ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಸಮಸ್ಯೆ ಬಗೆಹರಿಯದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ: ಅಣ್ಣಾ ಹಜಾರೆ

|
Google Oneindia Kannada News

ನವದೆಹಲಿ, ಡಿಸೆಂಬರ್ 14: ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯು ಮುಂದುವರೆದಿದ್ದು, ಕೇಂದ್ರದ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಇದರ ನಡುವೆ ಇದೀಗ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ರೈತರಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಡಿಸೆಂಬರ್ 8 ರಂದು ಭಾರತ್ ಬಂದ್ ನಂತರ, ರೈತ ಮುಖಂಡರು ತಮ್ಮ ಬೇಡಿಕೆಯ ಮೇರೆಗೆ ಒಂದು ದಿನ ಉಪವಾಸ ನಡೆಸಿದರು. ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಹ ರೈತರಿಗೆ ಬೆಂಬಲವಾಗಿ ಉಪವಾಸ ಮಾಡಿದರು.

ನಮ್ಮ ಅವಶ್ಯಕತೆಗಾಗಿ ಇಲ್ಲಿವರೆಗೂ ಬಂದಿದ್ದೇವೆ; ಕ್ಷಮೆ ಯಾಚಿಸಿದ ರೈತ ಸಂಘನಮ್ಮ ಅವಶ್ಯಕತೆಗಾಗಿ ಇಲ್ಲಿವರೆಗೂ ಬಂದಿದ್ದೇವೆ; ಕ್ಷಮೆ ಯಾಚಿಸಿದ ರೈತ ಸಂಘ

ಈ ಹಿಂದೆ ರೈತರ ಆಂದೋಲನವನ್ನು ಬೆಂಬಲಿಸಲು ದೇಶಾದ್ಯಂತ ರೈತರು ಬೀದಿಗಿಳಿಯಬೇಕು ಎಂದು ಕರೆನೀಡಿದ್ದ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ರೈತರ ಬೇಡಿಕೆ ಈಡೇರಿಸದಿದ್ದರೆ ಉಪವಾಸ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.

Anna Hazare Letter To Union Agriculture Minister: He Will Launch Hunger Strike Against Government

ರೈತರ ಸಮಸ್ಯೆ ಕುರಿತು ಅಣ್ಣಾ ಹಜಾರೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಸೋಮವಾರ ಈ ಪತ್ರ ಬರೆದಿದ್ದಾರೆ. ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಸೇರಿದಂತೆ ರೈತರ ಬೇಡಿಕೆಗಳು ಮತ್ತು ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಮತ್ತೆ ಉಪವಾಸ ಸತ್ಯಾಗ್ರಹ ನಡೆಸುವಂತೆ ಅಣ್ಣಾ ಹಜಾರೆ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಬರೆದ ಪತ್ರದಲ್ಲಿ ಅಣ್ಣಾ ಹಜಾರೆ, 'ಲೋಕಪಾಲ್ ಚಳವಳಿಯ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಬೆಚ್ಚಿಬಿದ್ದಿತ್ತು. ಈ ರೈತರ ಪ್ರತಿಭಟನೆಯನ್ನು ನಾನು ಅದೇ ಮಾರ್ಗದಲ್ಲಿ ನೋಡುತ್ತಿದ್ದೇನೆ, ರೈತರು ಮಾಡಿದ ಭಾರತ್ ಬಂದ್ ದಿನದಂದು, ನಾನು ಒಂದು ದಿನ ಉಪವಾಸ ಮಾಡಿದ್ದೇನೆ, ಇಂದಿಗೂ ರೈತರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ರೈತರ ಸಮಸ್ಯೆಗಳು ಬಗೆಹರಿಯದಿದ್ದರೆ ನಾನು ಮತ್ತೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ತಮ್ಮ ಹಿಂದಿನ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ. ಆಗಿನ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಬಂದು ಲಿಖಿತ ಭರವಸೆ ನೀಡಿದ್ದರು, ಆದರೆ ಇನ್ನೂ ಅದನ್ನು ಪಾಲಿಸಿಲ್ಲ ಎಂದು ಅವರು ಹೇಳಿದರು. ಫೆಬ್ರವರಿ 5, 2019 ರಂದು, ನಿಲ್ಲಿಸಿದ ವೇಗವನ್ನು ಮರುಪ್ರಾರಂಭಿಸಲು ನಾನು ಯೋಚಿಸುತ್ತಿದ್ದೇನೆ'' ಎಂದು ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ.

ಭಾರತ್ ಬಂದ್‌ಗೆ ಮುಂಚೆಯೇ, ಅಣ್ಣಾ ಹಜಾರೆ ರೈತರನ್ನು ಬೆಂಬಲಿಸಿ ಒಂದು ದಿನ ಉಪವಾಸ ಮಾಡಿದರು. ಅಷ್ಟೇ ಅಲ್ಲ, ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ 'ಬೃಹತ್ ಆಂದೋಲನ'ವನ್ನೂ ಆಯೋಜಿಸುವುದಾಗಿ ಅಣ್ಣಾ ಹಜಾರೆ ತಮ್ಮ ಪತ್ರದಲ್ಲಿ ಸರ್ಕಾರಕ್ಕೆ ತಿಳಿಸಿದ್ದಾರೆ.

English summary
Social activist Anna Hazare has written to Union Agriculture Minister stating that he will launch hunger strike against Central Government if the farmers issues are not resolved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X