• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದಲ್ಲಿ ಮತ್ತೊಂದು ಏಕಾಂಗಿ ವಿವಾಹ: ತಮಗೆ ತಾವೇ ತಾಳಿಕಟ್ಟಿಕೊಂಡ ಕಿರುತೆರೆ ನಟಿ

|
Google Oneindia Kannada News

ಗುಜರಾತ್‌ನ ಕ್ಷಮಾ ಬಿಂದು ಏಕಾಂಗಿ ಮದುವೆ ಮನೆ ಮಾತಾದ ಬಳಿಕ ಭಾರತೀಯ ಕಿರುತೆರೆ ನಟಿ ಕನಿಷ್ಕಾ ಸೋನಿ ಸ್ವತಃ ವಿವಾಹವಾಗಿದ್ದಾರೆ ಎಂದು ಕಾನಿಷ್ಕಾ ಅವರ ಹಳೆಯ Instagram ಪೋಸ್ಟ್ ಹೇಳುತ್ತದೆ. ಗುಜರಾತ್ ಮಹಿಳೆಯೊಬ್ಬಳ ಏಕಾಂಗಿ ಮದುವೆಯಾಗಿ ಸುದ್ದಿಯಾಗಿದ್ದರು. ಬಳಿಕ ಕಿರುತೆರೆ ನಟಿ ಕಾನಿಷ್ಕಾ ಅವರು ಏಕಾಂಗಿ ಮದುವೆಯಾದ ಸುದ್ದಿಯಲ್ಲಿದ್ದಾರೆ.

ಕಾನಿಷ್ಕಾ ಸಿಂಧೂರ್ ಮತ್ತು ಮಂಗಳಸೂತ್ರ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿರುವ ಕಾನಿಷ್ಕಾ, ತನಗೆ 'ಯಾವ ಪುರುಷನ ಅವಶ್ಯಕತೆ ಇಲ್ಲ' ಮತ್ತು 'ಒಂಟಿಯಾಗಿ ಸಂತೋಷವಾಗಿದ್ದೇನೆ' ಎಂಬ ಕಾರಣದಿಂದ ಅವಳು ತನ್ನನ್ನು ಮದುವೆಯಾಗಿರುವುದಾಗಿ ಬರೆದಿದ್ದಾಳೆ.

ಗುಜರಾತ್‌ನ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; 6 ಕಾರ್ಮಿಕರ ಸಾವು ಗುಜರಾತ್‌ನ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; 6 ಕಾರ್ಮಿಕರ ಸಾವು

ಈ ಹಿಂದೆ ಗುಜರಾತ್‌ನ ಕ್ಷಮಾ ಬಿಂದು ಏಕಾಂಗಿಯಾಗಿ ವರನಿಲ್ಲದೇ ಮದುವೆಯಾಗಿದ್ದರು. ಅವರ ಮದುವೆ ಅವರು ಅಂದುಕೊಂಡಂತೆ ನಡೆದರೂ ವಿರೋಧದಿಂದಾಗಿ ನಿಗಧಿತ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ಅವರ ಮನೆಯಲ್ಲಿ ನಡೆಯಿತು.

ಕಿರುತೆರೆ ನಟಿ ಕಾನಿಷ್ಕಾ ಸೋನಿ

ಕಿರುತೆರೆ ನಟಿ ಕಾನಿಷ್ಕಾ ಸೋನಿ

ಹಿಂದೆ ಗುಜರಾತ್ ನ ಕ್ಷಮಾ ಬಿಂದು ಈ ವರ್ಷದ ಜೂನ್‌ನಲ್ಲಿ 'ಮೆಹೆಂದಿ' ಮತ್ತು 'ಹಲ್ದಿ' ಎಲ್ಲಾ ವಿವಾಹ ವಿಧಿವಿಧಾನಗಳೊಂದಿಗೆ ತನ್ನನ್ನು ತಾನೇ ವಿವಾಹವಾಗಿ ಭಾರತದಲ್ಲಿ ಮೊದಲ ಏಕಾಂಗಿ ಮದುವೆಗೆ ಹೆಸರಾದರು. ಇದೀಗ ಕಿರುತೆರೆ ನಟಿ ಕಾನಿಷ್ಕಾ ಸೋನಿ ತನ್ನನ್ನು ತಾನೇ ಮದುವೆಯಾಗಿರುವುದಾಗಿ ಘೋಷಿಸಿದ್ದಾರೆ. ಅವರು ಆಗಸ್ಟ್ 6 ರಂದು Instagram ನಲ್ಲಿ ನಟಿ ಸಿಂಧೂರ್ ಮತ್ತು ಮಂಗಳಸೂತ್ರವನ್ನು ಧರಿಸಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

"ನಾನು ಪ್ರೀತಿಸುತ್ತಿರುವ ಏಕೈಕ ವ್ಯಕ್ತಿ ನಾನೇ. ಹೀಗಾಗಿ ನಾನು ನನ್ನೊಂದಿಗೆ ಮದುವೆಯಾಗಿದ್ದೇನೆ. ನಾನು ಕೇಳುತ್ತಿರುವ ಎಲ್ಲಾ ಪ್ರಶ್ನೆಗಳಿಗೆ ನಾನೇ ಉತ್ತರವನ್ನು ಹೊಂದಿದ್ದೇನೆ. ನನಗೆ ಯಾವುದೇ ಮನುಷ್ಯನ ಅಗತ್ಯವಿಲ್ಲ. ನಾನು ಯಾವಾಗಲೂ ಒಬ್ಬಂಟಿಯಾಗಿ ಮತ್ತು ಏಕಾಂತದಲ್ಲಿ ಸಂತೋಷವಾಗಿರುತ್ತೇನೆ. ನಾನು ದೇವತೆ, ಶಕ್ತಿಯುತ ಮತ್ತು ಶಕ್ತಿಶಾಲಿ, ಶಿವ ಮತ್ತು ಶಕ್ತಿ ಎಲ್ಲವೂ ನನ್ನೊಳಗೆ ಇದೆ. ಧನ್ಯವಾದಗಳು" ಎಂದು ಕಾನಿಷ್ಕಾ ಬರೆದಿದ್ದಾರೆ.

ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಕಾನಿಷ್ಕಾ

ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಕಾನಿಷ್ಕಾ

ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕನಿಷ್ಕಾ ಸೋನಿ ಟಿವಿಯಲ್ಲಿ ಬಾತ್ರೂಮ್ ಸಿಂಗರ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು. ಅವರು 'ದಿಯಾ ಔರ್ ಬಾತಿ ಹಮ್‌'ನಲ್ಲಿ ಡೈಸಾ ಅವರ ಸೊಸೆಯಾಗಿ ನಟಿಸಲು ಹೆಸರುವಾಸಿಯಾಗಿದ್ದಾರೆ. ದೋ ದಿಲ್ ಏಕ್ ಜಾನ್, ದೇವೋನ್ ಕೆ ದೇವ್, ಮಹಾದೇವ್ ಆನ್ ಲೈಫ್ ಓಕೆ, ಬೇಗುಸರೈ, ಸಂಕತ್ಮೋಚನ್ ಮಹಾಬಲಿ ಹನುಮಾನ್ ಮತ್ತು ಕುಲ್ಫಿ ಕುಮಾರ್ ಬಜೆವಾಲಾಗಳಲ್ಲಿ ಅವರು ಕಾಣಿಸಿಕೊಂಡಿರುವ ಇತರ ಶೋಗಳಾಗಿವೆ. ಅವರು ದಂಗಲ್ ಟಿವಿಯಲ್ಲಿ ದೇವಿ ಆದಿ ಪರಾಶಕ್ತಿಯಲ್ಲಿ ದೇವಿ ಗಂಗಾ ಆಗಿ ಕಾಣಿಸಿಕೊಂಡಿದ್ದಾರೆ.

ಏಕಾಂಗಿ ವಿವಾಹ ಮಾಡಿಕೊಂಡ ಕ್ಷಮಾ ಬಿಂದು

ಏಕಾಂಗಿ ವಿವಾಹ ಮಾಡಿಕೊಂಡ ಕ್ಷಮಾ ಬಿಂದು

ಗುಜರಾತ್‌ನ ವಡೋದರಾ ನಗರದ 24 ವರ್ಷದ ಕ್ಷಮಾ ಬಿಂದು ಜೂನ್ 11 ರಂದು ತನ್ನ ಮದುವೆಯನ್ನು ಘೋಷಿಸುವ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದಳು. ಆದರೆ ಕ್ಷಮಾ ಬಿಂದು ಈ ಕಾರ್ಯಕ್ರಮವನ್ನು ನಿಗದಿತ ದಿನಾಂಕಕ್ಕಿಂತ ಮೂರು ದಿನಗಳ ಮೊದಲು ಜೂನ್ 08 ರಂದು ಏಕಾಂಗಿ ವಿವಾಹ (ಸ್ವಯಂವಿವಾಹ) ಮಾಡಿಕೊಂಡರು. ಕ್ಷಮಾ ಬಿಂದು ಸ್ವಯಂ ವಿವಾಹ (Sologamy) ಮಾಡಿಕೊಂಡ ಮೊದಲ ಭಾರತೀಯ ಎಂದು ಹೇಳಲಾಗುತ್ತಿದೆ.

ಕ್ಷಮಾ ಏಕಾಂಗಿ ಮದುವೆಗೆ ಅಡ್ಡಿ, ವಿರೋಧ

ಕ್ಷಮಾ ಏಕಾಂಗಿ ಮದುವೆಗೆ ಅಡ್ಡಿ, ವಿರೋಧ

ಕ್ಷಮಾ ಬಿಂದು ಜೂನ್ 11 ರಂದು ತನ್ನನ್ನು ತಾನು ಮದುವೆಯಾಗಲು ನಿರ್ಧರಿಸಿದ್ದಳು. ಅದಕ್ಕಾಗಿಯೇ ಪಂಡಿತ್, ದೇವಸ್ಥಾನ ಸೇರಿದಂತೆ ಪಾರ್ಲರ್ ಕೂಡ ಬುಕ್ ಮಾಡಿದ್ದರು. ಆದರೆ ಅವರ ನಿರ್ಧಾರವನ್ನು ಬಿಜೆಪಿ ನಾಯಕರು ಹಾಗೂ ಹಿಂದೂ ದಾವೆದಾರರು ವಿರೋಧಿಸಿದ್ದರು. ಹಾಗಾಗಿ ನಿಗದಿತ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ಕ್ಷಮಾ ಬಿಂದು ವಿವಾಹವಾದರು. ಕ್ಷಮಾಳ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ವಡೋದರದ ಗೋತ್ರಿಯಲ್ಲಿರುವ ಆಕೆಯ ಮನೆಯಲ್ಲಿ ನೆರವೇರಿಸಲಾಯಿತು. ಕ್ಷಮಾ ಜೂನ್ 11 ರಂದು ಯಾರಾದರೂ ತಮ್ಮ ಮನೆಗೆ ಬಂದು ವಿವಾದ ಸೃಷ್ಟಿಸಬಹುದೆಂದು ಬಿಂದು ಹೆದರಿದ್ದರು. ಹೀಗಾಗಿ ತಮ್ಮ ವಿಶೇಷ ದಿನ ಹಾಳಾಗಬಾರದೆಂದು ಜೂನ್ 08 ರ ಬುಧವಾರದಂದು ಮದುವೆಯಾದರು.

English summary
TV actress Kanishka Soni is India's second sologamy to get married alone. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X