ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಶವ ಪತ್ತೆ, ಬಿಜೆಪಿ ಮುಖಂಡನ ಪುತ್ರನಿಂದ ವೇಶ್ಯಾವಾಟಿಕೆ?

|
Google Oneindia Kannada News

ಉತ್ತರಾಖಂಡ್​ನ 19 ವರ್ಷದ ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದ ರೆಸಾರ್ಟ್ ಮಾಲೀಕರು ತಮ್ಮ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾರೆ. ಇಂದು ಏಳು ದಿನಗಳ ನಂತರ ಯುವತಿಯ ಶವವನ್ನು ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರೆಸಾರ್ಟ್ ಮೇಲೆ ಬುಲ್ಡೋಜರ್ ಮೊಲಕ ಧ್ವಂಸ ಮಾಡಲಾಗಿದೆ.

ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಉತ್ತರಾಖಂಡ ಪೊಲೀಸರಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಏಳು ದಿನಗಳ ನಂತರ ಇಂದು ಪೊಲೀಸರು ಅಂಕಿತಾ ಶವವನ್ನು ಹೊರತೆಗೆದಿದ್ದಾರೆ. ಎಸ್‌ಡಿಆರ್ ಎಫ್‌ ಚಿಲ್ಲಾ ಬ್ಯಾರೇಜ್‌ನ ಕಾಲುವೆಯಿಂದ ಅಂಕಿತಾ ಮೃತದೇಹವನ್ನು ಹೊರತೆಗೆದಿದೆ. ಮೃತದೇಹವನ್ನು ಅಂಕಿತಾ ಕುಟುಂಬಸ್ಥರು ಗುರುತಿಸಿದ್ದಾರೆ. ಅಂಕಿತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್‌ಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ಸ್ಪಷ್ಟವಾಗಲಿದೆ.

19ರ ಹರೆಯದ ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಮುಖಂಡರೊಬ್ಬರ ಪುತ್ರನ ಕೈವಾಡವಿರುವುದರಿಂದ ರಾಜ್ಯದಲ್ಲಿ ರಾಜಕೀಯ ವಾತಾವರಣ ಕೂಡ ಬಿರುಸುಗೊಂಡಿದೆ. ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ. ಉತ್ತರಾಖಂಡದ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಸಿಎಂ ಈ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವರ್ಗಾಯಿಸಿದ್ದಾರೆ.

ಅಂಕಿತಾ ವನಂತ್ರಾ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿ

ಅಂಕಿತಾ ವನಂತ್ರಾ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿ

19 ವರ್ಷದ ಅಂಕಿತಾ ಭಂಡಾರಿ ವನಂತ್ರಾ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದಳು. ಪೌರಿ ಗರ್ವಾಲ್ ನಿವಾಸಿ ಅಂಕಿತಾ ಸೆಪ್ಟೆಂಬರ್ 18 ರಿಂದ ನಾಪತ್ತೆಯಾಗಿದ್ದರು. ಅಂಕಿತಾ ನಾಪತ್ತೆಯಾದ ನಂತರ ಆಕೆಯ ಸಂಬಂಧಿಕರು ಆಕೆಯನ್ನು ಹುಡುಕಲು ರೆಸಾರ್ಟ್‌ಗೆ ಬಂದಿದ್ದಾರೆ. ಆದರೆ ಅಲ್ಲಿಂದ ಖಚಿತ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂಕಿತಾ ನಾಪತ್ತೆಯಾದ ಮಾಹಿತಿಯನ್ನು ಸೆಪ್ಟೆಂಬರ್ 18ರಂದು ಪೊಲೀಸರಿಗೆ ನೀಡಲಾಯಿತು. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.

ಪೊಲೀಸರ ತನಿಖೆಯಲ್ಲಿ ರೆಸಾರ್ಟ್ ಸಿಬ್ಬಂದಿಯ ಪಾತ್ರ ಅನುಮಾನಾಸ್ಪದವಾಗಿತ್ತು. ನಂತರ ಪೊಲೀಸರು ರೆಸಾರ್ಟ್ ಮಾಲೀಕರು ಮತ್ತು ವ್ಯವಸ್ಥಾಪಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದರು.ವಿಚಾರಣೆ ವೇಳೆ ರೆಸಾರ್ಟ್ ಮಾಲೀಕರು ಮತ್ತು ವ್ಯವಸ್ಥಾಪಕರು ಪೊಲೀಸರಿಗೆ ಮೊದಲು ಸುಳ್ಳು ಕಥೆ ಹೇಳಿದ್ದಾರೆ. ಆದರೆ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಅಂಕಿತಾ ಜೊತೆ ಎಲ್ಲೋ ಹೋದಾಗ ಸಿಸಿಟಿವಿ ದೃಶ್ಯಾವಳಿಗಳು ಕಂಡುಬಂದಿದ್ದು, ಹಿಂತಿರುಗಿ ಬರುವಾಗ ಅಂಕಿತಾ ಕಾಣಲಿಲ್ಲ. ಇದಾದ ಬಳಿಕ ಪೊಲೀಸರು ಆರೋಪಿಗಳನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದ್ದು, ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

 ಅಂಕಿತಾಳನ್ನು ಗಂಗೆಗೆ ತಳ್ಳಿದರು?

ಅಂಕಿತಾಳನ್ನು ಗಂಗೆಗೆ ತಳ್ಳಿದರು?

ಅಂಕಿತಾಳನ್ನು ತಾವೇ ಕೊಂದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಂಕಿತಾ ಅವರೊಂದಿಗೆ ಮೂವರೂ ಬ್ಯಾರೇಜ್‌ಗೆ ಹೋಗಿದ್ದರು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಎಲ್ಲರೂ ಇಲ್ಲಿ ವೈನ್ ಕುಡಿದರು. ಇದಾದ ನಂತರ ಅಂಕಿತಾ ರೆಸಾರ್ಟ್‌ನ ಗ್ರಾಹಕರೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಪುಲ್ಕಿತ್ ತನ್ನ ಮೇಲೆ ಒತ್ತಡ ಹೇರುತ್ತಾನೆ ಎಂದು ಎಲ್ಲರಿಗೂ ಹೇಳುತ್ತೇನೆ ಎಂದು ಬೆದರಿಕೆ ಹಾಕಲು ಪ್ರಾರಂಭಿಸುತ್ತಾಳೆ. ಇದೇ ವೇಳೆ, ಅಂಕಿತಾ ಪುಲ್ಕಿತ್ ಮೊಬೈಲ್ ಎಸೆದಿದ್ದು, ಇಬ್ಬರ ನಡುವೆ ಜಗಳ ಆರಂಭವಾಗಿದೆ. ನಂತರ ಮೂವರೂ ಕೋಪದಿಂದ ಅಂಕಿತಾಳನ್ನು ಗಂಗೆಗೆ ತಳ್ಳಿದರು ಮತ್ತು ಮೂವರೂ ರೆಸಾರ್ಟ್‌ಗೆ ಹಿಂತಿರುಗುತ್ತಾರೆ.

ಪೊಲೀಸ್ ತನಿಖೆಯಲ್ಲಿ ವಿಷಯ ಬಹಿರಂಗಗೊಂಡ ನಂತರ, ಪೌರಿ ಗರ್ವಾಲ್ ಜಿಲ್ಲೆಯ ನಿವಾಸಿ ಅಂಕಿತಾ ಭಂಡಾರಿ ನಾಪತ್ತೆ ಪ್ರಕರಣವನ್ನು ನಿನ್ನೆ ಸೆಪ್ಟೆಂಬರ್ 22ರಂದು ಉತ್ತರಾಖಂಡ ಪೊಲೀಸರಿಗೆ ಕಂದಾಯ ಪೊಲೀಸರಿಂದ ವರ್ಗಾಯಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ. ಪ್ರಮುಖ ಆರೋಪಿ ವನಂತ್ರ ರೆಸಾರ್ಟ್ ಮಾಲೀಕ ಪುಲ್ಕಿತ್ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು 24 ಗಂಟೆಗಳಲ್ಲಿ ಪ್ರಕರಣವನ್ನು ವರ್ಕ್ ಔಟ್ ಮಾಡಿದ್ದಾರೆ.

 ಮಾಜಿ ಸಚಿವನ ಮಗ ಅಂಕಿತಾಗೆ ವೇಶ್ಯಾವಾಟಿಕೆಗೆ ಒತ್ತಾಯ?

ಮಾಜಿ ಸಚಿವನ ಮಗ ಅಂಕಿತಾಗೆ ವೇಶ್ಯಾವಾಟಿಕೆಗೆ ಒತ್ತಾಯ?

ವನಂತ್ರಾ ರೆಸಾರ್ಟ್ ಉತ್ತರಾಖಂಡದ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ಅವರಿಗೆ ಸೇರಿದೆ. ಆಗಸ್ಟ್ 28 ರಂದು ಅದೇ ರೆಸಾರ್ಟ್‌ನಲ್ಲಿ ಅಂಕಿತಾ ಸ್ವಾಗತಕಾರ ಹುದ್ದೆಗೆ ಸೇರಿದ್ದರು. ರೆಸಾರ್ಟ್‌ನ ಕೊಠಡಿಯೊಂದರಲ್ಲಿ ತಂಗುತ್ತಿದ್ದಳು. ಪುಲ್ಕಿತ್ ಅಂಕಿತಾ ಅವರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲು ಬಯಸಿದ್ದರು ಎಂದು ಆರೋಪಿಸಲಾಗಿದೆ. ಅಂಕಿತಾ ಅವರ ವಾಟ್ಸಾಪ್ ಚಾಟ್‌ನಿಂದ ಇದು ಬಹಿರಂಗವಾಗಿದೆ.

ಅಂಕಿತಾ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದ ಎಎಸ್ಪಿ ಶೇಖರ್ ಸುಯಲ್, ವನಂತ್ರಾ ರೆಸಾರ್ಟ್ ಮಾಲೀಕರು ಪುಲ್ಕಿತ್ ಆರ್ಯ, ಅಂಕಿತ್ ಗುಪ್ತಾ ಮತ್ತು ಸೌರಭ್ ಅಂಕಿತಾ ಅವರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ. ಬಂಧಿತ ಮೂವರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಬಳಿಕ ಮೂವರನ್ನೂ ಜೈಲಿಗೆ ಕಳುಹಿಸಲಾಗಿದೆ. ಇಂದು ಬೆಳಗ್ಗೆ ಇಲ್ಲಿನ ಪೊಲೀಸರು ಅಂಕಿತಾ ಶವವನ್ನು ಚಿಲ್ಲಾ ನಾಲೆಯಿಂದ ಹೊರತೆಗೆದು ಆರೋಪಿಗಳಿಗೆ ಮಾಹಿತಿ ನೀಡಿದ್ದಾರೆ.

 ಅಂಕಿತಾಳ ತಂದೆ, ಸಹೋದರ ಮೃತದೇಹವನ್ನು ಗುರುತಿಸಿದ್ದಾರೆ

ಅಂಕಿತಾಳ ತಂದೆ, ಸಹೋದರ ಮೃತದೇಹವನ್ನು ಗುರುತಿಸಿದ್ದಾರೆ

ಅಂಕಿತಾ ಮೃತದೇಹ ಪತ್ತೆಯಾಗಿರುವುದನ್ನು ದೃಢಪಡಿಸಿದ ಪೊಲೀಸ್ ಅಧಿಕಾರಿ, ಸಂತ್ರಸ್ತೆಯ ತಂದೆ ಮತ್ತು ಸಹೋದರ ಮೃತದೇಹವನ್ನು ಗುರುತಿಸಿದ್ದಾರೆ. ಅವರ ತಂದೆ ಮತ್ತು ಸಹೋದರ ನನ್ನೊಂದಿಗೆ ಇದ್ದಾರೆ. ನಾವು ಬೆಳಿಗ್ಗೆ 7 ಗಂಟೆಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ, ಈಗ ಶೋಧ ಕಾರ್ಯಾಚರಣೆ ಮುಗಿದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್‌ಗೆ ಕೊಂಡೊಯ್ಯಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

 ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯಿಂದ ಭರವಸೆ

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯಿಂದ ಭರವಸೆ

ವಿಷಯ ಮುನ್ನೆಲೆಗೆ ಬಂದ ನಂತರ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, "ಈ ಘೋರ ಅಪರಾಧವನ್ನು ಯಾರೇ ಮಾಡಿದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ. ರಿಷಿಕೇಶ ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು," ಎಂದು ಭರವಸೆ ನೀಡಲಾಗಿದೆ.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಶುಕ್ರವಾರ ತಡರಾತ್ರಿ ಬಿಜೆಪಿ ಮುಖಂಡರ ಪುತ್ರನ ರೆಸಾರ್ಟ್‌ನಲ್ಲಿ ಬುಲ್ಡೋಜರ್‌ ನುಗ್ಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಂಕಿತಾ ಅವರ ವಾಟ್ಸಾಪ್ ಚಾಟ್‌ನ ಒಂದು ಭಾಗವೂ ಹೊರಬಿದ್ದಿದೆ. ಈ ಹೋಟೆಲ್‌ನ ಜನರು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅವಳು ಬರೆದಿದ್ದಾಳೆ. ತಪ್ಪಿಗೆ ಅಂಕಿತಾ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಬಲ್ಲವರು ಆರೋಪಿಸಿದ್ದಾರೆ.

English summary
Ankita Bhandari murder case: Body recovered from barrage in Rishikesh Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X