ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈತನನ್ನು ನಮ್ಮ ಕಂಪನಿಯ ಸಲಹೆಗಾರ ಮಾಡ್ಬೇಕು- ಆನಂದ್ ಮಹೀಂದ್ರಾ

|
Google Oneindia Kannada News

ನವ ದೆಹಲಿ, ಏಪ್ರಿಲ್ 24: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಬ್ಬ ಡ್ರೈವರ್ ವಿಡಿಯೋ ನೋಡಿದ ಮಹೀಂದ್ರಾ ಸಂಸ್ಥೆಯ ಚೇರ್ ಮನ್ ಆನಂದ್ ಮಹೀಂದ್ರಾ ಆತನನ್ನು ತಮ್ಮ ಕಂಪನಿಯ ಸಲಹೆಕಾರನಾಗಿ ಮಾಡಬೇಕು ಎಂದು ಹೇಳಿದ್ದಾರೆ.

ಕೊರೊನಾ ಭೀತಿ ಇರುವ ಕಾರಣ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾಸ್ಕ್ ಧರಿಸುವ ಬಗ್ಗೆ ಅನೇಕ ದಾರಿಗಳಲ್ಲಿ ಸರ್ಕಾರ, ಅಧಿಕಾರಿಗಳು, ಮಾಧ್ಯಮಗಳು ತಿಳಿಸುತ್ತಿವೆ. ಆದರೆ, ಕೊರೊನಾ ಮುಂಜಾಗ್ರತೆಯನ್ನು ಗಾಳಿಗೆ ತೂರಿದ ಘಟನೆಗಳು ಆಗಾಗ ನಡೆಯುತ್ತಿದೆ. ಆದರೆ, ಒಬ್ಬ ಡ್ರೈವರ್ ಈಗ ತಾನು ತೆಗೆದುಕೊಳ್ಳುತ್ತಿರುವ ಮುಂಜಾಗ್ರತೆ ಕ್ರಮದಿಂದ ಆನಂದ್ ಮಹೀಂದ್ರಾ ಮನಸ್ಸು ಗೆದ್ದಿದ್ದಾನೆ.

ಮಹೀಂದ್ರಾ ಗ್ರೂಪ್ ಕಂಪನಿ ಕಾರ್ಮಿಕರಿಗೆ ಬಾಳೆ ಎಲೆ ಊಟ ಮಹೀಂದ್ರಾ ಗ್ರೂಪ್ ಕಂಪನಿ ಕಾರ್ಮಿಕರಿಗೆ ಬಾಳೆ ಎಲೆ ಊಟ

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಚಾಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಸೂಪರ್ ಪ್ಲಾನ್ ಮಾಡಿದ್ದಾನೆ. ಆಟೋವನ್ನು ತಾನೇ ವಿನ್ಯಾಸ ಮಾಡಿದ್ದಾನೆ. ಅದನ್ನು ನಾಲ್ಕು ವಿಭಾಗಗಳಾಗಿ ಅದನ್ನು ಬೇರ್ಪಡಿಕೆ ಮಾಡಿದ್ದಾನೆ.

Anand Mahindra Impressed By The Driver Idea

ಮುಂದು ಇಬ್ಬರು, ಹಿಂದೆ ಇಬ್ಬರು, ನಾಲ್ಕು ಜನರು ಆಟೋದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದು, ನಾಲ್ಕು ಜನರಿಗೆ ಸಂಪರ್ಕ ಇರದ ರೀತಿ ತಡೆ ತಂದಿದ್ದಾನೆ. ಈತನ ಈ ಐಡಿಯಾವನ್ನು ಆನಂದ್ ಮಹೀಂದ್ರಾ ಮೆಚ್ಚಿಕೊಂಡಿದ್ದಾರೆ.

ಟ್ವಿಟ್ಟರ್ ಖಾತೆಯಲ್ಲಿ ಆತನ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ''ಹೊಸ ಪರಿಸ್ಥಿತಿಗಳಿಗೆ ವೇಗವಾಗಿ ಹೊಸತನವನ್ನು ಹೊಂದಲು ಮತ್ತು ಹೊಂದಿಕೊಳ್ಳಲು ನಮ್ಮ ಜನರ ಸಾಮರ್ಥ್ಯಗಳು ಎಂದಿಗೂ ನನ್ನನ್ನು ವಿಸ್ಮಯಗೊಳಿಸುವುದಿಲ್ಲ. R rajesh664 ನಾವು ಅವರನ್ನು ನಮ್ಮ ಆರ್&ಡಿ ಮತ್ತು ಉತ್ಪನ್ನ ಅಭಿವೃದ್ಧಿ ತಂಡಗಳಿಗೆ ಸಲಹೆಗಾರರಾಗಿ ಪಡೆಯಬೇಕಾಗಿದೆ. ಎಂದು ಟ್ವಿಟ್ಟರ್‌ನಲ್ಲಿ ಬರೆದು ಆಟೋ ಡ್ರೈವರ್‌ ಬೆನ್ನು ತಟ್ಟಿದ್ದಾರೆ.

English summary
Mahindra Group chairman Anand Mahindra impressed by the driver idea. He tweets we need to get him as an advisor to our R&D & product development teams!.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X