ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮನಾಥ್ ಭಾರ್ತಿ ಪ್ರಕರಣಕ್ಕೆ ಟ್ವೀಟ್ ಪ್ರತಿಕ್ರಿಯೆಗಳು

By Mahesh
|
Google Oneindia Kannada News

ನವದೆಹಲಿ, ಜೂ.11: ದೆಹಲಿ ಮಾಜಿ ಕಾನೂನು ಸಚಿವ, ಹಾಲಿ ಶಾಸಕ ಸೋಮನಾಥ್ ಭಾರ್ತಿ ಅವರು ಹಲ್ಲೆ, ಮಾನಸಿಕ ಹಿಂಸೆ ಆರೋಪ ಎದುರಿಸುತ್ತಿದ್ದಾರೆ. ಭಾರ್ತಿ ಅವರ ಪತ್ನಿ ಲಿಪಿಕಾ ಅವರು ದೆಹಲಿ ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಿದ್ದು, ಆಯೋಗ ನೋಟಿಸ್ ಜಾರಿ ಮಾಡಿದೆ.

ತನ್ನ ಪತಿ ಸೋಮನಾಥ ಭಾರ್ತಿ 2010ರಿಂದಲೂ ತನಗೆ ಮತ್ತು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಅವರಿಂದ ಮತ್ತು ಅವರ ಬೆಂಬಲಿಗರಿಂದ ನಿರಂತರ ಬೆದರಿಕೆಗಳಿವೆ. ತನಗೆ ಪತಿಯಿಂದ ವಿಚ್ಛೇದನ ಬೇಕು. ತಾನು ತನ್ನ ಮಕ್ಕಳೊಂದಿಗೆ ಘನತೆಯೊಂದಿಗೆ ಬದುಕಲು ಬಯಸಿದ್ದೇನೆ ಎಂದು ಲಿಪಿಕಾ ಬುಧವಾರ ಮಧ್ಯಾಹ್ನ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಅಳಲು ತೋಡಿಕೊಂಡಿದ್ದರು.

ಈ ಅರ್ಜಿ ಸ್ವೀಕರಿಸಿ ಸೋಮನಾಥ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಜೂನ್ 26ರೊಳಗೆ ನೋಟಿಸುಗಳಿಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಆಯೋಗದ ಅಧ್ಯಕ್ಷೆ ಬರ್ಖಾ ಸಿಂಗ್ ಅವರು ಹೇಳಿದ್ದಾರೆ. [ಆಮ್ ಆದ್ಮಿ ಪಕ್ಷದ ಗ್ರಹಗತಿ ಯಾಕೋ ಸರಿಯಿದ್ದಂತಿಲ್ಲ]

ಇದೊಂದು ವೈಯಕ್ತಿಕ ವಿಷಯ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆಪ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಆದರೆ, ಸೋಮನಾಥ್ ಭಾರ್ತಿ ಅವರ ಕೌಟುಂಬಿಕ ಕಲಹದಿಂದ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಮುಜುಗರವಾಗಿರುವುದಂತೂ ಸತ್ಯ.

ಆಪ್‌ನ ಮೊದಲ 49 ದಿನಗಳ ಸರಕಾರದಲ್ಲಿ ಭಾರ್ತಿ ಕಾನೂನು ಸಚಿವರಾಗಿದ್ದು, ಆ ಸಂದರ್ಭದಲ್ಲಿ ತನ್ನ ಮತಕ್ಷೇತ್ರದಲ್ಲಿಯ ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ನಡೆಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಕಾನೂನು ಸಚಿವಾಲಯದ ವಾಸ್ತು ಸರಿ ಇಲ್ಲ ಅನ್ನಿಸುತ್ತದೆ ಎಂಬ ಟ್ವೀಟ್ ನಿಂದ ಹಿಡಿದು ಸೋಮನಾಥ್ ವಿರುದ್ಧ ಕಿಡಿಕಾರುವ ಟ್ವೀಟ್ ಗಳು ಹರಿದಾಡುತ್ತಿವೆ..

ಸೋಮನಾಥ್ ಭಾರ್ತಿರಿಂದ ನಿರಾಕರಣೆ

ಸೋಮನಾಥ್ ಭಾರ್ತಿರಿಂದ ನಿರಾಕರಣೆ

ಮಾಳವೀಯ ನಗರ ಶಾಸಕ ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ ಭಾರ್ತಿ ಅವರು ಸದ್ಯ ಕೇರಳ ಪ್ರವಾಸದಲ್ಲಿದ್ದು, ತನ್ನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ, ಈ ಎಲ್ಲಾ ಆರೋಪಗಳು ಸಂಪೂರ್ಣ ಸುಳ್ಳಾಗಿದ್ದು, ಇದರ ಹಿಂದೆ ಯಾರದೋ ಕೈವಾಡವಿದೆ ಎಂದಿದ್ದಾರೆ.

ದೆಹಲಿ ಮಹಿಳಾ ಆಯೋಗ ಹೇಳಿಕೆ

ದೆಹಲಿ ಮಹಿಳಾ ಆಯೋಗ ಹೇಳಿಕೆ

ಲಿಪಿಕಾ ಕಳೆದ ಮೂರು ವರ್ಷಗಳಿಂದಲೂ ದ್ವಾರಕಾದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಮತ್ತು ಭಾರ್ತಿ ಅಲ್ಲಿಗೆ ಹೋಗುತ್ತಿರುತ್ತಾರೆ ಎಂದು ಬರ್ಖಾ ಸಿಂಗ್ ತಿಳಿಸಿದ್ದಾರೆ.

ಮಂಜುಲ್ ಅವರ ಕಾರ್ಟೂನ್ ಪಂಚ್

ಎಎಪಿ ಸೇರ್ಪಡೆಯಾಗಲು ಬೇಕಾದ ಅರ್ಹತೆ ಬಗ್ಗೆ ಕಾರ್ಟೂನ್ ಪಂಚ್.

ಸೋಮನಾಥ್ ಭಾರ್ತಿ ಹಳೆ ಟ್ವೀಟ್ ಗಳು

ಸೋಮನಾಥ್ ಭಾರ್ತಿ ಹಳೆ ಟ್ವೀಟ್ ಗಳನ್ನು ಮತ್ತೆ ಹೊರ ತೆಗೆದು ಹಾಕಲಾಗುತ್ತಿದೆ.

ನಿಜಕ್ಕೂ ಇದು ಶೋಚನೀಯ

ನಿಜಕ್ಕೂ ಇದು ಶೋಚನೀಯ, ಹೆಣ್ಣು ಮಗು ಬೇಡವೆಂದು ಹಿಂಸೆ ನೀಡುತ್ತಿದ್ದರೆ?

ದೆಹಲಿ ಸರ್ಕಾರದ ವಾಸ್ತುನೇ ಸರಿ ಇಲ್ಲ ಕಣ್ರಿ

ದೆಹಲಿ ಸರ್ಕಾರದ ಕಾನೂನು ಸಚಿವಾಲಯದ ವಾಸ್ತು ಸರಿ ಮಾಡಬೇಕು. ಮೊದಲು ಸೋಮನಾಥ್ ಈಗ ತೋಮಾರ್.. ಮತ್ತೆ ಸೋಮನಾಥ್

English summary
It seems that Aam Aadmi Party leaders' woes are not going to end soon. Delhi's former law minister and controversial AAP leader Somanth Bharti has again landed himself in trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X