ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರಿಗೆ ಥಳಿಸುತ್ತಿರುವ ಶಾಕಿಂಗ್ ವಿಡಿಯೋ ನೋಡಿ ಅಣ್ಣಾಮಲೈ ಕಿಡಿ

|
Google Oneindia Kannada News

ನವದೆಹಲಿ, ನವೆಂಬರ್ 04: ನವದೆಹಲಿಯಲ್ಲಿ ಪೊಲೀಸ್ ಒಬ್ಬರನ್ನು ಲಾಯರ್ ಗಳು ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಸುದ್ದಿ ಮಾಡಿದೆ.

ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಮಾಜಿ ಐಪಿ ಎಸ್ ಅಧಿಕಾರಿ ಅಣ್ಣಾಮಲೈ, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಐದು ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರಐದು ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ

"ನಮ್ಮ ವಕೀಲರು ಇಳಿದಿರುವ ಮಟ್ಟವನ್ನು ನೋಡಿದರೆ ಅಸಹ್ಯವಾಗುತ್ತದೆ" ಎಂದು ಕೆ.ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ. ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಅಣ್ಣಾಮಲೈ ಟ್ವೀಟ್

"ಇದರ ಬಗ್ಗೆ ಮಾತನಾಡಲು ಪದಗಳಿಲ್ಲ. ನಮ್ಮ ವಕೀಲರು ಈ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ತಿಳಿದರೆ ಅಸಹ್ಯವಾಗುತ್ತದೆ. ಪ್ರಜಾಪ್ರಭುತ್ವವನ್ನು ಹೀಗೆ ಅಪಹಾಸ್ಯ ಮಾಡಬಾರದು. ಪ್ರತಿಯೊಬ್ಬ ಪೊಲೀಸನಿಗೂ ತನ್ನನ್ನು ರಕ್ಷಿಸಿಕೊಳ್ಳುವ ಮತ್ತು ತಾನು ತೊಟ್ಟಿರುವ ಖಾಕಿಯ ಘನತೆಯನ್ನು ಉಳಿಸುವ ಅಧಿಕಾರವಿದೆ. ಆತ ಹೀಗೆ ಹೊಡೆಸಿಕೊಳ್ಳುವ ಬದಲು ಆ ಕೆಲಸವನ್ನು ಮಾಡಬಹುದಿತ್ತು" ಎಂದು ಕೆ.ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.

ಕೇವಲ ವಿಡಿಯೋ ನೋಡಿ ನಿರ್ಧರಿಸುವುದಕ್ಕಾಗೋಲ್ಲ

ಕೇವಲ ವಿಡಿಯೋ ನೋಡಿ ನಿರ್ಧರಿಸುವುದಕ್ಕಾಗೋಲ್ಲ

ಕೇವಲ ವಿಡಿಯೋ ನೋಡಿ ಎಲ್ಲವನ್ನೂ ನಿರ್ಧರಿಸುವುದಕ್ಕಾಗುವುದಿಲ್ಲ, ಆ ಪೊಲೀಸ್ ಖಂಡಿತವಾಗಿಯೂ ಶಿಕ್ಷಿಸುವಂಥ ತಪ್ಪು ಮಾಡಿದ್ದರೆ ಅವನನ್ನು ಹೊಡೆದಿದ್ದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅವನ ಯಾವ ತಪ್ಪೂ ಮಾಡಿಲ್ಲ ಎಂದಾದರೆ ಈ ಕೃತ್ಯಕ್ಕಾಗಿ ಹೊಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು, ಅವರಿಗೆ ಶಿಕ್ಷೆಯಾಗಲೇಬೇಕು ಎಂದಿದ್ದಾರೆ ಕೆದಾರನಾಥ್ ಶೆಣೈ.

ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ

ನ್ಯಾಯಾಗದ ಹಣೆಬರಹ

ನ್ಯಾಯಾಗದ ಹಣೆಬರಹ

ನಮ್ಮ ದೇಶದಲ್ಲಿ ಅತ್ಯಂತ ಭ್ರಷ್ಟ ಸಂಸ್ಥೆ ಎಂದರೆ ಅದು ನ್ಯಾಯಾಂಗ ಎಂದಿದ್ದಾರೆ ಸಚಿನ್. ಮತ್ತೆ ಕೆಲವರು ಪೊಲೀಸರಿಗೇ ರಕ್ಷಣೆ ಇಲ್ಲ ಎಂಮದಾದರೆ ಸಾಮಾನ್ಯ ಜನರ ಕತೆ ಏನು ಎಂದು ಪ್ರಶ್ನಿಸಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಪೊಲೀಸ್ ಒಬ್ಬನೇ ಇದ್ದ, ಮತ್ತು ಲಾಯರ್ ಗಳು ಗುಂಪಿನಲ್ಲಿದ್ದರು. ಅದೂ ಅಲ್ಲದೆ ನಮ್ಮ ದೇಶದಲ್ಲಿ ಇಂಥ ಪ್ರಕರಣಗಳಲ್ಲಿ ಕಾನೂನು ಹೇಗೆ ನಡೆದುಕೊಳ್ಳುತ್ತದೆ ಎಂಬ ಬಗ್ಗೆ ಚೆನ್ನಾಗಿ ಗೊತ್ತಿದ್ದರಿಂದ ಅವರು ಇಂಥ ಕೆಲಸವನ್ನು ನಿರ್ಭಯವಾಗಿ ಮಾಡಿದ್ದಾರೆ ಎಂದು ನಮ್ಮ ಬೆಂಗಳೂರು ಎಂಬ ಟ್ವೀಟ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ

.

English summary
Annamalai Shocks After Wathing A Video In Which Lawyers Beat a Police in Delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X