ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಕಾಶ್ಮೀರ ನಡೆಗೆ ಸಲಾಂ ಎಂದ ಆನಂದ್ ಮಹೀಂದ್ರಾ

|
Google Oneindia Kannada News

ನವದೆಹಲಿ, ಆಗಸ್ಟ್ 06: "ಕೆಲವು ನಿರ್ಧಾರಗಳನ್ನು ಮೊದಲೇ ಯಾಕೆ ತೆಗೆದುಕೊಳ್ಳಲಿಲ್ಲ ಎಂದು ನನಗೆ ಹಲವು ಬಾರಿ ಅನ್ನಿಸುತ್ತದೆ. ಅಂಥವುಗಳಲ್ಲಿ ಸಂವಿಧಾನದ 370ನೇ ವಿಧಿಯ ರದ್ದತಿಯೂ ಒಂದು" ಎಂದು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಈ ದಿಟ್ಟ ನಡೆಯನ್ನು ಶ್ಲಾಘಿಸಿದ್ದಾರೆ.

"ಈ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಬಹುದಿತ್ತಲ್ಲ ಎನ್ನಿಸುವ ವಿಷಯಗಳಲ್ಲಿ ಇದೂ ಒಂದು. ಕಾಶ್ಮೀರ ಭಾರತದ ಅವಿಭಾಜ್ಯ ಭಾಗ ಎಂಬುದನ್ನು ಒತ್ತಿಹೇಳಲು, ಅದನ್ನು ಸಂಭ್ರಮಿಸಲು ಇದು ಸಕಾಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಿದ್ಧಾರ್ಥ ಸಾವು: ಉದ್ಯಮಿಗಳಿಗೆ ಆನಂದ್ ಮಹೀಂದ್ರಾ ಎಚ್ಚರಿಕೆಯ ಮಾತುಸಿದ್ಧಾರ್ಥ ಸಾವು: ಉದ್ಯಮಿಗಳಿಗೆ ಆನಂದ್ ಮಹೀಂದ್ರಾ ಎಚ್ಚರಿಕೆಯ ಮಾತು

"ಇದನ್ನು ಎಲ್ಲ ಸೋಮವಾರದಂತೆಯೇ ಎನ್ನುವುದಕ್ಕಾಗುವುದಿಲ್ಲ. ಏಕೆಂದರೆ ಇಡೀ ದೇಶವೂ ಕಾಶ್ಮೀರವನ್ನು ನಮ್ಮೊಂದಿಗೆ ಸೇರಿಸಿಕೊಳ್ಳಲು ಕಾಯುತ್ತಿತ್ತು. ಈಗ ನಮ್ಮ ಪ್ರಾರ್ಥನೆ ಒಂದೆ. ಅಲ್ಲಿನ ಜನರಿಗೆ ಸುರಕ್ಷತೆ ಇರಲಿ. ಈ ನಿರ್ಧಾರ ದೇಶದ ಭವಿಷ್ಯದ ದೃಷ್ಟಿಯಿಂದ ಧನಾತ್ಮಕ ಪರಿಣಾಮವನ್ನೇ ಬೀರಲಿ" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

Anand Mahindra Reaction On Scrapping Article 370

ಭಾರತೀಯ ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದು ವಿಶೇಷ ಸ್ಥಾನಮಾನವನ್ನು ಸೋಮವಾರ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಕ್ ಅನ್ನು ಎರಡೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಈ ನಿರ್ದಧಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿತ್ತು.

English summary
Industrialist Anand Mahindra Reaction On Scrapping Article 370,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X