ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ತಿಂಗಳ ಬಳಿಕ ನೋಯ್ಡಾ-ಫರಿದಾಬಾದ್ ರಸ್ತೆ ಸಂಚಾರಕ್ಕೆ ಮುಕ್ತ

|
Google Oneindia Kannada News

ನವದೆಹಲಿ, ಫೆಬ್ರವರಿ.21: ಶಾಹಿನ್ ಬಾಗ್ ನಲ್ಲಿ ನಡೆಯುತ್ತಿದ್ದ ಉಗ್ರ ಹೋರಾಟದಿಂದ ಬಂದ್ ಆಗಿದ್ದ ನೋಯ್ಡಾ ಮತ್ತು ಫರಿದಾಬಾದ್ ರಸ್ತೆ ಶುಕ್ರವಾರ ಸಂಚಾರಕ್ಕೆ ಮುಕ್ತವಾಗಿದೆ. ಉತ್ತರ ಪ್ರದೇಶ ಪೊಲೀಸರು ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಶಾಹಿನ್ ಬಾಗ್ ನಲ್ಲಿ ಕಳೆದ 69 ದಿನಗಳಿಂದಲೂ ನಿರಂತರ ಪ್ರತಿಭಟನೆ ನಡೆಸಲಾಗುತ್ತಿತ್ತು. ಇದರಿಂದ ನೋಯ್ಡಾ ಮತ್ತು ಕಲಿಂದಿ ಕುಂಜ್ ನಡುವಿನ ರಸ್ತೆ ಸಂಪರ್ಕವನ್ನು ಬಂದ್ ಮಾಡಲಾಗಿತ್ತು.

ಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರ

ನವದೆಹಲಿಯ ದಕ್ಷಿಣ ಭಾಗದಲ್ಲಿ ಇರುವ ಶಾಹಿನ್ ಬಾಗ್ ಮತ್ತು ಕಲಿಂದಿ ಕುಂಜ್ ರಸ್ತೆಯನ್ನು ಎರಡು ತಿಂಗಳಿನಿಂದ ಬಂದ್ಲ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರು ತೀವ್ರ ಸಂಕಷ್ಟು ಅನುಭವಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು.

Anti-CAA Protest In Shaheen Bagh: Noida-Faridabad Road Has Been Reopened After 69 Days

ಶಾಹಿನ್ ಬಾಗ್ ರಸ್ತೆ ತೆರವಿಗೆ ಮಧ್ಯವರ್ತಿ ನೇಮಕ:
ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟಗಾರರು ರಸ್ತೆಯಲ್ಲೇ ಪ್ರತಿಭಟನೆ ನಡೆಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಅಲ್ಲದೇ ಸಿಎಎ ವಿರೋಧಿ ಹೋರಾಟಗಾರರ ಜೊತೆಗೆ ಸಂಧಾನ ನಡೆಸುವುದಕ್ಕೆ ಹಿರಿಯ ವಕೀಲ ಸಂಜಯ್ ಹೆಗ್ಡೆ, ವಕೀಲೆ ಸಾಧನಾ ರಾಮಚಂದ್ರನ್ ಮತ್ತು ಮಾಹಿತಿ ಆಯೋಗದ ಮಾಜಿ ಮುಖ್ಯಸ್ಥ ವಜಾಹತ್ ಹಬೀಬುಲ್ಲಾರನ್ನು ನೇಮಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಶಾಹಿನ್ ಬಾಗ್ ಹೋರಾಟಗಾರರ ಜೊತೆ ಸಂಧಾನಕ್ಕೆ ನೇಮಿಸಿದ ಮೂವರು ಸದಸ್ಯರು ಶಾಂತಿ ಮಾತುಕತೆ ನಡೆಸುತ್ತಿದ್ದಾರೆ.

English summary
Anti-CAA Protest In Shaheen Bagh: Noida-Faridabad Road Has Been Reopened After 69 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X