ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರ ಅತೀ ಹೆಚ್ಚು ಜಾಹೀರಾತು ಕೊಟ್ಟಿದ್ದು ಹಿಂದಿ ಪತ್ರಿಕೆಗಳಿಗೆ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾಹೀರಾತಿಗಾಗಿ ಖರ್ಚು ಮಾಡಿರುವ ಹಣದಲ್ಲಿ 890 ಕೋಟಿ ರೂ. ಮೌಲ್ಯದ ಹಣವನ್ನು ಕೇವಲ ಹಿಂದಿ ಪತ್ರಿಕೆಗಳಿಗೆ ನೀಡಿದ ಜಾಹೀರಾತಿಗಾಗಿ ವ್ಯಯ ಮಾಡಿದೆ ಎಂದು ಐಎಎನ್ ಎಸ್ ಹಾಕಿದ್ದ ಆರ್ ಟಿಐ(ಮಾಹಿತಿ ಹಕ್ಕು) ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ಸಿಕ್ಕ ಪ್ರತಿಕ್ರಿಯೆಯಿಂದ ತಿಳಿದುಬಂದಿದೆ.

ಇಂಗ್ಲಿಷ್ ಪತ್ರಿಕೆಗಳಿಗೆ 719 ಕೋಟಿ ರೂ. ಮೌಲ್ಯದ ಜಾಹೀರಾತುಗಳನ್ನು ನೀಡಲಾಗಿದ್ದು, ಇದು ಕಳೆದ ಐದು ವರ್ಷಗಳ ಲೆಕ್ಕಾಚಾರ ಎಂದು ಐಎನ್ ಎಸ್ ವರದಿ ಮಾಡಿದೆ. 2014 ಮೇ ತಿಂಗಳಿಂದ 2019 ರ ಮಾರ್ಚ್ ವರೆಗೆ ಕೇಮದ್ರ ಸರ್ಕಾರ ಜಾಹೀರಾತಿಗಾಗಿ ಬರೋಬ್ಬರಿ 5700 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.

ಕರ್ನಾಟಕ ಚುನಾವಣೆ: ಹರಿದಿತ್ತು ಹಣದ ಹೊಳೆಕರ್ನಾಟಕ ಚುನಾವಣೆ: ಹರಿದಿತ್ತು ಹಣದ ಹೊಳೆ

ಮೋದಿ ಆಡಳಿತದ ಮೊದಲ ಅವಧಿಯಲ್ಲಿ ಕೇವಲ ಪ್ರಚಾರದ ಉದ್ದೇಶದಿಂದ 5726 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದು ಈ ವರದಿ ತಿಳಿಸಿದೆ.

ಹಿಂದಿ ಪತ್ರಿಕೆಗಳಲ್ಲಿ ದೈನಿಕ್ ಜಾಗರಣಕ್ಕೆ ಹೆಚ್ಚಿನ ಜಾಹೀರಾತು

ಹಿಂದಿ ಪತ್ರಿಕೆಗಳಲ್ಲಿ ದೈನಿಕ್ ಜಾಗರಣಕ್ಕೆ ಹೆಚ್ಚಿನ ಜಾಹೀರಾತು

2014-15 ರಿಂದ 2018-19 ರ ಅವಧಿಯಲ್ಲಿ ದೈನಿಕ್ ಜಾಗರಣ್ ಪತ್ರಿಕೆಯೊಂದೇ 100 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಹೀರಾತುಗಳನ್ನು ಸ್ವೀಕರಿಸಿದೆ! ದೈನಿಕ್ ಭಾಸ್ಕರ್ ಪತ್ರಿಕೆ ರೂ.56 ಕೋಟಿ ಮತ್ತು 62 ಲಕ್ಷ, ಹಿಂದುಸ್ತಾನ್ ರೂ.50 ಕೋಟಿ ಮತ್ತು 66 ಲಕ್ಷ ರೂ.ಗಳ ಜಾಹೀರಾತು ಪಡೆದಿದೆ ಎಂದು ಅಂದಾಜಿಸಲಾಗಿದೆ.

ಪಂಜಾಬ್ ಕೇಸರಿಗೆ 50 ಕೋಟಿ ರೂ. ಜಾಹೀರಾತು

ಪಂಜಾಬ್ ಕೇಸರಿಗೆ 50 ಕೋಟಿ ರೂ. ಜಾಹೀರಾತು

ಪಂಜಾಬ್ ಕೇಸರಿ ರೂ.50 ಕೋಟಿ ಮತ್ತು 66 ಲಕ್ಷ, ಅಮರ್ ಉಜಾಲಾ ರೂ.47.4 ಕೋಟಿ ರೂ., ನವಭಾರತಿ ರೂ. 3.7 ಕೋಟಿ, ರಾಜಸ್ಥಾನ ಪತ್ರಿಕಾ ರೂ.27.7 ಕೋಟಿ ಮೌಲ್ಯದ ಸರ್ಕಾರಿ ಜಾಹೀರಾತುಗಳನ್ನು ಪಡೆದಿದೆ ಎಂದು ಆರ್ ಟಿಐ ವಿವರಣೆ ನೀಡಿದೆ.

ತಪ್ಪುದಾರಿಗೆ ಎಳೆಯುವ ಜಾಹೀರಾತು: ಸೆಲೆಬ್ರಿಟಿಗಳಿಗೆ ಕಂಟಕತಪ್ಪುದಾರಿಗೆ ಎಳೆಯುವ ಜಾಹೀರಾತು: ಸೆಲೆಬ್ರಿಟಿಗಳಿಗೆ ಕಂಟಕ

ಟೈಮ್ಸ್ ಆಫ್ ಇಂಡಿಯಾಕ್ಕೆ ಅತೀ ಹೆಚ್ಚಿನ ಜಾಹೀರಾತು

ಟೈಮ್ಸ್ ಆಫ್ ಇಂಡಿಯಾಕ್ಕೆ ಅತೀ ಹೆಚ್ಚಿನ ಜಾಹೀರಾತು

ಇಂಗ್ಲಿಷ್ ಭಾಷೆಯ ಪತ್ರಿಕೆಗಳ ವಿಷಯಕ್ಕೆ ಬಂದರೆ, ಟೈಮ್ಸ್ ಆಫ್ ಇಂಡಿಯಾ ಅತೀ ಹೆಚ್ಚು ಸರ್ಕಾರಿ ಜಾಹೀರಾತುಗಳನ್ನು ಪಡೆದಿದೆ. 217 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಹೀರಾತುಗಳು ಟೈಮ್ಸ್ ಆಫ್ ಇಂಡಿಯಾ ಪಾಲಾಗಿದೆ.

ಎರಡನೇ ಸ್ಥಾನ ಹಿಂದುಸ್ತಾನ್ ಟೈಮ್ಸ್ ಗೆ!

ಎರಡನೇ ಸ್ಥಾನ ಹಿಂದುಸ್ತಾನ್ ಟೈಮ್ಸ್ ಗೆ!

ಹಿಂದುಸ್ತಾನ್ ಟೈಮ್ಸ್ ರೂ.157 ಕೋಟಿ, ಮತ್ತು ಡೆಕ್ಕನ್ ಕ್ರಾನಿಕಲ್ ರೂ.40 ಕೋಟಿ ರೂ.ಗಳ ಸರ್ಕಾರಿ ಜಾಹೀರಾತು ಪಡೆದಿದೆ. 'ದಿ ಹಿಂದು' ಪತ್ರಿಕೆ ರೂ. 33.6 ಕೋಟಿ ಮತ್ತು ದಿ ಟೆಲಿಗ್ರಾಫ್ ಪತ್ರಿಕೆ ರೂ. 20.8 ಕೋಟಿ ಮೌಲ್ಯದ ಜಾಹೀರಾತುಗಳನ್ನು ಪಡೆದಿದೆ.

English summary
An RTI information said, NDA Government in 5 years spent more than Rs. 5000 crore for government ads. Highest spent for Hindu newspapers. Here are details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X