• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಸರ್ಕಾರದಿಂದಲೇ 1 ಲಕ್ಷ ಕೋಟಿ ಗುತ್ತಿಗೆ ಪಡೆದಿದ್ದೇನೆ: ಅನಿಲ್ ಅಂಬಾನಿ

|
   ಮೋದಿ ವಿರುದ್ಧದ ಹೇಳಿಕೆಗೆ ರಾಹುಲ್ ಗಾಂಧಿ ಬಳಿ ಉತ್ತರ ಕೇಳಿದ ಅಂಬಾನಿ..!?

   ನವದೆಹಲಿ, ಮೇ 6: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ರೋನಿಂಗ್ ಕ್ಯಾಪಿಟಲಿಸಂ ಹಾಗೂ ಅಪ್ರಾಮಾಣಿಕತೆ ಹೇಳಿಕೆಗೆ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಗ್ರೂಪ್ ತಿರುಗೇಟು ನೀಡಿದೆ.

   ರಾಹುಲ್ ಹೇಳಿಕೆಯನ್ನು ಅಲ್ಲಗಳೆದಿರುವ ಅನಿಲ್ ಅಂಬಾನಿ ದುರುದ್ದೇಶಪೂರ್ವಕ ಹಾಗೂ ರಾಜಕೀಯ ಕಾರಣಗಳಿಗೆ ನನ್ನನ್ನು ಎಳೆದು ತರಲಾಗುತ್ತಿದೆ. ರಾಹುಲ್ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

   ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?

   ಕಾಂಗ್ರೆಸ್ ನೇತೃತ್ವಸ ಯುಪಿಎ ಅವಧಿಯಲ್ಲಿ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಗ್ರೂಪ್‌ಗೆ ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಗುತ್ತಿಗೆ ದೊರೆತಿದೆ. ಇಂಧನ, ಟೆಲಿಕಾಂ, ರಸ್ತೆ ನಿರ್ಮಾಣ ಮೆಟ್ರೋ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಗುತ್ತಿಗೆಯನ್ನು ಈ ಕಂಪನಿ ನಿರ್ವಹಿಸಿದೆ.

   ಹೀಗಾಗಿ 2004ರಿಂದ 2014ರವರೆಗೆ ರಾಹುಲ್ ಗಾಂಧಿಯ ಕಾಂಗ್ರೆಸ್ ಸರ್ಕಾರ ಕ್ರೋನಿಂಗ್ ಕ್ಯಾಪಿಟಾಲಿಸ್ಟ್ ಹಾಗೂ ಅಪ್ರಾಮಾಣಿಕ ಉದ್ಯಮಿಯನ್ನು ಬೆಂಬಲಿಸಿತ್ತೇ ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಅಂಬಾನಿ ಗ್ರೂಪ್ ಹೇಳಿದೆ.

   English summary
   Congress president is engaging in a “calumny, disinformation, distortion and malicious lies,” the Reliance group said on Sunday, rebutting the claims of Rahul Gandhi that Anil Ambani is a crony capitalist.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X