ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಒಟ್ಟು 14 ಮೆಟ್ರೋ ನಿಲ್ದಾಣ ಬಂದ್

|
Google Oneindia Kannada News

ನವದೆಹಲಿ, ಡಿಸೆಂಬರ್ 19: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಸ್ಥಳಗಳಲ್ಲಿ ಪೌರತ್ವ ತಿದ್ದುಪಡಿ ಕಾನೂನಿನ(CAB) ವಿರುದ್ಧದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಮೊದಲಿಗೆ 8 ನಿಲ್ದಾಣಗಳನ್ನು ಮುಚ್ಚಲು ನಿರ್ಧರಿಸಲಾಯಿತು, ನಂತರ ಇನ್ನೂ 6 ನಿಲ್ದಾಣಗಳನ್ನು ಮುಚ್ಚಲಾಯಿತು.

ಸಿಎಎ ವಿರುದ್ಧ ಪ್ರತಿಭಟನೆ ಮಧ್ಯೆಯೇ ಪಾಕ್ ಮಹಿಳೆಗೆ ಭಾರತದ ಪೌರತ್ವಸಿಎಎ ವಿರುದ್ಧ ಪ್ರತಿಭಟನೆ ಮಧ್ಯೆಯೇ ಪಾಕ್ ಮಹಿಳೆಗೆ ಭಾರತದ ಪೌರತ್ವ

ದೆಹಲಿಯಾದ್ಯಂತ ಒಟ್ಟು 14 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.ಕೆಂಪು ಕೋಟೆ, ಜಮಾ ಮಸೀದಿ, ಚಾಂದನಿ ಚೌಕ್ ಮತ್ತು ವಿಶ್ವವಿದ್ಯಾಲಯ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.

Anti CAA protest Gates of 14 Delhi Metro stations closed

ದೆಹಲಿ ಮೆಟ್ರೋ ರೈಲು ನಿಗಮ ಬಿಡುಗಡೆ ಮಾಡಿದ ಭದ್ರತಾ ನವೀಕರಣದ ಪ್ರಕಾರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜಸೋಲಾ ವಿಹಾರ್, ಶಾಹೀನ್ ಬಾಗ್ ಮತ್ತು ಮುನಿರ್ಕಾ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮುಚ್ಚಲಾಗಿದ್ದು, ಈ ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ.

ಪಟೇಲ್ ಚೌಕ್, ಲೋಕ ಕಲ್ಯಾಣ್ ಮಾರ್ಗ, ಉದ್ಯೋಗ್ ಭವನ, ಐಟಿಒ, ಪ್ರಗತಿ ಮೈದಾನ ಮತ್ತು ಖಾನ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಈ ನಿಲ್ದಾಣಗಳಲ್ಲಿಯೂ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ.

English summary
Anti CAA protest: Delhi Metro Rail Corporation on Thursday closed gates of 14 Metro Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X