ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ ವಿರುದ್ಧ 10 ಸಾವಿರ ಕೋಟಿ ರು ಮೊಕದ್ದಮೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ರಫೇಲ್ ಯುದ್ಧ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡಿದ ವಾಹಿನಿಗಳ ವಿರುದ್ಧ ಅನಿಲ್ ಅಂಬಾನಿ ಅವರ ರಿಲಯನ್ಸ್ ಸಂಸ್ಥೆಯು ಕಾನೂನು ಸಮರ ಆರಂಭಿಸಿದೆ. ಎನ್ ಡಿಟಿವಿ ವಿರುದ್ಧ ಅಹಮದಾಬಾದ್ ಕೋರ್ಟಿನಲ್ಲಿ 10 ಸಾವಿರ ಕೋಟಿ ರು ಪರಿಹಾರ ಕೋರಿ, ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಅಂಬಾನಿಯ ವಿಮಾ ಕಂಪೆನಿಗೂ ಮೋದಿ ಸರ್ಕಾರದ ನೆರವು? ಮತ್ತೊಂದು ವಿವಾದ ಅಂಬಾನಿಯ ವಿಮಾ ಕಂಪೆನಿಗೂ ಮೋದಿ ಸರ್ಕಾರದ ನೆರವು? ಮತ್ತೊಂದು ವಿವಾದ

ಸೆಪ್ಟೆಂಬರ್ 29ರಂದು ಪ್ರಸಾರವಾದ 'ಟ್ರೂತ್ ವರ್ಸಸ್ ಹೈಪ್' ಹೆಸರಿನ ಕಾರ್ಯಕ್ರಮದ ವಿರುದ್ಧ ಅನಿಲ್ ಅಂಬಾನಿ ಸಂಸ್ಥೆ ದಾವೆ ಹೂಡಿದೆ ಎಂದು ಎನ್ ಡಿಟಿವಿ ಸಂಸ್ಥೆಯೇ ಪ್ರಕಟಿಸಿದ್ದು, ಆದರೆ, ಸಂಸ್ಥೆ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದು, ಅಕ್ಟೋಬರ್ 26ರಂದು ಅಹಮದಾಬಾದ್ ನ್ಯಾಯಾಲಯದಲ್ಲಿ ಇದಕ್ಕೆ ಉತ್ತರ ನೀಡುವುದಾಗಿ ಹೇಳಿದೆ.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ಡಸಾಲ್ಸ್ಟ್ ಎವಿಯೇಷನ್ ಸಂಸ್ಥೆಯು 36 ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಸಹ ಸಂಸ್ಥೆಯಾಗಿ ಸೇರಿಸಿಕೊಂಡಿದ್ದರಲ್ಲಿ ಪಾರದರ್ಶಕತೆ ಎಷ್ಟಿದೆ ಎಂಬುದರ ಬಗ್ಗೆ Truth vs Hype ಕಾರ್ಯಕ್ರಮದಲ್ಲಿ ಚರ್ಚಿಸಲಾಗಿತ್ತು.

ರಿಲಯನ್ಸ್ ನನಗೆ ಥ್ಯಾಂಕ್ಸ್ ಹೇಳುವುದು ಬೇಡ ಎಂದ ಫ್ರಾನ್ಸ್ ಮಾಜಿ ಅಧ್ಯಕ್ಷ! ರಿಲಯನ್ಸ್ ನನಗೆ ಥ್ಯಾಂಕ್ಸ್ ಹೇಳುವುದು ಬೇಡ ಎಂದ ಫ್ರಾನ್ಸ್ ಮಾಜಿ ಅಧ್ಯಕ್ಷ!

Anil Ambani’s Reliance Group sues NDTV for Rs 10,000 crore

ಆಗಸ್ಟ್ ತಿಂಗಳಿನಲ್ಲಿ ಕಾಂಗ್ರೆಸ್ ಮಾಲೀಕತ್ವದ ನ್ಯಾಷನಲ್ ಹೆರಾಲ್ಡ್ ವಿರುದ್ಧ ರಿಲಯನ್ಸ್ ಸಮೂಹ ಸಂಸ್ಥೆಯು 5,000 ಕೋಟಿ ರು ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Anil Ambani’s Reliance Group sues NDTV for Rs 10,000 crore over channel's coverage of Rafale jet deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X