: ಬೆಲೆ ಮತ್ತು ತಾಂತ್ರಿಕ ವಿವರ ನೀಡಲು ಸುಪ್ರೀಂಕೋರ್ಟ್ ಸೂಚನೆರಫೇಲ್ ಒಪ್ಪಂದ: ಬೆಲೆ ಮತ್ತು ತಾಂತ್ರಿಕ ವಿವರ ನೀಡಲು ಸುಪ್ರೀಂಕೋರ್ಟ್ ಸೂಚನೆ

* ಯಾವುದೇ ಪ್ರಕರಣದಲ್ಲಿ ಇದು ಆರ್ ಟಿಐ ವ್ಯಾಪ್ತಿಗೆ ಒಳಪಡುತ್ತದೆ. ಗೋಪ್ಯತೆ ಮತ್ತಿತರ ಕಾರಣಗಳಿಗಾಗಿ ದರವನ್ನು ಬಹಿರಂಗಪಡಿಸಲಾಗುವುದಿಲ್ಲ ಎನ್ನುವುದು ಸರ್ಕಾರದ ಪೊಳ್ಳು ವಾದವಾಗಿದೆ.

* ಈ ಒಪ್ಪಂದವನ್ನು ಡಸಾಲ್ಟ್ ಕಂಪೆನಿಗೆ ಅಧಿಕ ದರಕ್ಕೆ ಮತ್ತು ಅದರ ಆಫ್‌ಸೆಟ್‌ ಪಾಲುದಾರಿಕೆಯನ್ನು ರಿಲಯನ್ಸ್‌ಗೆ ನೀಡಿದ್ದರ ವಿರುದ್ಧ ಹಿರಿಯ ಅಧಿಕಾರಿಗಳು ತಮ್ಮ ಆಡಳಿತ ವರ್ಗವನ್ನು ಬೈದಾಡುತ್ತಿದ್ದಾರೆ.

* ಹೀಗಾಗಿ ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಕಮಿಷನ್ ಪಡೆಯುವ ಅಪರಾಧ ಪ್ರಕರಣವಾಗುವ ಗುಣ ಹೊಂದಿದೆ.

* ವಿಮಾನದ ದರದ ವಿಚಾರದಲ್ಲಿ ಗೋಪ್ಯತೆ ಇಲ್ಲ. ಆದರೆ, ಅದು ಇರುವುದು ವಿಮಾನದಲ್ಲಿನ ಶಸ್ತ್ರಾಸ್ತ್ರ ಹಾಗೂ ಇತರೆ ಸೌಲಭ್ಯಗಳ ಅಳವಡಿಕೆಯ ಮಾಹಿತಿ ಬಗ್ಗೆ. ಈ ವಿವರಗಳನ್ನು ಕೋರ್ಟ್‌ಗೆ ನೀಡಲಾಗಿದೆ. ಆದರೆ, ಅದನ್ನು ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸುವಂತೆ ಇಲ್ಲ ಎಂದು ವೇಣುಗೋಪಾಲ್ ವಾದಿಸಿದರು.

* ದರದ ವಿವರಗಳನ್ನು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದೆ. ಆದರೆ, ಬಹಿರಂಗಪಡಿಸಲು ಸಾಧ್ಯವಾಗದಂತಹ ಕೆಲವು ಅಂತರ್ ಸರ್ಕಾರಿ ಒಪ್ಪಂದದ ಮಾಹಿತಿಗಳಿವೆ ಎಂದು ಹೇಳಿದರು.

English summary
Heated argument between Atorney General KK Venugopal and Prashant Bhushan who appeared for petitioners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X