ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮೇಲೆ ಹೂಡಿದ್ದ ಕೇಸು ವಾಪಸ್ ಪಡೆಯಲಿದ್ದಾರೆ ಅನಿಲ್ ಅಂಬಾನಿ

|
Google Oneindia Kannada News

ನವದೆಹಲಿ, ಮೇ 21: ಕಾಂಗ್ರೆಸ್ ಪಕ್ಷ ಹಾಗೂ ಅದರದ್ದೇ ಮುಖವಾಣಿ ನ್ಯಾಷನಲ್ ಹೆರಾಲ್ಡ್‌ ಮೇಲೆ ಹೇರಿದ್ದ ಮಾನನಷ್ಟ ಮೊಕದ್ದಮೆಯನ್ನು ಉದ್ಯಮಿ ಅನಿಲ್ ಅಂಬಾನಿ ವಾಪಸ್ ಪಡೆಯಲಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಕಾಂಗ್ರೆಸ್ ಮತ್ತು ನ್ಯಾಷನಲ್ ಹೆರಾಲ್ಡ್ ಮೇಲೆ 5000 ಕೋಟಿ ರೂಪಾಯಿಯ ಬಹುದೊಡ್ಡ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿತ್ತು, ಆದರೆ ಅದನ್ನು ವಾಪಸ್ ಪಡೆಯಲು ನಿರ್ಣಯಿಸಿದೆ ಸಂಸ್ಥೆ.

ರಾಹುಲ್ ಸರ್ಕಾರದಿಂದಲೇ 1 ಲಕ್ಷ ಕೋಟಿ ಗುತ್ತಿಗೆ ಪಡೆದಿದ್ದೇನೆ: ಅನಿಲ್ ಅಂಬಾನಿ ರಾಹುಲ್ ಸರ್ಕಾರದಿಂದಲೇ 1 ಲಕ್ಷ ಕೋಟಿ ಗುತ್ತಿಗೆ ಪಡೆದಿದ್ದೇನೆ: ಅನಿಲ್ ಅಂಬಾನಿ

ನಮ್ಮ ವಿರೋಧಿಗಳು ನಮ್ಮ ಮೇಲೆ ಹೂಡಿರುವ ಪ್ರಕರಣವನ್ನು ಹಿಂಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಕಾಂಗ್ರೆಸ್ ಪರ ವಕೀಲರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

Anil Ambani to withdraw law suit against Congress

ನಾವು ಹೂಡಿದ್ದ ಪ್ರಕರಣವನ್ನು ಹಿಂಪಡೆಯುತ್ತಿದ್ದೇವೆ ಎಂದು ಎದುರಾಳಿಗಳಿಗೆ ತಿಳಿಸಿದ್ದೇವೆ ಎಂದು ಅನಿಲ್ ಅಂಬಾನಿ ಅವರು ರಿಲಯನ್ಸ್ ಸಂಸ್ಥೆ ಪರ ವಕೀಲರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ರಜಾ ಅವಧಿ ಮುಗಿದ ನಂತರ ಅಧಿಕೃತವಾಗಿ ಮಾನನಷ್ಟ ಪ್ರಕರಣವನ್ನು ರಿಲಯನ್ಸ್ ಹಿಂಪಡೆಯಲಿದೆ.

ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ? ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?

ರಫೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಅನಿಲ್ ಅಂಬಾನಿ ವಿರುದ್ಧ ಆರೋಪಗಳನ್ನು ಮಾಡಿದ್ದರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯೂ ರಫೆಲ್ ಬಗ್ಗೆ ಹಲವು ಸುದ್ದಿಗಳನ್ನು ಪ್ರಕರಟಿಸಿತ್ತು.

ಸಾಲ ತೀರಿಸಲು ನೆರವಾದ ಅಣ್ಣ-ಅತ್ತಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ ಸಾಲ ತೀರಿಸಲು ನೆರವಾದ ಅಣ್ಣ-ಅತ್ತಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ

ಅಂಬಾನಿಯ ರಿಲಯನ್ಸ್ ಸಂಸ್ಥೆಯು ರಣದೀಪ್ ಸುರ್ಜೇವಾಲಾ, ಒಮ್ಮನ್ ಚಾಂಡಿ, ಅಶೋಕ್ ಚೌಹಾಣ್, ಅಭಿಷೇಕ್ ಮನು ಸಿಂಘ್ವಿ, ಸಂಜಯ್ ನಿರುಪಮ್, ಶಕ್ತಿಸಿನ್ಹ ಘೋಯಲ್ ಸೇರಿದಂತೆ ಹಲವರ ಮೇಲೆ ಮಾನನಷ್ಟ ಪ್ರಕರಣ ಹೂಡಿತ್ತು.

English summary
Anil Ambani withdrawing law suit against Congress and National Herald. Reliance lawyer already intimated to opposite lawyer that they will withdraw law suit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X