ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಶಾಹಿನ್ ಬಾಗ್ ಬೆನ್ನಲ್ಲೇ ಮೆಟ್ರೋ ಸ್ಟೇಷನ್ ಬಂದ್!

|
Google Oneindia Kannada News

ನವದೆಹಲಿ, ಫೆಬ್ರವರಿ.23: ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟ ಮುಂದುವರಿದಿದೆ. ದೆಹಲಿಯ ಜಫ್ರಾಬಾದ್ ಮೆಟ್ರೋ ರೈಲ್ವೆ ನಿಲ್ದಾಣದ ಎದುರು ನೆರೆದ ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು 500ಕ್ಕೂ ಹೆಚ್ಚು ಪ್ರತಿಭಟನಾನಿರತ ಮಹಿಳೆಯರು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರ

ಶನಿವಾರ ರಾತ್ರಿ ವೇಳೆಯೇ ರಸ್ತೆಗಿಳಿದ ಪ್ರತಿಭಟನಾನಿರತರು ತ್ರಿವರ್ಣ ಧ್ವಜವನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದರಿಂದ ದೆಹಲಿಯ ಸೀಲಾಂಪುರ್, ಮೌಜ್ ಪುರ್ ಮತ್ತು ಯಮುನಾ ವಿಹಾರ್ ರಸ್ತೆಗಳ ನಡುವಿನ ಸಂಪರ್ಕ ಬಂದ್ ಆಗಿದೆ.

ಜಫ್ರಾಬಾದ್ ಮೆಟ್ರೋ ನಿಲ್ದಾಣದ ಎರಡು ಗೇಟ್ ಕ್ಲೋಸ್

ಜಫ್ರಾಬಾದ್ ಮೆಟ್ರೋ ನಿಲ್ದಾಣದ ಎರಡು ಗೇಟ್ ಕ್ಲೋಸ್

ಸಿಎಎ ಮತ್ತು ಎನ್ ಆರ್ ಸಿ ವಿರೋಧ ಹೋರಾಟಗಾರರು ದೆಹಲಿಯ ಜೆಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದ ಮೆಟ್ರೋ ನಿಲ್ದಾಣದ ಎರಡು ದ್ವಾರಗಳನ್ನು ಬಂದ್ ಮಾಡಲಾಗಿದೆ. ಇನ್ನು, ಈ ನಿಲ್ದಾಣದಲ್ಲಿ ಮೆಟ್ರೋ ನಿಲ್ಲಿಸಲಾಗುವುದಿಲ್ಲ ಎಂದು ದೆಹಲಿಯ ಮೆಟ್ರೋ ರೈಲು ಕಾರ್ಪೋರೇಷನ್ ಟ್ವೀಟ್ ಮಾಡಿದೆ.

ಸಿಎಎ-ಎನ್ ಆರ್ ಸಿ ವಾಪಸ್ ಜೊತೆಗೆ ದಲಿತರಿಗೆ ಮೀಸಲಾತಿ

ಸಿಎಎ-ಎನ್ ಆರ್ ಸಿ ವಾಪಸ್ ಜೊತೆಗೆ ದಲಿತರಿಗೆ ಮೀಸಲಾತಿ

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ನಿರ್ಧಾರವನ್ನು ವಾಪಸ್ ಪಡೆದುಕೊಳ್ಳಬೇಕು. ಇದರ ಜೊತೆಗೆ ದಲಿತರಿಗೆ ಮೀಸಲಾತಿ ನೀಡಬೇಕು ಎಂದು ಪ್ರತಿಭಟನಾನಿರತರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲಿವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದ್ದಾರೆ.

ಶಾಹಿನ್ ಬಾಗ್ ಮುಗೀತು, ಜಫ್ರಾಬಾದ್ ನಲ್ಲಿ ಶುರುವಾಯ್ತು?

ಶಾಹಿನ್ ಬಾಗ್ ಮುಗೀತು, ಜಫ್ರಾಬಾದ್ ನಲ್ಲಿ ಶುರುವಾಯ್ತು?

ಕಳೆದ ಎರಡು ತಿಂಗಳಿನಿಂದ ಶಾಹಿನ್ ಬಾಗ್ ನಲ್ಲಿ ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಯು ಶನಿವಾರವಷ್ಟೇ ತಿಳಿಕೊಂಡಿತ್ತು. 69 ದಿನಗಳ ಬಳಿಕ ನೋಯ್ಜಾ ಮತ್ತು ಫರಿದಾಬಾದ್ ನಡುವಿನ ರಸ್ತೆ ಸಂಪರ್ಕ ಪುನರ್ ಆರಂಭವಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಿಎಎ ವಿರೋಧಿ ಹೋರಾಟಗಾರರು ದೆಹಲಿಯ ಜಫ್ರಾಬಾದ್ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಿದ್ದಾರೆ.

ಮೆಟ್ರೋ ನಿಲ್ದಾಣದ ಸುತ್ತಿ ಬಿಗಿ ಪೊಲೀಸ್ ಭದ್ರತೆ

ಮೆಟ್ರೋ ನಿಲ್ದಾಣದ ಸುತ್ತಿ ಬಿಗಿ ಪೊಲೀಸ್ ಭದ್ರತೆ

500ಕ್ಕೂ ಅಧಿಕ ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬೀದಿಗೆ ಇಳಿದಿದ್ದಾರೆ. ಜಫ್ರಾಬಾದ್ ಮೆಟ್ರೋ ನಿಲ್ದಾಣದ ಎರಡು ದ್ವಾರಗಳನ್ನು ಬಂದ್ ಮಾಡಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

English summary
Anti-CAA Protest: 500 Protesters Blocked The Road At Delhi. Jaffrabad Metro Station Entry And Exit Get Closed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X