ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹೃದಯ ಮೃದುಗೊಳಿಸಿ: ಅಮಿತ್ ಶಾಗೆ ಜಗನ್ ಮೋಹನ್ ರೆಡ್ಡಿ ಮನವಿ

|
Google Oneindia Kannada News

ನವದೆಹಲಿ, ಜೂನ್ 15: ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, 2.58 ಲಕ್ಷ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಮಾನ್ಯತೆ ನೀಡುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೃದಯವನ್ನು ಮೃದುಗೊಳಿಸುವಂತೆ ಮನವಿ ಮಾಡಿದರು.

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಆಡಳಿತ ಸಮಿತಿಯ ಮೊದಲ ಸಮಿತಿಯಲ್ಲಿ ಕೂಡ ಈ ಬೇಡಿಕೆಯನ್ನು ಮುಂದಿಡುವುದಾಗಿ ಜಗನ್ ತಿಳಿಸಿದರು.

ತೆಲುಗುದೇಶಂ ಪಕ್ಷ ಇಲ್ಲದ ಹಾಗೇ ಮಾಡುತ್ತೇನೆ, ಹುಷಾರ್: ಸಿಎಂ ಜಗನ್ ತೆಲುಗುದೇಶಂ ಪಕ್ಷ ಇಲ್ಲದ ಹಾಗೇ ಮಾಡುತ್ತೇನೆ, ಹುಷಾರ್: ಸಿಎಂ ಜಗನ್

'ಗೃಹ ಸಚಿವರನ್ನು ಭೇಟಿಯಾಗಿ ಅವರ ಮನವೊಲಿಸಲು ಪ್ರಯತ್ನಿಸಿದ್ದೇನೆ ಮತ್ತು ವಿಶೇಷ ಸ್ಥಾನಮಾನದ ವಿಚಾರದಲ್ಲಿ ಪ್ರಧಾನಿಯವರ ಹೃದಯವನ್ನು ಮೃದುಗೊಳಿಸುವಂತೆ ಕೋರಿದ್ದೇನೆ ಎಂದು ಅವರು ಅಮಿತ್ ಶಾ ಅವರೊಂದಿಗಿನ ಒಂದು ಗಂಟೆ ಅವಧಿಯ ಸಮಾಲೋಚನೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

Andhra Pradesh Jagan Reddy Amit Shah soften PMs heart special category status

ಆಂಧ್ರಪ್ರದೇಶ ಪುನಾರಚನಾ ಕಾಯ್ದೆ ಅಡಿ ಬಾಕಿ ಉಳಿದಿರುವ ಎಲ್ಲ ಸವಲತ್ತುಗಳನ್ನು ಒದಗಿಸುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಕೂಡ ಅವರು ಮನವಿ ಮಾಡಿದರು.

ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆ ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆ

'ಇಂದು ನಾವು ವಿಶೇಷ ಸ್ಥಾನಮಾನ ಪಡೆದುಕೊಂಡಿಲ್ಲ. ನಾವು ಯಾರದ್ದೋ ಕರುಣೆಯಲ್ಲಿ ಇರುವಂತಾಗಿದೆ. ಆದರೆ, ನಾನು ಮೋದಿ ಅವರಿಗೆ ಮತ್ತೆ ಮತ್ತೆ ನೆನಪಿಸುತ್ತಲೇ ಇರುತ್ತೇನೆ. ಒಂದು ದಿನ ಪರಿಸ್ಥಿತಿ ಬದಲಾಗಲಿದೆ' ಎಂದು ಮೋದಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಜಗನ್ ಮೋಹನ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದರು.

ನಾವಿನ್ನು ಸುಮ್ಮನಿರೋಲ್ಲಾ: ನೂತನ ಸಿಎಂ ಜಗನ್ ವಿರುದ್ದ ಚಂದ್ರಬಾಬು ಆಕ್ರೋಶನಾವಿನ್ನು ಸುಮ್ಮನಿರೋಲ್ಲಾ: ನೂತನ ಸಿಎಂ ಜಗನ್ ವಿರುದ್ದ ಚಂದ್ರಬಾಬು ಆಕ್ರೋಶ

ಲೋಕಸಭೆಯಲ್ಲಿನ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ವೈಎಸ್‌ಆರ್‌ಸಿಪಿ ಸಂಸದರಿಗೆ ನೀಡಲು ಬಿಜೆಪಿ ಆಫರ್ ಮುಂದಿಟ್ಟಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 'ದಯವಿಟ್ಟು ಈ ಎಲ್ಲಾ ವಿಚಾರಗಳ ಬಗ್ಗೆ ಊಹಾಪೋಹ ಬೇಡ. ಮೊದಲಿಗೆ, ಅಂತಹ ಯಾವುದೇ ಆಫರ್ ಇಲ್ಲ. ಈ ಬಗ್ಗೆ ನಾವು ಕೇಳಿಲ್ಲ ಮತ್ತು ಮಾತನಾಡಿಯೂ ಇಲ್ಲ. ಯಾವುದೇ ಮೂಲದಿಂದ ಅಂತಹ ಯಾವುದೇ ಪ್ರಸ್ತಾವ ಬಂದಿಲ್ಲ. ಪ್ರಸ್ತುತ ಈ ಬಗ್ಗೆ ಯಾವ ಮಾತುಕತೆಯೂ ನಡೆದಿಲ್ಲ' ಎಂದರು.

English summary
Andhra Pradesh CM Jagan Mohan reddy met Home Minister Amit Shah and requested him to soften PM Narendra Modi's heart on granting special category status to his state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X